Advertisement

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

02:10 AM Nov 27, 2021 | Team Udayavani |

ಹೊಸದಿಲ್ಲಿ: ದೇಶದಲ್ಲೇ ಅತ್ಯಂತ ಬಡ ರಾಜ್ಯಗಳು ಯಾವುವು ಗೊತ್ತೇ- ಬಿಹಾರ, ಝಾರ್ಖಂಡ್‌ ಮತ್ತು ಉತ್ತರಪ್ರದೇಶ.

Advertisement

ನೀತಿ ಆಯೋಗವು ಶುಕ್ರವಾರ ಬಿಡುಗಡೆ ಮಾಡಿರುವ ತನ್ನ ಮೊದಲ “ಬಹು ಆಯಾಮದ ಬಡತನ ಸೂಚ್ಯಂಕ’ (ಎಂಪಿಐ) ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಈ ವರದಿಯ ಪ್ರಕಾರ ಬಡತನ ಸೂಚ್ಯಂಕದಲ್ಲಿ ಕರ್ನಾಟಕವು 19ನೇ ಸ್ಥಾನ ದಲ್ಲಿದ್ದು, ರಾಜ್ಯದ ಜನಸಂಖ್ಯೆಯ ಶೇ. 13.16ರಷ್ಟು ಮಂದಿ ಬಡತನದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಬಿಹಾರದಲ್ಲಿ ಅತೀ ಹೆಚ್ಚು, ಶೇ. 51.91ರಷ್ಟು ಮಂದಿ ಬಡವರಾಗಿದ್ದಾರೆ. 2ನೇ ಸ್ಥಾನದಲ್ಲಿರುವ ಝಾರ್ಖಂಡ್‌ನ‌ಲ್ಲಿ ಶೇ. 37.79 ಮಂದಿ, 3ನೇ ಸ್ಥಾನದಲ್ಲಿರುವ ಉತ್ತರಪ್ರದೇಶದ ಶೇ. 37.79 ಮಂದಿ ಬಡವರು ಎಂದು ಉಲ್ಲೇಖಿಸಲಾಗಿದೆ. ವಿಶೇಷ ವೆಂದರೆ ಅತೀ ಹೆಚ್ಚು ಅಪೌಷ್ಟಿಕತೆ ಎದುರಿಸುತ್ತಿರುವ ಜನರ ಪಟ್ಟಿ ಯಲ್ಲೂ ಬಿಹಾರ ಮೊದಲ ಸ್ಥಾನ ದಲ್ಲಿದೆ. ಶಾಲೆ, ಅಡುಗೆ ಇಂಧನ, ವಿದ್ಯುತ್‌ ವಂಚಿತರಾದವರ ಸಂಖ್ಯೆಯೂ ಬಿಹಾರದಲ್ಲೇ ಹೆಚ್ಚಿದೆ.

ಇದನ್ನೂ ಓದಿ:ಇಬ್ಬಗೆ ನೀತಿ ಬಿಡಿ; ಕಿಡಿಗೇಡಿಗಳ ಶಿಕ್ಷಿಸಿ; ಪಾಕಿಸ್ತಾನ ವಿರುದ್ಧ ಕೇಂದ್ರದ ತರಾಟೆ

ಕೊನೆಯಲ್ಲಿ ಕೇರಳ
ಬಡತನ ಪಟ್ಟಿಯ ಕೊನೆಯಲ್ಲಿ ಕೇರಳವಿದ್ದು, ಇಲ್ಲಿ ಕೇವಲ ಶೇ. 0.71 ರಷ್ಟು ಮಂದಿಗೆ ಮಾತ್ರ ಬಡತನವಿದೆ. ಗೋವಾದಲ್ಲಿ ಶೇ. 3.76 ಮಂದಿ, ಸಿಕ್ಕಿಂನ ಶೇ. 3.82, ತ.ನಾಡಿನ ಶೇ. 4.89, ಪಂಜಾಬ್‌ನ ಶೇ. 5.59 ಮಂದಿ ಬಡವರು ಎಂದು ವರದಿ ಹೇಳಿದೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next