Advertisement

ಬಿಹಾರ ಕೃಷಿ ಸಚಿವ ಸುಧಾಕರ್‌ ಸಿಂಗ್‌ ರಾಜೀನಾಮೆ

07:08 PM Oct 02, 2022 | Team Udayavani |

ಪಾಟ್ನಾ: ಇತ್ತೀಚೆಗೆ ತಮ್ಮ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದ ಬಿಹಾರದ ಕೃಷಿ ಸಚಿವ ಸುಧಾಕರ್‌ ಸಿಂಗ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Advertisement

ಈ ವಿಚಾರವನ್ನು ಸುಧಾಕರ್‌ ಅವರ ತಂದೆ ಹಾಗೂ ಬಿಹಾರ ರಾಷ್ಟ್ರೀಯ ಜನತಾದಳದ ಮುಖ್ಯಸ್ಥರಾಗಿರುವ ಜಗ್ಧಾನಂದ ಸಿಂಗ್‌ ತಿಳಿಸಿದ್ದಾರೆ.

“ಬಿಹಾರ ಸರ್ಕಾರದ “ಕೃಷಿ ರೋಡ್‌ ಮ್ಯಾಪ್‌ 2022 ಸರಿಯಿಲ್ಲ. ಇದನ್ನು ನಾನು ಜಾರಿಗೆ ತರಲಾಗುವುದಿಲ್ಲ. ಬೇಕಿದ್ದರೆ ಸರ್ಕಾರ ಇದಕ್ಕೆಂದೇ ಹೊಸ ಇಲಾಖೆಯನ್ನು ಮಾಡಿಕೊಳ್ಳಲಿ’ ಎಂದು ಸುಧಾಕರ್‌ ಇತ್ತೀಚೆಗೆ ಹೇಳಿದ್ದರು.

ಇಲಾಖೆಯಲ್ಲಿ ಭ್ರಷ್ಟಾಚಾರ ಆಗುತ್ತಿದ್ದು, ಹಾದಿ ತಪ್ಪುತ್ತಿದೆ ಎಂದೂ ಅವರು ಹೇಳಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next