Advertisement

ಸೌದಿ ಕಂಪನಿ ಜತೆ ರಿಲಯನ್ಸ್ ಒಪ್ಪಂದ; ಅತೀ ದೊಡ್ಡ ವಿದೇಶಿ ಬಂಡವಾಳ ಹೂಡಿಕೆ

09:20 AM Aug 13, 2019 | Nagendra Trasi |

ಮುಂಬೈ:ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್  ತನ್ನ ತೈಲ, ರಾಸಾಯನಿಕ ಉದ್ದಿಮೆಯಲ್ಲಿ ಶೇ.20ರಷ್ಟು ಷೇರುಗಳನ್ನು ಸೌದಿಯ ಅರಾಮ್ಕೋಗೆ 1.06 ಲಕ್ಷ ಕೋಟಿಗೆ ಮಾರಾಟ ಮಾಡಿದ್ದು, ಇದು ರಿಲಯನ್ಸ್ ಇತಿಹಾಸದಲ್ಲಿಯೇ ಅತಿದೊಡ್ಡ ವಿದೇಶಿ ಬಂಡವಾಳ ಹೂಡಿಕೆಯಾಗಿದೆ ಎಂದು ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಸೋಮವಾರ ತಿಳಿಸಿದ್ದಾರೆ.

Advertisement

ಇದು ರಿಲಯನ್ಸ್ ಕಂಪನಿ ಇತಿಹಾಸದಲ್ಲಿಯೇ ಅತೀ ದೊಡ್ಡ ವಿದೇಶಿ ಹೂಡಿಕೆಯಾಗಿದೆ ಎಂದು ಮುಂಬೈಯಲ್ಲಿ ನಡೆದ ಕಂಪನಿಯ ವಾರ್ಷಿಕ ಸಭೆಯಲ್ಲಿ ಅಂಬಾನಿ ಘೋಷಿಸಿರುವುದಾಗಿ ವರದಿ ಹೇಳಿದೆ.

ಇದನ್ನೂ ಓದಿ: ಬಂಪರ್ ಆಫರ್; HD/4K ಟೆಲಿವಿಷನ್ ಸೆಟ್, 4K ಸೆಟ್ ಟಾಪ್ ಬಾಕ್ಸ್ ಉಚಿತ

ವಿಶ್ವದ ಅತೀ ದೊಡ್ಡ ತೈಲ ಉತ್ಪಾದನಾ ಕಂಪನಿಯಾಗಿರುವ ಸೌದಿ ಅರಾಮ್ಕೋ ಜತೆ ರಿಲಯನ್ಸ್ ಇಂಡಸ್ಟ್ರೀಸ್ 75 ಬಿಲಿಯನ್ ಡಾಲರ್ (5.3 ಲಕ್ಷ ಕೋಟಿ) ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದ ಜಾಮ್ ನಗರದಲ್ಲಿರುವ ರಿಲಯನ್ಸ್ ರಿಫೈನರಿಗೆ ಪ್ರತಿದಿನ 5 ಲಕ್ಷ ಬ್ಯಾರೆಲ್ ಗಳಷ್ಟು ಕಚ್ಛಾ ತೈಲವನ್ನು ಸೌದಿ ಅರಾಮ್ಕೋ ಸರಬರಾಜು ಮಾಡಲಿದೆ ಎಂದು ಅಂಬಾನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next