ಬಿಹಾರ: ರಾಷ್ಟ್ರೀಯ ಜನತಾ ದಳ (RJD) ಪಕ್ಷದ ಮಾಜಿ ರಾಜ್ಯ ಕಾರ್ಯದರ್ಶಿಯನ್ನು ಫೂರ್ನಿಯಾ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಇಂದು ಮುಂಜಾನೆ ಆರ್ ಜೆಡಿಯ ಮಾಜಿ ಕಾರ್ಯದರ್ಶಿಯಾಗಿರುವ ಶಕ್ತಿಮಲ್ಲಿಕ್ ತಮ್ಮ ನಿವಾಸದಲ್ಲಿರುವ ವೇಳೆಗೆ ಮೂವರು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈಗಾಗಲೇ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಡಿಎಸ್ ಪಿ ಆನಂದ್ ಪಾಂಡೆ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಶಕ್ತಿ ಮಲ್ಲಿಕ್ ಪತ್ನಿ ಖುಶ್ಬೂ ದೇವಿ, “ಇಂದು ಮುಂಜಾನೆ ತನ್ನ ಪತಿ ಮಕ್ಕಳಿಗೆ ಮನೆಯ ಅಂಗಳದಲ್ಲಿ ತಿಂಡಿ ತಿನ್ನಿಸುತ್ತಿದ್ದರು. ಈ ವೇಳೆ ಏಕಾಏಕಿ ನುಗ್ಗಿದ ಮೂವರು ಮಾಸ್ಕ್ ಧರಿಸಿದ ಆಗಂತುಕರು ಗುಂಡು ಹಾರಿಸಿದ್ದಾರೆ. ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಗುಂಡು ತಗುಲಿದ ಪರಿಣಾಮ ಶಕ್ತಿ ಮಲ್ಲಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ” ಎಂದು ತಿಳಿಸಿದ್ದಾರೆ,
ಮುಂಬರುವ ಬಿಹಾರ ಚುನಾವಣೆಯಲ್ಲಿ ಶಕ್ತಿ ಮಲ್ಲಿಕ್ ಅವರ ಅನೇಕ ರಾಜಕೀಯ ವಿರೋಧಿಗಳು ಸ್ಪರ್ಧಿಸುತ್ತಿದ್ದಾರೆ ಎಂದು ಖುಶ್ಬೂ ದೇವಿ ಇದೆ ವೇಳೆ ತಿಳಿಸಿದ್ದಾರೆ.
Related Articles
ಇದನ್ನೂ ಓದಿ: CBI ತನಿಖೆಗೆ ವಿರೋಧ ವ್ಯಕ್ತಪಡಿಸಿದ ಹತ್ರಾಸ್ ಸಂತ್ರಸ್ತೆಯ ಕುಟುಂಬ: ಸ್ಥಳಕ್ಕೆ SIT ಭೇಟಿ !
ಇತ್ತೀಚಿಗಷ್ಟೇ ತೇಜಶ್ವಿ ಯಾದವ್ ಅವರು ಜಾತಿ ನಿಂದನೆ ಮಾಡಿದ್ದಾರೆ ಮತ್ತು ಚುನಾವಣಾ ಟಿಕೆಟ್ ಗಾಗಿ 50 ಲಕ್ಷ ಕೇಳಿದ್ದಾರೆ ಎಂದು ಶಕ್ತಿ ಮಲಿಕ್ ಆರೋಪಿಸಿದ್ದರು. ತೇಜಶ್ವಿ ಯಾದವ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
5 ದಿನಗಳ ಹಿಂದೆಯೂ ಬಿಜೆಪಿ ಜಯಂತ್ ಮಂಡಲ್ ಉಪಾಧ್ಯಕ್ಷರಾಗಿರುವ ರಾಜೇಶ್ ಕುಮಾರ್ ಝಾ ಅವರನ್ನೂ ಕೂಡ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಎರಡೂ ಘಟನೆಗಳು ಕೂಡ ಬಿಹಾರ ಚುನಾವನೆ ಸನಿಹದಲ್ಲಿರುವಾಗಲೇ ನಡೆದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಸೀಟು ಹಂಚಿಕೆಯಲ್ಲಿ 50-50 ಸೂತ್ರ ಅನುಸರಿಸಿದ ಜೆಡಿಯು-ಬಿಜೆಪಿ: ವರದಿ