Advertisement

Modi, ಶಾ ಪ್ರಚಾರ ಮಾಡಿದ ಸ್ಥಳಗಳಲ್ಲಿ ಬಿಜೆಪಿಗೆ ಭರ್ಜರಿ ಜಯ

08:23 PM Jun 04, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಚಾರ ಮಾಡಿದ ಸ್ಥಳಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದು, ಬಹುತೇಕ ಕಡೆಗಳಲ್ಲಿ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಲಭಿಸಿದೆ.

Advertisement

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಮಿತ್‌ ಶಾ ನಡೆಸಿದ ರೋಡ್‌ ಶೋ ಭಾರೀ ಚರ್ಚೆಗೆ ಕಾರಣವಾಗಿತ್ತು. ಇಲ್ಲಿ 2 ಲಕ್ಷಕ್ಕೂ ಹೆಚ್ಚು ಅಂತರದಿಂದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್‌ ಗೆಲುವು ಸಾಧಿಸಿದ್ದಾರೆ. ಆದರೆ ಪ್ರಧಾನಿ ಮೋದಿ ಪ್ರಚಾರ ನಡೆಸಿದ ಬಹುತೇಕ ಕಡೆಗಳಲ್ಲಿ ಬಿಜೆಪಿ ಗೆದ್ದಿದೆ.
ಅಭ್ಯರ್ಥಿ ಬದಲಾವಣೆ ಮಾಡಿದ್ದರಿಂದ ಕರಾವಳಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಈ ಬಾರಿ ಸವಾಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿತ್ತು.

ಹೀಗಾಗಿ ಮಂಗಳೂರಿನಲ್ಲಿ ರೋಡ್‌ ಶೋ, ಉತ್ತರ ಕನ್ನಡದ ಶಿರಸಿಯಲ್ಲಿ ಪ್ರಧಾನಿ ಸಭೆ ಆಯೋಜಿಸಲಾಗಿತ್ತು. ಅನಂತ ಕುಮಾರ್‌ ಹೆಗಡೆಯಂಥ ಪ್ರಬಲ ಹಿಂದುತ್ವದ ನಾಯಕನಿಗೆ ಟಿಕೆಟ್‌ ನಿರಾಕರಿಸಿದ್ದರ ಮಧ್ಯೆಯೂ ಕರಾವಳಿಯ ಮೂರು ಜಿಲ್ಲೆಯಲ್ಲಿ ಬಿಜೆಪಿ ಗೆಲುವಿನ ನಗೆ ಚೆಲ್ಲಿದೆ.

ಮೋದಿ-ಶಾ ಪ್ರಚಾರ ನಡೆಸಿದ ಕಡೆ ಬಿಜೆಪಿ ಗೆದ್ದಿದ್ದು ಇಲ್ಲಿ :
– ಬೆಂಗಳೂರು ಗ್ರಾಮಾಂತರ
– ಮೈಸೂರು
– ಶಿವಮೊಗ್ಗ
– ಮಂಗಳೂರು, ಉಡುಪಿ-ಚಿಕ್ಕಮಗಳೂರು
– ಉತ್ತರ ಕನ್ನಡ
– ಬೆಳಗಾವಿ
– ಚಿಕ್ಕಬಳ್ಳಾಪುರ
– ಬೆಂಗಳೂರಿನ ಮೂರು ಕ್ಷೇತ್ರಗಳು
– ವಿಜಯಪುರ
– ಬಾಗಲಕೋಟೆ

Advertisement

Udayavani is now on Telegram. Click here to join our channel and stay updated with the latest news.

Next