Advertisement

ಬಿಗ್ ಬಾಸ್ 13ನೇ ಸೀಸನ್ ವಿಜೇತ, ನಟ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನ

12:23 PM Sep 02, 2021 | Team Udayavani |

ನವದೆಹಲಿ: ಟೆಲಿವಿಷನ್ ನಟ, ಹಿಂದಿಯ ಬಿಗ್ ಬಾಸ್ 13ನೇ ಆವೃತ್ತಿಯ ವಿಜೇತ ಸಿದ್ದಾರ್ಥ್ ಶುಕ್ಲಾ (40ವರ್ಷ) ಗುರುವಾರ (ಸೆ.02) ಹೃದಯಾಘಾತದಿಂದ ನಿಧನರಾಗಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಮೋದಿ ಸರ್ಕಾರವು ಬಂಡವಾಳಶಾಯಿ ಕೈಗೊಂಬೆ: ಸಿದ್ದರಾಮಯ್ಯ ಆರೋಪ

ಟೆಲಿವಿಷನ್ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದ ಸಿದ್ದಾರ್ಥ್, ಬಾಲಿಕಾ ವಧು ಧಾರಾವಾಹಿ ಮೂಲಕ ಲಕ್ಷಾಂತರ ಜನರ ಮನ ಗೆದ್ದಿದ್ದರು. ತೀವ್ರ ಹೃದಯಾಘಾತದಿಂದ ಸಿದ್ಧಾರ್ಥ್ ಇಂದು ಬೆಳಗ್ಗೆ ಕೂಪರ್ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ಪಿಟಿಐ ವರದಿ ಮಾಡಿದೆ.

ಸಿದ್ದಾರ್ಥ್ ಶುಕ್ಲಾ ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಸಿದ್ದಾರ್ಥ್ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಸಾವನ್ನಪ್ಪಿರುವುದಾಗಿ ಕೂಪರ್ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಶುಕ್ಲಾ ಅವರು ಶೋಬಿಜ್ ನಲ್ಲಿ ರೂಪದರ್ಶಿಯಾಗಿ ವೃತ್ತಿಜೀವನ ಆರಂಭಿಸಿದ್ದರು. ಬಳಿಕ ಬಬುಲ್ ಕಾ ಆಂಗನ್ ಚೂಟೇ ನಾ ಟಿವಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ನಂತರ ಜಾನೇ ಪೆಹಜಾನೇ ಸೆ ಯೇ ಅಜ್ನನಬಿ, ಲವ್ ಯೂ ಜಿಂದಗಿ ಧಾರವಾಹಿಯಲ್ಲಿ ನಟಿಸಿದ್ದರೂ ಕೂಡಾ ಬಾಲಿಕಾ ವಧು ಮೂಲಕ ಸಿದ್ದಾರ್ಥ್ ಜನಪ್ರಿಯರಾಗಿದ್ದರು.

Advertisement

ಝಲಕ್ ದಿಖ್ಲಾ ಜಾ 6, ಫಿಯರ್ ಫ್ಯಾಕ್ಟರ್; ಖತ್ರೋನ್ ಕೆ ಕಿಲಾಡಿ 7 ಹಾಗೂ ಬಿಗ್ ಬಾಸ್ 13 ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅಲ್ಲದೇ ಬಿಗ್ ಬಾಸ್ 13ನೇ ಸೀಸನ್ ನಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next