Advertisement

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ..! ಪ್ರಯಾಣದ ವೇಳೆ ಕಳ್ಳತನವಾದಲ್ಲಿ ಪರಿಹಾರ

01:57 PM Jan 29, 2021 | Team Udayavani |

ನವ ದೆಹಲಿ :  ಕೋವಿಡ್ ನ ಕಾರಣದಿಂದಾಗಿ ಸ್ತಬ್ಧವಾಗಿದ್ದ ಲಕ್ನೋ-ನವದೆಹಲಿ ಮಾರ್ಗದ ದೇಶದ ಮೊದಲ ಖಾಸಗಿ ರೈಲು ತೇಜಸ್ ಎಕ್ಸ್‌ಪ್ರೆಸ್ ಮತ್ತೆ ಇದೇ ಮೊದಲ ಬಾರಿಗೆ ಹಳಿಗಿಳಿಯಲು ಸಜ್ಜಾಗಿದೆ.

Advertisement

ಹೌದು, ಫೆಬ್ರವರಿ 14 ರಿಂದ ತೇಜಸ್ ಎಕ್ಸ್‌ಪ್ರೆಸ್ ವಾರದಲ್ಲಿ 4 ದಿನಗಳು ಕಾರ್ಯನಿರ್ವಹಿಸಲಿದೆ. ತೇಜಸ್ ಎಕ್ಸ್‌ ಪ್ರೆಸ್‌ ನ ಪ್ರಯಾಣಿಕರು ಶತಾಬ್ಡಿ ಎಕ್ಸ್‌ಪ್ರೆಸ್ ನಲ್ಲಿಯೂ ಶುಲ್ಕ ಪಾವತಿಸುವುದರ ಮೂಲಕ ಪ್ರಯಾಣಿಸಬಹುದಾಗಿದೆ.  40 ರಷ್ಟು ಸೀಟುಗಳು ಮುಂಗಡ ಮೀಸಲಾತಿಗಾಗಿ ಇರಲಿವೆ ಎಂದು ವರದಿಯಾಗಿದೆ.

ಓದಿ : ಕರ್ನಾಟಕ ಬಸ್ ಮೇಲೆ ‘ಸಂಯುಕ್ತ ಮಹಾರಾಷ್ಟ್ರ’ ಮರಾಠಿ ಪೋಸ್ಟರ್: ಎನ್ ಸಿಪಿ ಪುಂಡಾಟಿಕೆ

ಅದಾಗ್ಯೂ, ರೈಲ್ವೆ ಪ್ರಯಾಣಿಕರಿಗೆ ಹೆಚ್ಚು ಆಸಕ್ತಿದಾಯಕವಾದ ಸಂಗತಿಯೆಂದರೆ, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಮ್ ಕಾರ್ಪೋರೇಷನ್ ಲಿಮಿಟೆಡ್ (ಐ ಆರ್‌ ಸಿ ಟಿ ಸಿ), ಪ್ರಯಾಣದ ವೇಳೆ ಪ್ರಯಾಣಿಕರ ಮನೆಯಲ್ಲಿ ಕಳ್ಳತನ ಅಥವಾ ದರೋಡೆ ಸಂಭವಿಸಿದ್ದಲ್ಲಿ ಪರಿಹಾರವನ್ನು ನೀಡಲು ಮುಂದಾಗಿದೆ. ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕರ ಮನೆಯಲ್ಲಿ ಕಳ್ಳತನ ಅಥವಾ ದರೋಡೆ ನಡೆದರೇ ಒಂದು ಲಕ್ಷ ವಿಮೆ ನೀಡಲಾಗುವುದು. ಇದಲ್ಲದೆ, ರೈಲಿನಲ್ಲಿ ಪ್ರಯಾಣಿಸುವಾಗ ಕಳ್ಳತನ ನಡೆದರೆ ಒಂದು ಲಕ್ಷ ವಿಮೆ ನೀಡಲಾಗುವುದು ಎಂದು ಹೇಳಿದೆ.

ಇನ್ನು,ತೆಜಸ್ ಎಕ್ಸ್ ಪ್ರೆಸ್ ಫೆಬ್ರವರಿ 14 ರಿಂದ, ವಾರದ ನಾಲ್ಕು ದಿನಗಳಾದ ಶುಕ್ರವಾರ, ಶನಿವಾರ, ಆದಿತ್ಯವಾರ ಹಾಗೂ ಸೋಮವಾರ ಸಂಚರಿಸಲಿದೆ.

Advertisement

ದೇಶದಲ್ಲಿ ಕೋವಿಡ್ ಸಮಸ್ಯೆಯ ಕಾರಣದಿಂದಾಗಿ 2020ರ ಮಾರ್ಚ್ 19 ರಂದೇ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಅದಾಗ್ಯೂ, ತೇಜಸ್ ಎಕ್ಸ್ ಪ್ರೆಸ್ ನ ಸಂಚಾರವನ್ನು ಅಕ್ಟೋಬರ್ ನಲ್ಲಿ  ಐ ಆರ್ ಸಿ ಟಿ ಸಿ ಪ್ರಾರಂಭಿಸಿತ್ತು. ಪ್ರಯಾಣಿಕರ ಕೊರತೆಯಿಂದಾಗಿ ಲಕ್ನೋ ಟು ದೆಹಲಿ ಹಾಗೂ ಮುಂಬೈ ಟು ಅಹಮದಬಾದ್ ಮಾರ್ಗಗಳ ಸಂಚಾರವನ್ನು ಐ ಆರ್ ಸಿ ಟಿ ಸಿ ಮತ್ತೆ ಕಳೆದ ನವೆಂಬರ್ ನಲ್ಲಿ ರದ್ದುಗೊಳಿಸಿತ್ತು.

ಓದಿ : ಗಾಜ್ಹಿಪುರ ಗಡಿಯಲ್ಲಿ ರೈತರಿಗೆ ಒದಗಿಸಿದ ಸೌಲಭ್ಯಗಳನ್ನು ಪರಿಶೀಲಿಸಿದ ಸಿಸೋಡಿಯಾ

 

Advertisement

Udayavani is now on Telegram. Click here to join our channel and stay updated with the latest news.

Next