Advertisement

17 ವರ್ಷದ ತರುಣಿಯ ಮೇಲೆ ಚಲಿಸುತ್ತಿರುವ ಬಸ್ ನಲ್ಲೇ ಗ್ಯಾಂಗ್ ರೇಪ್

04:36 PM Jun 08, 2022 | Team Udayavani |

ಪಾಟ್ನಾ : ಬಿಹಾರದಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಮಂಗಳವಾರ ಘಟನೆ ನಡೆಡಿದ್ದು, ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

Advertisement

“ಬಾಲಕಿಯು ಪಶ್ಚಿಮ ಚಂಪಾರಣ್‌ನ ಬೆಟ್ಟಿಯಾ ಎಂಬಲ್ಲಿಗೆ ತೆರಳಲು ಬಸ್‌ಗಾಗಿ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಳು. ಬಸ್ ಚಾಲಕನು ಬೆಟ್ಟಿಯಾಗೆ ಹೋಗುವುದಾಗಿ ಹೇಳಿದ್ದು, ಅವಳು ಬಸ್ ಹತ್ತಿದ ಮೇಲೆ ಮತ್ತು ಬಾರಿಸುವ ಔಷಧಿ ಕುಡಿಸಿ ಕೃತ್ಯ ಎಸಗಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಬೆಟ್ಟಿಯಾ-ಸದರ್ ) ಮುಕುಲ್ ಪಾಂಡೆ ಹೇಳಿದರು.

ಘಟನೆ ನಡೆದ ಬಳಿಕ ತರುಣಿಯನ್ನು ಬಸ್ ನೊಳಗೆ ಲಾಕ್ ಮಾಡಿ ಕಾಮುಕರು ಪರಾರಿಯಾಗಿದ್ದರು. ಆಕೆಗೆ ಪ್ರಜ್ಞೆ ಬಂದು ಕೂಗಿಕೊಂಡಾಗ ಸ್ಥಳೀಯರು ಬಾಗಿಲು ತೆರೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೃತ್ಯದಲ್ಲಿ ಭಾಗಿಯಾಗಿದ್ದ ಬಸ್ ಚಾಲಕ, ಕಂಡಕ್ಟರ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next