Advertisement

ಬಿಜೆಪಿ ಆಡಳಿತ ಕಿತ್ತೊಗೆಯಲು ದೊಡ್ಡ ಪಾದಯಾತ್ರೆ

04:03 PM Aug 07, 2022 | Team Udayavani |

ಗಜೇಂದ್ರಗಡ: ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವುದರ ಜೊತೆಗೆ ಸಂವಿಧಾನ ಬದಲಾವಣೆಯ ಮಾತುಗಳ ಮೂಲಕ ಇಡೀ ದೇಶವನ್ನೇ ಒಡೆದಾಳುತ್ತಿರುವವರನ್ನು ಕಿತ್ತೂಗೆಯಲು ನಾವೆಲ್ಲರೂ ದೊಡ್ಡ ಮಟ್ಟದ ಪಾದಯಾತ್ರೆ ಹಮ್ಮಿಕೊಳ್ಳಬೇಕಿದೆ. ಸ್ವಾತಂತ್ರ್ಯೋತ್ಸವದ ಮಹತ್ವ ನಮಗೆಲ್ಲರಿಗೂ ಗೊತ್ತು. ಆದು, ಬಿಜೆಪಿಗೇನು ತಿಳಿದೀತು ಎಂದು ಮಾಜಿ ಶಾಸಕ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌. ಪಾಟೀಲ ಕಿಡಿಕಾರಿದರು.

Advertisement

ಸಮೀಪದ ನಾಗೇಂದ್ರಗಡ ಗ್ರಾಮದ ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠದ ಆವರಣದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಕಾಂಗ್ರೆಸ್‌ ಹಮ್ಮಿಕೊಂಡಿರುವ 166 ಕಿ.ಮೀ. ಪಾದಯಾತ್ರೆಯ ಕುರಿತು ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮಹಾತ್ಮ ಗಾಂಧೀಜಿ ತಪ್ಪುಗಳನ್ನು ಮಾಡಿದರೆ ಹೇಳುತ್ತಿದ್ದರು. ಆದರೆ, ಈಗ ಅಧಿಕಾರದಲ್ಲಿರುವವರು ತಪ್ಪನ್ನೇ ಸರಿ ಎಂದು ಸಮರ್ಥಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ಅಥವಾ ಬಿಜೆಪಿಯ ವಿರುದ್ಧ ಮಾತನಾಡುವ ಎಲ್ಲರಿಗೂ ದೇಶದ್ರೋಹಿ, ನಕ್ಸಲ್‌ ಎಂಬ ಹಣೆಪಟ್ಟಿ ಕಟ್ಟುತ್ತಿದ್ದಾರೆ ಎಂದು ದೂರಿದರು.

ಬಿಜೆಪಿಯ ವಿನಾಶದ ಕಾಲ ಹತ್ತಿರ ಬಂದಿದೆ. ರಾಷ್ಟ್ರಕ್ಕೆ ಗೊತ್ತಿರುವ ಸತ್ಯದ ವಿಚಾರವನ್ನು ಇವತ್ತು ಮರೆಮಾಚಿ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಸಾಕಷ್ಟು ಹೋರಾಟ ಮಾಡಿದ್ದು, ಟೊಳ್ಳು ಬೆದರಿಕೆಗೆ ಹೆದರುವುದಿಲ್ಲ. ದೇಶದ ಜನರಿಗೆ ಬಿಜೆಪಿಯ ಸುಳ್ಳು ನಾಟಕಗಳು ಗೊತ್ತಾಗಿದೆ. ದೇಶದ ಜನರನ್ನು ಸಂಕಷ್ಟಕ್ಕೆ ತಳ್ಳಿ, ಅಂಬಾನಿ, ಅದಾನಿಯವರ ಬೆನ್ನಿಗೆ ನಿಂತು ಆಡಳಿತ ನಡೆಸುವ ದುರಾಡಳಿತ ದೇಶಕ್ಕೆ ಬೇಕಾಗಿಲ್ಲ ಎಂದು ಕಿಡಿಕಾಕರಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ ದೊಡ್ಡ ಮಟ್ಟದ ಹೋರಾಟ ನಡೆಸಿದೆ. ದೇಶಕ್ಕೆ ಕಾಂಗ್ರೆಸ್‌ ಕೊಡುಗೆ ಅಪಾರವಾಗಿದೆ. ಆದರೆ, ಬಿಜೆಪಿಯ ಕೊಡುಗೆ ಬಂಡವಾಳ ಶಾಹಿಗಳ ಪರವಾಗಿದೆ. ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ನಾವೆಲ್ಲರೂ ಹೊಡೆದೋಡಿಸಬೇಕು. ಇದಕ್ಕೆ ಇನ್ನಷ್ಟು ದೊಡ್ಡ ಮಟ್ಟದ ಹೋರಾಟಗಳನ್ನು ಕ್ಷೇತ್ರದಲ್ಲಿ ರೂಪಿಸುವ ಮೂಲಕ ಮತ್ತೆ ದೇಶದಲ್ಲಿ ಬಡವರ ಪರವಾದ ಕಾಂಗ್ರೆಸ್‌ ಅಧಿಕಾರಕ್ಕೆ ತರುವ ಅಗತ್ಯವಿದೆ ಎಂದರು.

