ಕಾರ್ಕಳ: ರಾಜ್ಯದ ಆರ್ಥಿಕ ದೃಷ್ಟಿಯಿಂದ ಕರಾವಳಿಯು ಪ್ರಮುಖ ಸ್ಥಾನ ಹೊಂದಿದೆ. ಇಲ್ಲಿಯ ಚಟುವಟಿಕೆಗಳು, ಬಂದರು ಅಭಿ ವೃದ್ಧಿ, ಮೂಲ ಉದ್ಯೋಗಕ್ಕೆ ಇಂಬು ಕೊಡುವ, ಪ್ರವಾ ಸೋದ್ಯಮವನ್ನು ವಿಸ್ತರಿಸುವ ದೊಡ್ಡ ಮಟ್ಟದ ಕಾರ್ಯ ಕ್ರಮಗಳು ಚಿಂತನೆಯಲ್ಲಿವೆ. ಬಜೆಟ್‌ವರೆಗೂ ಕಾದು ನೋಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಾರ್ಕಳ ಬೈಲೂರಿನ ಉಮಿಕ್ಕಳ ಬೆಟ್ಟದ ಮೇಲೆ ಪರಶುರಾಮನ ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಕರಾವಳಿಯ ಸಾಂಸ್ಕೃತಿಕ, ದೇಗುಲ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಮಾಸ್ಟರ್ ಪ್ಲ್ರಾನ್ ರೂಪಿಸಿ, ಕೈಗಾರಿಕೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ರಾಹುಲ್ ಗಾಂಧಿ ಬಂದರೆ ಜನ ