Advertisement
ಎರಡು ಮೂರು ಸ್ಪರ್ಧಿಗಳ ಹೆಸರನ್ನು ನಾಮಿನೇಟ್ ಮಾಡಿದ್ದಾರೆ. ಯಾವ ಸ್ಪರ್ಧಿಗಳಿಗೆ ಕೊಟ್ಟಿರುವ ಕಾರಣ ಸೂಕ್ತವಾಗಿಲ್ಲವೆಂದು ಅನ್ನಿಸಿದರೆ ಅಂಥ ಸ್ಪರ್ಧಿಗಳನ್ನು ಶೋಭಾ, ರಜತ್ ಸೇಫ್ ಮಾಡಿದ್ದಾರೆ.
ಚೈತ್ರಾ ನಿಮ್ಮನ್ನು ಇನ್ಮುಂದೆ ನಂಬುವ ಮಾತೇ ಇಲ್ಲ. ನಿಮ್ಮನ್ನು ತುಂಬಾ ಇಷ್ಟಪಟ್ಟಿದ್ದೆ ಎಂದು ಶಿಶಿರ್ ಅವರು ಕಾರಣ ಕೊಟ್ಟು ನಾಮಿನೇಟ್ ಮಾಡಿದ್ದಾರೆ. ಇದಲ್ಲದೆ ಮಂಜು ಹಾಗೂ ಧನರಾಜ್ ಅವರ ಹೆಸರನ್ನು ಶಿಶಿರ್ ಹೇಳಿದ್ದಾರೆ.ರಜತ್, ಶೋಭಾ ಅವರು ಇದರಲ್ಲಿ ಧನರಾಜ್ ಅವರನ್ನು ಸೇಫ್ ಮಾಡಿದ್ದಾರೆ.
Related Articles
Advertisement
ಉಸ್ತುವಾರಿ ಆಗಿದ್ದಾಗ ಕರೆಕ್ಟಾಗಿ ಆಗಬೇಕು. ಇನ್ನೊಬ್ಬರನ್ನು ತುಳಿದು ಬದುಕಬಾರದು. ಕರ್ಮ ವಾಪಾಸು ಬರುತ್ತದೆ ಎಂದು ಮಂಜು ಅವರು ತ್ರಿವಿಕ್ರಮ್ ಗೆ ಹೇಳಿದ್ದಾರೆ.
ಮೋಕ್ಷಿತಾ ಅವರು ಧನರಾಜ್ ಅವರಿಗೆ ಕಳಪೆ ಕೊಟ್ಟದ್ದು ಇಷ್ಟ ಆಗಿಲ್ಲವೆಂದು ಹೇಳಿದ್ದಾರೆ.
ತ್ರಿವಿಕ್ರಮ್ ಅವರು ಮಂಜು ಮಾತಿಗೆ ಗರಂ ಆಗಿದ್ದಾರೆ. ನಾನು ಮಾತು ಕೊಟ್ಟದ್ದು ಗೇಮ್ ಅಲ್ಲಿ ಆಡುತ್ತೇನೆ ಅಂಥ. ವಾಯ್ಸ್ ಜೋರು ಮಾಡಿ ಮಾತನಾಡೋಕೆ ನಮಗೂ ಬರುತ್ತದೆ ಎಂದಿದ್ದಾರೆ.
ಹನುಮಂತು ಅವರು ಐಶ್ವರ್ಯಾ, ಧರ್ಮ , ಚೈತ್ರಾ ಅವರ ಹೆಸರನ್ನು ಹೇಳಿದ್ದಾರೆ.
ಧರ್ಮ, ಐಶ್ವರ್ಯಾ ಹೋದವಾರ ಆಡಿದ ಚೆನ್ನಾಗಿತ್ತು. ಆ ಬಳಿಕ ಅವರ ಆಟದ ಶೈಲಿ ಇಳಿಯುತ್ತಾ ಹೋಯಿತು ಎಂದು ಕಾರಣವನ್ನು ಹೇಳಿದ್ದಾರೆ.
ಇದಕ್ಕೆ ಐಶ್ವರ್ಯಾ ಅವರು ನಾವು ಆಸಕ್ತಿಯಿಂದ ಆಡಿದ್ದೇವೆ, ಎಫೆಕ್ಟ್ ಹಾಕಿದ್ದೇವೆ ಎಂದು ಐಶ್ವರ್ಯಾ ಸ್ಪಷ್ಟನೆ ನೀಡಿದ್ದಾರೆ.
ಸುರೇಶ್ ಅವರು ಮಂಜು, ಚೈತ್ರಾ,ಗೌತಮಿ ಅವರ ಹೆಸರನ್ನು ನಾಮಿನೇಟ್ ಮಾಡಿದ್ದಾರೆ.
ಮನೆಯ ಕ್ಯಾಪ್ಟನ್ ಭವ್ಯ ಅವರು ಹನುಮಂತು ಅವರನ್ನು ನಾಮಿನೇಟ್ ಮಾಡಿದ್ದಾರೆ. ಎಲ್ಲರ ಜತೆ ಮಾತನಾಡಲ್ಲ. ನನ್ನದು ಬಂದಾಗ ನಾನು ಹೇಳ್ತೇನೆ, ನಿಮ್ಮದು ಬಂದಾಗ ನೀವು ಹೇಳ್ತೀನಿ ಹೇಳ್ತಾರೆ. ಅದು ಅವರು ಈ ಮನೆಯಲ್ಲಿ ಉಳಿಯೋಕೆ ಕಷ್ಟವಾಗುತ್ತದೆ ಎಂದಿದ್ದಾರೆ.
