Advertisement

Bigg Boss Kannada: ಬಿಗ್‌ಬಾಸ್‌ ಮನೆಗೆ ಚಾರ್ಲಿ ಯಾಕೆ ಹೋಗಿಲ್ಲ?

09:20 AM Oct 16, 2023 | Team Udayavani |

ರಕ್ಷಿತ್‌ ಶೆಟ್ಟಿ ಅಭಿನಯದ “ಚಾರ್ಲಿ 777′ ಸಿನಿಮಾದ ಮೂಲಕ ಜನಪ್ರಿಯವಾಗಿದ್ದ, “ಚಾರ್ಲಿ’ ಎಂಬ ಶ್ವಾನ ಕೂಡ ಇತ್ತೀಚೆಗಷ್ಟೇ ಶುರುವಾಗಿರುವ ಕನ್ನಡ ಬಿಗ್‌ಬಾಸ್‌ ರಿಯಾಲಿಟಿ ಶೋದಲ್ಲಿ ಬಿಗ್‌ಬಾಸ್‌ ಮನೆಯೊಳಗೆ ಹೋಗಲಿದೆ ಎನ್ನಲಾಗಿತ್ತು. ಆದರೆ ಬಿಗ್‌ಬಾಸ್‌ ಮೊದಲ ದಿನ ಎಲ್ಲ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿಯಾಗಿದ್ದರೂ, “ಚಾರ್ಲಿ’ ಮಾತ್ರ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೂ “ಚಾರ್ಲಿ’ ಬಿಗ್‌ಬಾಸ್‌ ಮನೆಯೊಳಗೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಅನೇಕರಿದ್ದಾರೆ. ಇದೀಗ ಬಿಗ್‌ಬಾಸ್‌ ಮನೆಯೊಳಗೆ “ಚಾರ್ಲಿ’ ಬರುತ್ತದೆಯಾ? ಇಲ್ಲವಾ? ಎಂಬುದಕ್ಕೆ ಉತ್ತರ ಸಿಕ್ಕದೆ.

Advertisement

ಮೂಲಗಳ ಪ್ರಕಾರ “ಚಾರ್ಲಿ’ಯನ್ನು ಬಿಗ್‌ಬಾಸ್‌ ಮನೆಯೊಳಗೆ ಕಳುಹಿಸುವ ಬಗ್ಗೆ ಎಲ್ಲಾ ತಯಾರಿ ನಡೆಸಲಾಗುತ್ತಿದೆ. ಆದರೆ ಅನಿಮಲ್‌ ವೆಲ್‌ಫೇರ್‌ ಬೋರ್ಡ್‌ ಆಫ್ ಇಂಡಿಯಾ ಕಡೆಯಿಂದ “ಚಾರ್ಲಿ’ಯನ್ನು ಬಿಗ್‌ಬಾಸ್‌ ರಿಯಾಲಿಟಿ ಶೋ ಗೆ ಕಳುಹಿಸಲು ಇನ್ನು ಅನುಮತಿ ಸಿಕ್ಕಿಲ್ಲ. ಈಗಾಗಲೇ ಪತ್ರ ಮತ್ತು ಇ-ಮೇಲ್‌ ಮೂಲಕ ಅನಿಮಲ್‌ ವೆಲ್‌ಫೇರ್‌ ಬೋರ್ಡ್‌ ನೀಡುವ ಪ್ರಕ್ರಿಯೆ ಕೂಡ ಅನಿಮಲ್‌ ವೆಲ್‌ಫೇರ್‌ ಬೋರ್ಡ್‌ ಕಡೆಯಿಂದ ನಡೆಯುತ್ತಿದೆ.

ಶೀಘ್ರದಲ್ಲಿಯೇ ಅನುಮತಿ ಸಿಗುವ ನಿರೀಕ್ಷೆಯಿದ್ದು, ಆದಷ್ಟು ಬೇಗ “ಚಾರ್ಲಿ’ ಬಿಗ್‌ಬಾಸ್‌ ಮನೆ ಪ್ರವೇಶಿಸುತ್ತದೆ ಎಂಬುದು ಮೂಲಗಳ ಮಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next