Advertisement
ಇವೆರಡೂ ಐಪಿಎಲ್‌ನ ಬಲಿಷ್ಠ ತಂಡಗಳಾದ ಕಾರಣ ಇದನ್ನು “ಬಿಗ್ ಮ್ಯಾಚ್’ ಎಂದೇ ಪರಿಗಣಿಸಲಾಗಿದೆ. ಇತ್ತಂಡಗಳು 26 ಬಾರಿ ಮುಖಾ ಮುಖೀಯಾಗಿವೆ. ಮುಂಬೈ 15, ಚೆನ್ನೈ 11 ಪಂದ್ಯಗಳನ್ನು ಗೆದ್ದಿವೆ. ಚೆನ್ನೈ ಯನ್ನು ಅತ್ಯಧಿಕ 15 ಬಾರಿ ಸೋಲಿ ಸಿದ ತಂಡವೆಂಬುದು ಮುಂಬೈ ಪಾಲಿನ ಹೆಗ್ಗಳಿಕೆ. ಉಳಿದವರ್ಯಾರೂ ಚೆನ್ನೈಯನ್ನು ಏಳಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಮಣಿಸಿಲ್ಲ.
ಮುಂಬೈ ಬ್ಯಾಟಿಂಗ್ ಬಲ ಮಧ್ಯ ಮ ಕ್ರಮಾಂಕದಲ್ಲಿ ಅಡಗಿದೆ. ಆಲ್‌ರೌಂಡರ್ ಪಾಂಡ್ಯ ಬ್ರದರ್ ಮತ್ತು ಕೈರನ್ ಪೊಲಾರ್ಡ್ ದೊಡ್ಡ ಮೊತ್ತ ಪೇರಿಸಲು ಸಮರ್ಥರು. ಡಿ ಕಾಕ್, ರೋಹಿತ್, ಸೂರ್ಯಕುಮಾರ್, ಬೆನ್ ಕಟಿಂಗ್ ಅಬ್ಬರಿಸಿದರೆ ಮುಂಬೈಗೆ ದೊಡ್ಡ ಮೊತ್ತ ಸಮಸ್ಯೆಯೇನಲ್ಲ. ಬುಮ್ರಾ, ಮಾಲಿಂಗ, ಮಾರ್ಕಾಂಡೆ, ಪಾಂಡ್ಯ ಬ್ರದರ್ ಬೌಲಿಂಗ್ ವಿಭಾಗದ ಪ್ರಮುಖರು.
Related Articles
ಕಳಪೆ ಫಾರ್ಮ್ನಿಂದ ಹೊರಬಂದಿರುವ ಶೇನ್ ವಾಟ್ಸನ್ ಚೆನ್ನೈ ತಂಡಕ್ಕೆ ಹೆಚ್ಚಿನ ಬಲ ತುಂಬಿದ್ದಾರೆ. ಹೈದರಾಬಾದ್ ವಿರುದ್ಧ 96 ರನ್ ಬಾರಿಸಿ ಗೆಲುವಿನ ರೂವಾರಿಯಾಗಿದ್ದರು. ಮತ್ತೂಬ್ಬ ಆರಂಭಕಾರ ಡು ಪ್ಲೆಸಿಸ್ ಯಾವುದೇ ಕ್ಷಣದಲ್ಲಿ ಸಿಡಿಯಬಲ್ಲ ಆಟಗಾರ. ತಂಡದ ಮಧ್ಯಮ ಕ್ರಮಾಂಕದಲ್ಲಿ ರಾಯುಡು, ಜಾಧವ್ ವಿಶೇಷ ಯಶಸ್ಸು ಕಂಡಿಲ್ಲ. ಸುರೇಶ್ ರೈನಾ ಬ್ಯಾಟ್ ಕೂಡ ಸದ್ದುಮಾಡುತ್ತಿಲ್ಲ. ಹೀಗಾಗಿ ಧೋನಿ ಮೇಲೆ ಹೆಚ್ಚಿನ ಭಾರ ಬೀಳುತ್ತಿದೆ. ಚೆನ್ನೈ ಬೌಲಿಂಗ್ ಈ ಬಗ್ಗೆ ಎರಡು ಮಾತಿಲ್ಲ ತಾಹಿರ್ 16 ವಿಕೆಟ್ ಉರುಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಹರ್ಭಜನ್, ಜಡೇಜ, ದೀಪಕ್ ಚಹರ್, ಮುಂಬಯಿಯವರೇ ಆದ ಶಾದೂìಲ್ ಠಾಕೂರ್ ಮುಂಬೈಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಬಹುದೆಂಬ ನಂಬಿಕೆ ಇದೆ.
Advertisement