ನಾಮಿನೇಟ್ ಆದವರು ಯಾರೆಲ್ಲ..?ಚೈತ್ರಾ, ಮಂಜು, ತ್ರಿವಿಕ್ರಮ್, ಗೌತಮಿ ,ಮೋಕ್ಷಿತಾ ಕೊನೆಯದಾಗಿ ಹನುಮಂತು ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ. ನೀವು ಬುದ್ದಿ ತೋರಿಸುತ್ತೀರಿ ಮಂಜಣ್ಣ. ನೀವು ನಿಮ್ಮದೇ ಅಂಥ ಮಾಡ್ತೀರಿ. ನಿಮ್ಮ ಜತೆ ನಿಂತು ವಾದ ಮಾಡೋಕ್ಕೂ ಇಷ್ಟವಿಲ್ಲವೆಂದು ಮೋಕ್ಷಿತಾ ಒಬ್ಬರೇ ಕೂತು ಮಾತನಾಡಿದ್ದಾರೆ. ಶೋಭಾ – ಮಂಜು ನಡುವೆ ವಾಗ್ವಾದ:
ವಾರದ ಟಾಸ್ಕ್ ಗಾಗಿ ಎರಡು ತಂಡ ರಚನೆ ಮಾಡಲಾಗಿದೆ. ಈ ಪೈಕಿ ಶೋಭಾ, ರಜತ್ ಅವರನ್ನು ಮತ್ತೊಂದು ತಂಡದ ನಾಯಕನಾಗಿ ಮಾಡುವ ಅವಕಾಶವನ್ನು ಬಿಗ್ ಬಾಸ್ ಮನೆಗೆ ನೀಡಲಾಗಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಂದಿರುವ ಶೋಭಾ ಹಾಗೂ ರಜತ್ ಅವರ ಪೈಕಿ ತಂಡದ ನಾಯಕರಾಗಲು ಯಾರು ಅರ್ಹ ಹಾಗೂ ಅನರ್ಹರು ಎನ್ನುವ ಆಯ್ಕೆಯನ್ನು ಮಾಡಲು ಇತರೆ ಸ್ಪರ್ಧಿಗಳಿಗೆ ಬಿಗ್ ಬಾಸ್ ಅವಕಾಶ ನೀಡಿದ್ದಾರೆ. ಈ ವಿಚಾರದಲ್ಲಿ ಮಂಜು ಹಾಗೂ ಶೋಭಾ ನಡುವೆ ಮಾತಿನ ಯುದ್ಧವೇ ನಡೆದಿದೆ. ಮನೆಯ ನೀತಿ ನಿಯಮಗಳನ್ನು ಅಲ್ಲಾಡಿಸಿದ್ದು ಶೋಭಾ ಅವರು ಅಂಥ ನನಗೆ ಅನ್ನಿಸುತ್ತದೆ ಎಂದು ಮಂಜು ಹೇಳಿದ್ದಾರೆ. ಇದಕ್ಕೆ ಗರಂ ಆದ ಶೋಭಾ ಅಲ್ಲಾಡಿಸುವುದಕ್ಕೆ ಗಿಲ್ಲಾಡಿಸುವುದ್ದಕ್ಕೆ ವಾಟ್. ನಿಮಗೆ ಕ್ಲಾರಿಟಿಯೇ ಇಲ್ಲ. ನಾನ್ ಸೆನ್ಸ್ ರೀಸನ್ ಕೊಡುತ್ತಿದ್ದೀರಿ ಎಂದಿದ್ದಾರೆ. ಮಂಜು ಕಿರುಚಬೇಡಿ ರೀ ಇಲ್ಲೇ ಇದ್ದೀನಿ. ಕ್ಲಾರಿಟಿಯೇ ಹೇಳ್ತಾ ಇರೋದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ. ಕೇಳಿಸಿಕೊಳ್ಳಿ ರೆಸ್ಪೆಕ್ಟ್ ಕಳೆದುಕೊಳ್ಳಬೇಡಿ ಎಂದು ಆಕ್ರೋಶದ ಧ್ವನಿಯಲ್ಲೇ ಶೋಭಾ ಮಂಜು ಮೇಲೆ ರೇಗಾಡಿದ್ದಾರೆ ನಿಮಗೂ ಮಾತನಾಡೋಕೆ ಅರ್ಹತೆ ಇರೋದು ಅಲ್ಲ. ನಮಗೂ ಬರುತ್ತೆ ಎಂದು ಮಂಜು ಹೇಳಿದ್ದಾರೆ. ಇದರಲ್ಲಿ ಬಹುತೇಕರು ಶೋಭಾ ಅವರ ಹೆಸರು ಅರ್ಹರೆಂದು ಹೇಳಿದ್ದು, ಅವರು ಮತ್ತೊಂದು ತಂಡದ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.