ನವದೆಹಲಿ :ಪಂಜಾಬ್‌ನಲ್ಲಿ ಖಲಿಸ್ಥಾನಿ ಉಗ್ರ ಲಾಂಡಾ ಹರಿಕೆಯ ನಿಕಟ ಸಹಚರರಾಗಿದ್ದ ರಾಜನ್ ಭಟ್ಟಿ ಮತ್ತು ಚೀನ ಎಂಬ ಇಬ್ಬರನ್ನು ದೆಹಲಿ ಪೊಲೀಸರ ವಿಶೇಷ ಸೆಲ್ ಬಂಧಿಸಿದೆ.
ಭಟ್ಟಿ ಪಂಜಾಬ್ ಮೂಲದ ಶಸ್ತ್ರಾಸ್ತ್ರ ಮತ್ತು ಮಾದಕವಸ್ತು ಕಳ್ಳಸಾಗಣೆದಾರನಾಗಿದ್ದು, ಆತ ಲಾಂಡಾನ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ, ಆದರೆ ಚೀನಿ ಮಾದಕವಸ್ತು ಪೂರೈಕೆದಾರ ಆಗಿದ್ದ ಎಂದು ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಕೌಂಟರ್ ಇಂಟೆಲಿಜೆನ್ಸ್ ಯುನಿಟ್ ಪೊಲೀಸರು ತಿಳಿಸಿದ್ದಾರೆ.
ದರೋಡೆಕೋರ ಲಖ್ಬೀರ್ ಸಿಂಗ್ ಅಲಿಯಾಸ್ ಲಾಂಡ ಹರಿಕೆ ಪಂಜಾಬ್ ನಿಂದ ತಪ್ಪಿಸಿಕೊಂಡು ಕೆನಡಾದಲ್ಲಿ ತಲೆಮರೆಸಿಕೊಂಡಿದ್ದಾನೆ. ಕಳೆದ ವರ್ಷ ನವೆಂಬರ್‌ನಲ್ಲಿ ದರೋಡೆಕೋರ ಲಖ್ಬೀರ್ ಸಿಂಗ್ ಲಾಂಡಾ ನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಕ್ಕೆ ಬೆದರಿಕೆ ಹಾಕಿದ್ದ. ಆತ ಪಾಕಿಸ್ಥಾನದ ಐಎಸ್ಐ ಸಮರ್ಥಕನಾಗಿದ್ದಾನೆ.