Advertisement

ಮತಾಂತರಗೊಳ್ಳಲು ನಾಟಕ…: ಶಿವಮೊಗ್ಗದ ಯುವತಿ ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

03:03 PM May 16, 2023 | keerthan |

ಶಿವಮೊಗ್ಗ: ಜಯನಗರ ಠಾಣಾ ವ್ಯಾಪ್ತಿಯ ಯುವತಿ ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮತಾಂತರಗೊಳ್ಳಲು ಹೋಗಿ ಯುವತಿಯೇ ಕಿಡ್ನಾಪ್ ಕಥೆ ಸೃಷ್ಟಿಸಿರುವ ಪ್ರಸಂಗ ಇದೀಗ ಬೆಳಕಿಗೆ ಬಂದಿದೆ. ಯುವತಿಯನ್ನು ಪತ್ತೆ ಹಚ್ಚಿರುವ ಪೊಲೀಸರು ಪೋಷಕರ ಸುಪರ್ದಿಗೆ ಒಪ್ಪಿಸಲಾಗಿದೆ.

Advertisement

ದಾವಣಗೆರೆಯ ಚೆನ್ನಗಿರಿ ತಾಲೂಕಿನ ರಂಜಿತಾ (20) ಳನ್ನು ಹಣಕ್ಕಾಗಿ ಕಿಡ್ನಾಪ್ ಮಾಡಲಾಗಿದೆ ಎಂದು ಆಕೆಯ ಪೋಷಕರು ಜಯನಗರ ಠಾಣೆಯಲ್ಲಿ ದೂರು ನೀಡಿದ್ದರು. ಮಗಳನ್ನು ಕಿಡ್ನಾಪ್ ಮಾಡಿ 20 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ದೂರು ನೀಡಿದ್ದರು.

ತನಿಖೆ ನಡೆಸಿದ ಪೊಲೀಸರು ಇದೀಗ ಪ್ರಕರಣದ ಅಸಲಿಯತ್ತನ್ನು ಬಯಲು ಮಾಡಿದ್ದಾರೆ. ಅಸಲಿಗೆ ರಂಜಿತಾ ಕಿಡ್ನಾಪ್ ಆಗಿರಲಿಲ್ಲ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು, ಬಳಿಕ ಮುಂಬೈನಲ್ಲಿ ನೆಲೆಸಲೆಂದು ತಾನೇ ಕಿಡ್ನಾಪ್ ಕಥೆ ಕಟ್ಟಿ ಪೋಷಕರಿಗೆ ಕರೆ ಮಾಡಿ 20 ಲಕ್ಷ ರೂ ಗೆ ಬೇಡಿಕೆ ಇಟ್ಟಿದ್ದಳು.

ಇದನ್ನೂ ಓದಿ:Odisha;9 ವರ್ಷದ ಬಳಿಕ ಶ್ರೀಕೃಷ್ಣ ದೇವರ ಚಿನ್ನಾಭರಣ ಹಿಂದಿರುಗಿಸಿದ ಕಳ್ಳ! ಪತ್ರದಲ್ಲೇನಿದೆ…

ರಂಜಿತಾ ಕ್ರಿಶ್ಚಿಯನ್ ಧರ್ಮದಿಂದ ತೀವ್ರ ಪ್ರಭಾವಿತಳಾಗಿ, ಸೇವೆ ಮಾಡಲು ನಿರ್ಧರಿಸಿದ್ದಳು ಎನ್ನಲಾಗಿದೆ. ಹೈಸ್ಕೂಲ್ ಸಮಯದಿಂದಲೂ ಕ್ರಿಶ್ಚಿಯನ್ ಧರ್ಮದ ಬಗ್ಗೆ ಒಲವು ಹೊಂದಿದ್ದಳು. ಚೆನ್ನಗಿರಿಯ ಕ್ರಿಶ್ಚಿಯನ್ ಶಾಲೆಯಲ್ಲಿ ಓದಿದ್ದ ರಂಜಿತಾ ಪಿಯುಸಿ ಬಳಿಕ ಫಿಸಿಯೋ ಥೆರಫಿ ವ್ಯಾಸಾಂಗಕ್ಕೆ ಶಿವಮೊಗ್ಗದ ಖಾಸಗಿ ನರ್ಸಿಂಗ್ ಕಾಲೇಜು ಸೇರಿದ್ದಳು. ನರ್ಸಿಂಗ್ ಕಾಲೇಜಿನಲ್ಲೂ ಕೇರಳ ಮೂಲದ ಕ್ರಿಶ್ಚಿಯನ್ ವಿದ್ಯಾರ್ಥಿನಿಯರ ಸಂಪರ್ಕದಿಂದ ಪ್ರಭಾವಿತಳಾಗಿದ್ದಳು. ಇದೇ ಕಾರಣಕ್ಕೆ ಮುಂಬೈ ಹೋಗಿ ಮತಾಂತರಗೊಳ್ಳಲು ನಿರ್ಧರಿಸಿದ್ದ ರಂಜಿತಾ, ಮುಂಬೈನ ಕ್ಯಾಥೊಲಿಕ್ ಚರ್ಚ್ ಗೆ ಸೇರಿ, ಸನ್ಯಾಸಿನಿಯಾಗಿ ಸೇವೆ ಮಾಡಲು ಇಚ್ಛಿಸಿದ್ದಳು.

Advertisement

ಆದರೆ ಮುಂಬೈನಲ್ಲಿ ವಾಸಿಸಲು ಹಣದ ಅವಶ್ಯಕತೆಯಿದ್ದ ಹಿನ್ನೆಲೆಯಲ್ಲಿ ಕಿಡ್ನಾಪ್ ನಾಟಕ ಸೃಷ್ಟಿಸಿದ್ದು,  ಪೋಷಕರಿಗೆ ತನ್ನ ಮೊಬೈಲ್ ನಿಂದಲೇ ಕರೆ ಮಾಡಿ 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಐದು ಸಾವಿರ ಹಣ ಡ್ರಾ ಮಾಡಿ, ಶಿವಮೊಗ್ಗದಿಂದ ಮುಂಬೈಗೆ ಹೊರಟಿದ್ದಳು. ಶಿವಮೊಗ್ಗ- ತೀರ್ಥಹಳ್ಳಿ- ಶೃಂಗೇರಿ-ಬೆಂಗಳೂರು ಮೂಲಕ ಹುಬ್ಬಳಿಗೆ ಹೋಗಿದ್ದ ರಂಜಿತಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಕೆಯನ್ನು ಠಾಣೆಗೆ ಕರೆತಂದ ಪೊಲೀಸರು ವಿಚಾರಣೆ ನಡೆಸಿ, ಕೌನ್ಸೆಲಿಂಗ್ ಬಳಿಕ ಪೋಷಕರಿಗೆ ಒಪ್ಪಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next