Advertisement

ಬಿಗ್‌ ಬಾಸ್‌ಗೆ ಕಮಲ್‌ ಹಾಸನ್‌ ಗುಡ್‌ ಬೈ?

07:20 PM Dec 22, 2022 | Team Udayavani |

ಚೆನ್ನೈ: ಬಿಗ್‌ ಬಾಸ್‌ ತಮಿಳು ಶೋ ಹೋಸ್ಟ್‌ ಆಗಿರುವ ಖ್ಯಾತ ನಟ ಕಮಲ್‌ ಹಾಸನ್‌ ಅವರು ಶೋದಿಂದ ಹೊರಬರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

2023ರ ಜನವರಿಯಲ್ಲಿ ಬಿಗ್‌ ಬಾಸ್‌ ತಮಿಳು ಗ್ರ್ಯಾಂಡ್‌ ಫಿನಾಲೆ ನಡೆಯಲಿದ್ದು, ಇದರ ನಂತರ ಅವರು ಬಿಗ್‌ ಬಾಸ್‌ಗೆ ವಿದಾಯ ಹೇಳುತ್ತಿದ್ದಾರೆ. ಸೀಸನ್‌ 7ರಲ್ಲಿ ಕೂಡ ಮುಂದುವರಿಯುವಂತೆ ಅವರನ್ನು ನಿರ್ಮಾಪಕರು ಕೇಳಿದ್ದರು. ಆದರೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿರುವುದರಿಂದ ಈ ಆಫ‌ರ್‌ ಅನ್ನು ಕಮಲ್‌ ಹಾಸನ್‌ ನಿರಾಕರಿಸಿದ್ದಾರೆ.

ಹೋಸ್ಟ್‌ ಆಗಿರುವುದರಿಂದ ತಮಗೆ ಏಕತಾನತೆ ಕಾಡಿದ್ದು, ಜತೆಗೆ ಶೋ ಟಿಆರ್‌ಪಿ ಕೂಡ ಕುಸಿದಿರುವುದು ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next