Advertisement

ನಿಮ್ಮ ಕಾರಿನ ಗೇರ್ ಬಾಕ್ಸ್ ರಕ್ಷಣೆ ಹೇಗೆ?

03:51 PM Jan 10, 2021 | Team Udayavani |

ನವದೆಹಲಿ: ತಂತ್ರಜ್ಞಾನ ಕ್ಷೇತ್ರದ ಶರವೇಗದ ಬೆಳವಣಿಗೆಯ ನಡುವೆ ಕಾರುಗಳ ತಂತ್ರಜ್ಞಾನದಲ್ಲಿಯೂ ಬಹುದೊಡ್ಡ ಬದಲಾವಣೆಗಳಾಗಿವೆ. ಹಲವಾರು ಕಂಪನಿಯ ಕಾರುಗಳು  ಸ್ವಯಂಚಾಲಿತ ವ್ಯವಸ್ಥೆಯನ್ನು  ಅಳವಡಿಸಿಕೊಂಡಿದೆ. ಆದರೂ ಈ ನಡುವೆ ಬಹಳಷ್ಟು ಕಾರುಗಳಲ್ಲಿ ಗೇರ್ ಸಿಸ್ಟಮ್ ಇದ್ದು ಅಂತಹ ಕಾರುಗಳಲ್ಲಿ ಗೇರ್ ಚೇಂಜ್ ಮಾಡುವಾಗ ಕೆಲವು ಮುಂಜಾಗೃತೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ಕಾರಿನ ಗೇರ್ ಬಾಕ್ಸ್ ಹಾಳಾಗುವ ಸಾಧ್ಯತೆ ಹೆಚ್ಚು.

Advertisement

ಕಾರಿನ ಗೇರ್ ಬಾಕ್ಸ್ ಹಾಳಾಗದಂತೆ ತಡೆಯುವುದು ಹೇಗೆ?

  1. ಸರಿಯಾಗಿ ಕ್ಲಚ್ ಬಳಸುವುದು

ಕಾರುಗಳನ್ನು ಚಲಾಯಿಸುವಾಗ ಅಗತ್ಯಕ್ಕೆ ತಕ್ಕಂತೆ ಗೇರ್ ಗಳನ್ನು ಬದಲಿಸಬೇಕಾಗುತ್ತದೆ . ಅಂತಹ ಸಮಯದಲ್ಲಿ ಸಂಪೂರ್ಣವಾಗಿ ಕ್ಲಚ್ ಅನ್ನು ಬಳಸಬೇಕು. ಹಲವಾರು ಜನರು ಸಂಪೂರ್ಣವಾಗಿ ಕ್ಲಚ್ ಅನ್ನು ಬಳಸದೆ ಹಾಫ್ ಕ್ಲಚ್ ಬಳಸುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಕಾರಿನ ಗೇರ್ ಬಾಕ್ಸ್ ಗೆ ತೊಂದರೆಯಾಗುತ್ತದೆ. ಆದ್ದರಿಂದ ಗೇರ್ ಬದಲಿಸುವಾಗ ಸಂಪೂರ್ಣ ಕ್ಲಚ್ ಬಳಸಿ.

ಇನ್ನೂ ಕೆಲವರು ಕಾರು ಚಲಾಯಿಸುವಾದ ತಮ್ಮ ಕಾಲನ್ನು ಕ್ಲಚ್ ಮೇಲೆ ಇರಿಸಿಕೊಂಡಿರುತ್ತಾರೆ. ಇದರಿಂದ ಕೂಡಾ ಕಾರಿನ ಕ್ಲಚ್ ಪ್ಲೇಟಿಗೆ ತೊಂದರೆಯಾಗುವ ಸಾದ್ಯತೆಗಳಿವೆ ಎಚ್ಚರ.

2) ಗೇರ್ ಲಿವರ್ ಮೇಲೆ ಕೈ ಇಡುವುನ್ನು ನಿಲ್ಲಿಸಿ

Advertisement

ಹಲವು ಜನರಿಗೆ ತಾವು ಕಾರು ಚಲಾಯಿಸುವಾಗ ಒಂದು ಕೈಯನ್ನು ಗೇರ್ ಲಿವರ್ ಮೇಲೆ ಇಟ್ಟುಕೊಂಡಿರುವ  ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ಕಾರಿನ ಗೇರ್ ಲಿವರ್ ನಲ್ಲಿರುವ ಬೇರಿಂಗ್ ಗೆ ಹೊಡೆತಬೀಳುವ ಸಾಧ್ಯತೆಗಳಿವೆ. ಹಾಗಾಗಿ ಕಾರು ಚಲಾಯಿಸುವಾಗ ನಿಮ್ಮ ಕೈಯನ್ನು ಗೇರ್ ಲಿವರ್ ನ ಮೇಲಿಡಬೇಡಿ.

