ಮಲ್ಪೆ: ಆಳಸಮುದ್ರ ಮೀನುಗಾರರ ಬಲೆಗೆ ಬಿದ್ದ 23 ಕಿಲೋ ತೂಕದ ಮೀನೊಂದು ಬರೋಬರಿ 2.44 ಲಕ್ಷ ರೂ.ಗಳಿಗೆ ಬಿಕರಿಯಾಗಿದೆ! ಸ್ಥಳೀಯವಾಗಿ ಗೋಲಿ ಮೀನು ಎಂದು ಕರೆಯಲಾಗುವ ಇದರ ವೈಜ್ಞಾನಿಕ ಹೆಸರು ಘೋಲ್ ಫಿಶ್.
ಮಹಾರಾಷ್ಟ್ರ ಮತ್ತು ಗುಜರಾತ್ ಸಮುದ್ರದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮಲ್ಪೆಯ ಮೀನುಗಾರರ ಬಲೆಗೆ ಈ ಪ್ರಭೇದದ ಮೀನು ಹಲವು ಬಾರಿ ಬಿದ್ದಿದೆಯಾದರೂ ಇಷ್ಟು ದೊಡ್ಡ ಮೀನು ಸಿಕ್ಕಿರುವುದು ಪ್ರಥಮ. ಇದು ಕೆಜಿಗೆ 10,640 ರೂ.ಗಳಂತೆ ಮಾರಾಟವಾಗಿದೆ.
ಈ ಮೀನಿನ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ವಿಶ್ವನಿದ್ಯಾನಿಲಯದ ಕಡಲಜೀವಿ ಶಾಸ್ತ್ರ ವಿಭಾಗದ ಸಂಶೋಧಕ ಶಿವಕುಮಾರ್ ಹರಗಿ ಅವರು, “ಔಷಧೀಯ ಗುಣ ಹೊಂದಿರುವ ಈ ಮೀನಿನ ಹೊಟ್ಟೆಯನ್ನು ಬಂಗಾರವೆಂದೇ ಪರಿಗಣಿಸಲಾಗಿದೆ.
ವಿದೇಶದಲ್ಲಿ ಇದಕ್ಕೆ ಭಾರೀ ಬೇಡಿಕೆ ಇದೆ. ಸೌಂದರ್ಯ ವರ್ಧಕ ವಸ್ತುಗಳಲ್ಲಿ ಉಪಯೋಗಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ.
Related Articles
ಇದು ಗರಿಷ್ಠ 1.5 ಮೀಟರ್ ಉದ್ದ ಬೆಳೆಯುತ್ತದೆ. ತೂಕ ಹೆಚ್ಚಾದಂತೆ ದರವೂ ಹೆಚ್ಚು. 30ಕೆ.ಜಿ. ಮೀನು 5 ಲಕ್ಷ ರೂ. ವರೆಗೂ ಬೆಲೆಬಾಳುತ್ತದೆ. ಇದರ ಮಾಂಸ ಅತ್ಯಂತ ರುಚಿಕರ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಒಂದೇ ಹೋಟೆಲಲ್ಲಿ ಸಂಸದ ಸೇರಿ ಇಬ್ಬರು ರಷ್ಯನ್ನರ ನಿಗೂಢ ಸಾವು: ಕಗ್ಗಂಟಾದ ಪ್ರಕರಣ