Advertisement

ಉಲ್ಕಾಶಿಲೆ ಡಿಕ್ಕಿ:”ಜೇಮ್ಸ್‌ ವೆಬ್‌’ಗೆ ಗಾಯ! ಹಾನಿಗೀಡಾದ ಜಗತ್ತಿನ ಅತಿದೊಡ್ಡ ಟೆಲಿಸ್ಕೋಪ್‌

07:15 PM Jul 19, 2022 | Team Udayavani |

ವಾಷಿಂಗ್ಟನ್‌: ಬ್ರಹ್ಮಾಂಡದ ವಿವಿಧ ಮಗ್ಗಲುಗಳ ಚಿತ್ರಗಳನ್ನು ಸೆರೆಹಿಡಿದು, ಈ ಹಿಂದೆ ಜಗತ್ತಿಗೆ ಎಂದೂ ಲಭ್ಯವಾಗದೇ ಇದ್ದಂಥ ಬಾಹ್ಯಾಕಾಶದ ನಿಗೂಢ ವಿದ್ಯಮಾನಗಳನ್ನು ತೋರಿಸುವ ಕೆಲಸದಲ್ಲಿ ನಿರತವಾಗಿರುವ ವಿಶ್ವದ ಗೆಳೆಯ “ಜೇಮ್ಸ್‌ ವೆಬ್‌’ ಗಾಯಗೊಂಡಿದ್ದಾನೆ!

Advertisement

ಹೌದು. ಜಗತ್ತಿನ ಅತಿದೊಡ್ಡ ಹಾಗೂ ಅತ್ಯಂತ ಪ್ರಭಾವಿ ಬಾಹ್ಯಾಕಾಶ ದೂರದರ್ಶಕ ಜೇಮ್ಸ್‌ ವೆಬ್‌ಗ ಕ್ಷುದ್ರಗ್ರಹವೊಂದು ಡಿಕ್ಕಿ ಹೊಡೆದಿದ್ದು, ಅಪಾರ ಹಾನಿಯುಂಟಾಗಿದೆ. ಈ ಘಟನೆ ಮೇ ತಿಂಗಳಲ್ಲಿ ನಡೆದಿದೆ ಎಂದು ನಾಸಾ ತಿಳಿಸಿದೆ.

ಈ ದೂರದರ್ಶಕವು ತನ್ನ ಉದ್ದೇಶವನ್ನು ಈಡೇರಿಸಬೇಕೆಂದರೆ, ಅದು ಇನ್ನೂ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ ಮೇ ತಿಂಗಳಲ್ಲಿ ಟೆಲಿಸ್ಕೋಪ್‌ಗೆ ಕ್ಷುದ್ರಗ್ರಹವೊಂದು ಡಿಕ್ಕಿ ಹೊಡೆದಿರುವ ಕಾರಣ, ಈ ಯೋಜನೆ ದೀರ್ಘಾವಧಿ ಉಳಿಯುವುದೇ ಎಂಬ ಅನುಮಾನ ಮೂಡಿದೆ. ವಿಜ್ಞಾನಿಗಳ ತಂಡವೊಂದು ಟೆಲಿಸ್ಕೋಪ್‌ನ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿದ್ದು, “ಸರಿಪಡಿಸಲಾಗದ ತೊಂದರೆ’ಯಾಗಿದೆ ಎಂದು ಹೇಳಿದ್ದಾರೆ.

ಮುಂದೇನು?
ಹಾನಿಯಾಗಿರುವ ಕಾರಣ ದೂರದರ್ಶಕದ ಸಂಭಾವ್ಯ ಜೀವಿತಾವಧಿ ಎಷ್ಟಿರಬಹುದು ಎಂಬ ಪ್ರಶ್ನೆಗೆ ನಿಖರ ಉತ್ತರವನ್ನು ವಿಜ್ಞಾನಿಗಳು ನೀಡಿಲ್ಲ. ಆದರೆ, ಜೇಮ್ಸ್‌ ವೆಬ್‌ ಉಡಾವಣೆ ಆದಾಗಿನಿಂದ ಈವರೆಗೆ ಒಟ್ಟು 6 ಬಾರಿ ಸಣ್ಣಪುಟ್ಟ ಉಲ್ಕಾ ಶಿಲೆಗಳು ಅದಕ್ಕೆ ಡಿಕ್ಕಿ ಹೊಡೆದಿವೆ.

5 ಉಲ್ಕಾಶಿಲೆಗಳ ಹೊಡೆತದ ವೇಳೆ ಟೆಲಿಸ್ಕೋಪ್‌ಗೆ ಅಂಥ ಹಾನಿಯೇನೂ ಆಗಿರಲಿಲ್ಲ. ಆದರೆ, 6ನೇ ಬಾರಿಗೆ ಸ್ವಲ್ಪ ಹೆಚ್ಚೇ ಎನ್ನಬಹುದಾದಷ್ಟು ಹಾನಿಯಾಗಿದೆ. ಒಂದು ಫ‌ಲಕವು ಹಾನಿಗೀಡಾಗಿದೆ.

Advertisement

ಹಾಗಂತ, ಇದರಿಂದ ದೂರದರ್ಶಕದ “ಚಿತ್ರ ಸೆರೆಹಿಡಿಯುವ’ ಸಾಮರ್ಥ್ಯ ಕುಗ್ಗುವುದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಅದರ ಪ್ರಧಾನ ದರ್ಪಣ, ಸೂರ್ಯನಿಂದ ರಕ್ಷಿಸಿಕೊಳ್ಳುವ ಕವಚವು ಕ್ರಮೇಣ ಶಿಥಿಲಗೊಳ್ಳುತ್ತಾ ಬರಬಹುದು ಎಂದಿದ್ದಾರೆ ವಿಜ್ಞಾನಿಗಳು.

Advertisement

Udayavani is now on Telegram. Click here to join our channel and stay updated with the latest news.

Next