ಇದನ್ನೂ ಓದಿ:‘ರಾಬರ್ಟ್’ ಎಂಟ್ರಿಗೆ ಡೇಟ್ ಫಿಕ್ಸ್

3) ಸರಿಯಾಗಿ ಗೇರ್ ಚೇಂಜ್ ಮಾಡುವುದು ಉತ್ತಮ

ಕಾರು ಚಲಾಯಿಸುವಾಗ ಹಲವರು ಮೊದಲನೆ ಗೇರಿನಿಂದ ನೇರವಾಗಿ ಮೂರು ಅಥವಾ ನಾಲ್ಕನೇ  ಗೇರ್ ಬದಲಾಯಿಸುತ್ತಾರೆ. ಇನ್ನು ಕೆಲವರು ನಾಲ್ಕನೆ ಗೇರಿನಿಂದ ಒಮ್ಮೆಲೆ ಮೊದಲನೆ ಗೇರಿಗೆ ಬದಲಾಯಿಸುತ್ತಾರೆ. ಹೀಗೆ ಮಾಡುವುದರಿಂದ ಗೇರ್ ಬಾಕ್ಸ್ ಸಂಪೂರ್ಣ ಹಾಳಾಗುವ ಸಾದ್ಯತೆಗಳಿರುತ್ತವೆ. ಸಾಮಾನ್ಯವಾಗಿ ಇಳಿಜಾರುಗಳು ಇರುವಾಗ ಹಲವರು ಈ ರೀತಿಯಾಗಿ ಗೇರ್ ಬದಲಾಯಿಸುತ್ತಾರೆ. ಈ ರೀತಿ ಮಾಡುವ ಅಭ್ಯಾಸವನ್ನು ಬಿಡುವುದು ಉತ್ತಮ.

4) ಕಾರು ಚಲನೆಯಲ್ಲಿರುವಾಗ ರಿವರ್ಸ್ ಗೇರಿಗೆ ಹಾಕದಿರುವುದು

ಹಲವಾರು ಜನರು ಕಾರು ಮುಂದೆ ಚಲಿಸುತ್ತಿರುವಾಗಲೇ ಒಮ್ಮೆಲೆ ರಿವರ್ಸ್ ಗೇರಿಗೆ ಬದಲಾಯಿಸಿಬಿಡುತ್ತಾರೆ. ಹೀಗೆ ಮಾಡುವುದರಿಂದಾಗಿ ಕಾರಿನ ಗೇರ್ ಬಾಕ್ಸ್ ಸಂಪೂರ್ಣ ಹಾಳಾಗುವ ಸಾಧ್ಯತೆಗಳಿವೆ.

ಗೇರ್ ಬಾಕ್ಸ್ ಗಳ ಸುರಕ್ಷತೆಗೆ ಸಂಬಂಧಿಸಿರುವ ಈ ತಪ್ಪುಗಳನ್ನು ಇತರೇ ವಾಹನಗಳಲ್ಲಿಯೂ ಹಲವರು ಮಾಡುತ್ತಾರೆ. ಈ ತಪ್ಪುಗಳನ್ನು ಮಾಡುವುದರಿಂದ  ಇತರ ವಾಹನಗಳ ಗೇರ್ ಬಾಕ್ಸ್ ನಲ್ಲಿಯೂ ಸಮಸ್ಯೆ ಕಂಡುಬರಬಹುದು.

ಇದನ್ನೂ ಓದಿ:ಬಾಗಿಲು ತೆರೆದ ಕೇದಾರನಾಥ-ಬಾದಾಮಿ ಶುಗರ್ಸ್‌: ದಶಕದಿಂದ ಸ್ತಬ್ಧಗೊಂಡ ಕಾರ್ಖಾನೆಗಳಿಗೆ ಮರುಜೀವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next