Advertisement

ಕೊರಟಗೆರೆ ನ್ಯಾಯಾಲಯದಲ್ಲಿ ಬೃಹತ್ ಲೋಕ ಅದಾಲತ್‌

06:58 PM Feb 06, 2023 | Team Udayavani |

ಕೊರಟಗೆರೆ: ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಮತ್ತು ರಾಜ್ಯ ಉಚ್ಛನ್ಯಾಯಾಲಯದ ಅದೇಶದಂತೆ ಕೊರಟಗೆರೆ ನ್ಯಾಯಾಲಯದಲ್ಲಿ ಬೃಹತ್ ಲೋಕ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾದ ಜೆ.ಎನ್. ಶ್ರೀನಾಥ್‌ ತಿಳಿಸಿದರು.

Advertisement

ಅವರು ಪಟ್ಟಣದ ಜೆ.ಎಂ.ಎಪ್.ಸಿ ಮತ್ತು ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಫೆಬ್ರವರಿ 11 ರಂದು ಕೊರಟಗೆರೆ ನ್ಯಾಯಾಲಯದಿಂದ ಬೃಹತ್ ಲೋಕ ಅದಾಲತ್ (ಜನತಾ ನ್ಯಾಯಾಲಯ) ವನ್ನು ನಡೆಸಲಾಗುವುದು, ಈ ವರ್ಷದಲ್ಲಿ ನಾಲ್ಕು ಬಾರಿ ನಡೆಯುವ ಜನತಾ ನ್ಯಾಯಾಲಯದಲ್ಲಿ ಸಿವಿಲ್, ಚೆಕ್‌ಬೌನ್ಸ್, ಕೌಟುಂಬಿಕ ಆಸ್ತಿವಿವಾದಗಳು ಮತ್ತು ಜಗಳಗಳು, ಮೋಟಾರ್ ವಾಹನಗಳು ಮತ್ತು ಅಪಘಾತದ ವಿಮಾ ಪ್ರಕರಣಗಳು ಸೇರಿದಂತೆ ಜನತಾ ನ್ಯಾಯಾಲಕ್ಕೆ ಒಳಪಡುವ ಹಲವು ಅರ್ಜಿಗಳನ್ನು ಇತ್ಯರ್ಥ ಗೊಳಿಸಿ ಕೊಳ್ಳಬಹುದಾಗಿದೆ. ಲೋಕದಾಲತ್ ನಲ್ಲಿ ಇತ್ಯರ್ಥವಾದ ಪ್ರಕರಣಗಳಿಗೆ ಅವರ ಅರ್ಜಿ ಶುಲ್ಕವನ್ನು ಹಿಂದಿರುಗಿಸಲಾಗುವುದು ಇದರಿಂದ ನ್ಯಾಯಾಲಯದ ಸಮಯ ಉಳಿತಾಯವಾಗಲಿದ್ದು ಕೇಸ್‌ಗಳನ್ನು ಬೇಗ ಮುಗಿಸಿಕೊಳ್ಳಬೇಕೆನ್ನುವ ಅರ್ಜಿದಾರಿಗೆ ಅನುಕೂಲವಾಗಲಿದೆ ಮತ್ತು ಕೌಟುಂಬಿಕ ಪ್ರಕರಣ ಇತ್ಯರ್ಥದಿಂದ ಕುಟುಂಬದವರ ಬಾಂಧವ್ಯ ಬೆಳೆಯಲಿದೆ, ನ್ಯಾಯಲಯಕ್ಕೆ ಅರ್ಜಿದಾರರಾಗಿರುವವರು ಈ ಅದಾಲತ್‌ನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಬಿ.ಎಲ್.ನಾಗರಾಜು ಮಾತನಾಡಿ ಕೊರಟಗೆರೆ ಸಿವಿಲ್ ಹಾಗೂ ಜೆಎಂಎಫ್ ಸಿನ್ಯಾಯಾಲಯದಲ್ಲಿ 2277 ಪ್ರಕರಣಗಳು ಜನತಾ ನ್ಯಾಯಾಲಯಕ್ಕೆ ಅರ್ಹತೆ ಅರ್ಜಿಗಳಾಗಿದ್ದು ಫೆ 11 ರಂದು ನಡೆಯುವ ಲೋಕ ಅದಾಲತ್ ನಲ್ಲಿ 303 ಅರ್ಜಿಗಳನ್ನು ಇತ್ಯರ್ಥಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಇದರಿಂದ ಹಲವು ಅರ್ಜಿದಾರರಿಗೆ ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ವಕೀಲರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next