Advertisement

ರೋಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೀರಣ್ಣ ಶೆಟ್ಟರ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವ ಧಿಯಲ್ಲಿ ಸರ್ವ ಸಮುದಾಯಗಳ ಕಲ್ಯಾಣಕ್ಕೆ ಜಾರಿಗೊಳಿಸಿದ ಅದೆಷ್ಟೋ ಭಾಗ್ಯಗಳ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ನೆಲೆಯೂರಿವೆ. ಕಾಂಗ್ರೆಸ್‌ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತದೆ ಹೊರತು, ಸಮಾಜವನ್ನು ಒಡೆದಾಳುವ ನೀತಿಯಲ್ಲ. ಈ ದಿಸೆಯಲ್ಲಿ ಕಾರ್ಯಕರ್ಯರು ಕೇಡರ್‌ ಬೇಸ್‌ ಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಿ ಎಂದರು.

ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ ಮಾತನಾಡಿ, ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ದೇಶದ ಜನತೆ ಮುಂದಾಗಬೇಕು. ಬಿಜೆಪಿ ದುರಾಡಳಿತ ದೇಶಕ್ಕೆ ಮಾರಕವಾಗಿದೆ. ಹೀಗಾಗಿ, ಕಾಂಗ್ರೆಸ್‌ ಪಕ್ಷದಿಂದಲೇ ದೇಶದ ಉಳಿವು ಸಾಧ್ಯ. ಬಿಜೆಪಿಯವರು ಸಮಾಜವನ್ನು ಒಡೆದಾಳುತ್ತಿದ್ದಾರೆ. ಕೋಮು ಗಲಭೆ ಮುಖಾಂತರ ನೆಮ್ಮದಿ ಕದಡುತ್ತಿದ್ದಾರೆ. ದೇಶವನ್ನು ಶಾಂತಿಯುತವಾಗಿಡಲು ಯುವಕರೇ ಪಣ ತೊಡಬೇಕಿದೆ ಎಂದರು.

ಪರಶುರಾಮ ಅಳಗವಾಡಿ, ವಿ.ಆರ್‌. ಗುಡಿಸಾಗರ, ಪ್ರಭು ಮೇಟಿ, ಎ.ಪಿ.ಪಾಟೀಲ, ಶರಣಪ್ಪ ಬೆಟಗೇರಿ, ಅಂದಪ್ಪ ಬಿಚ್ಚಾರ, ನಿಂಗಪ್ಪ ಕಾಶಪ್ಪನವರ, ಪರಶುರಾಮ ಅಂಡಿನ, ಅಶೋಕ ಜಿಗಳೂರ, ಹನುಮಂತಪ್ಪ ರೊಟ್ಟಿ, ರಾಜೇಸಾಬ ಮುಲ್ಲಾ, ಎಂ.ಪಿ.ಗೌಡರ, ಹನುಮಪ್ಪ ಮುದೇನೂರ, ನಿಂಗರಾಜ ಹಂಡಿ, ಶರಣಪ್ಪ ಜಿಗಳೂರ, ಪ್ರಕಾಶ ಜಿಗಳೂರ, ಲಕ್ಷ್ಮಣ ಭಜಂತ್ರಿ, ಮಾಯಪ್ಪ ಹರಿಜನ, ಹನುಮಂತಪ್ಪ ಕಲ್ಲೊಡ್ಡರ, ಶಿವಕುಮಾರ್‌ ಚವ್ಹಾಣ, ಬಾಷಾ ಮುದಗಲ್ಲ, ಶರಣಪ್ಪ ಚಳಗೇರಿ ಇನ್ನಿತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next