Advertisement

Bailhongal ಪೊಲೀಸರ ಭರ್ಜರಿ ಬೇಟೆ; ನಾಲ್ವರು ಆರೋಪಿಗಳ ಬಂಧನ

09:06 PM Dec 08, 2024 | Team Udayavani |

ಬೈಲಹೊಂಗಲ: ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ವರ ಆರೋಪಿಗಳನ್ನು ಪೊಲೀಸರು ಬಂಧಿಸಿ, 10 ಲಕ್ಷ ರೂ.ಮೌಲ್ಯದ 14 ಬೈಕ್‍ಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ಘಟನೆ ರವಿವಾರ ನಡೆದಿದೆ.

Advertisement

ಆರೋಪಿಗಳನ್ನು ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಅಭಿಷೇಕ ಬಾಬು ಹೊಸಟ್ಟಿ, ಸಚಿನ ಈರಪ್ಪ ಬಡಿಗೇರ, ಅಭಿಷೇಕ ಸುರೇಶ ಪಾರಿಶ್ವಾಡ, ಸಂದೀಪ ಈರಪ್ಪ ಬಡಿಗೇರ ಎಂದು ಗುರುತಿಸಲಾಗಿದೆ.

ಡಿ.6 ರಂದು ಪಿ.ಎಸ್.ಮುರನಾಳ ಹಾಗೂ ಸಿಬ್ಬಂದಿಗಳು ಪಟ್ಟಣದ ಬೆಳಗಾವಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ದಾಖಲಾತಿಗಳನ್ನು ಪರಿಶೀಲಿಸುತ್ತಿರುವಾಗ ನಾಲ್ಕು ಜನ ಯುವಕರು ಎರಡು ಬೈಕ್‍ಗಳ ಮೇಲೆ ಬಂದಾಗ ಸದರಿಯವರನ್ನು ತಡೆದು ವಿಚಾರಿಸಿದಾಗ, ಆರೋಪಿಗಳು ಬೈಕ್ ದಾಖಲಾತಿಗಳನ್ನು ಹಾಜರುಪಡಿಸದಿದ್ದಾಗ ಅವರನ್ನು
ಕೂಲಂಕಷವಾಗಿ ವಿಚಾರ ಪಡಿಸಿದಾಗ ಈ ಕಳ್ಳತನ ಮಾಡಿದ ಪ್ರಕರಣ ಬೆಳೆಕಿಗೆ ಬಂದಿದೆ.

ಬೆಳಗಾವಿಯ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶೃತಿ ಎಸ್.ಎ., ರಾಮಗೊಂಡ ಬಸರಗಿ, ಡಿವಾಯ್‍ಎಸ್ಪಿ ರವಿ ನಾಯಕ, ಪಿಐ ಪಂಚಾಕ್ಷರಿ ಸಾಲಿಮಠ ಇವರ ಮಾರ್ಗದರ್ಶದಲ್ಲಿ ಪಿಎಸ್‍ಐ ಪಿ.ಎಸ್.ಮುರನಾಳ, ಸಿಬ್ಬಂದಿಗಳಾದ ಎಸ್.ಯು.ಮೆನಸಿನಕಾಯಿ, ವಿ.ಎಮ್.ದೊಡ್ಡಹೊನ್ನಪ್ಪವರ, ಎಮ್.ಬಿ.ಕಂಬಾರ, ಸಿ.ಎಸ್.ಬುದ್ನಿ, ಎಮ್.ಎಸ್.ದೇಶನೂರ, ಕೆ.ಎಫ್.ವಕ್ಕುಂದ, ಜೆ.ಆರ್.ಮಳಗಲಿ ಇವರನ್ನು ಒಳಗೊಂಡ ತನಿಖಾ ತಂಡವು ಪ್ರಕಣವನ್ನು ಭೇದಿಸಿ ನಾಲ್ಕು ಆರೋಪಿತರನ್ನು ಬಂಧಿಸಿ, ವಿವಿಧ ಕಡೆಗಳಲ್ಲಿ ಕಳವು ಮಾಡಿದ 14 ಬೈಕ್‍ಗಳನ್ನು ಪತ್ತೆ ಮಾಡಿರುವ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next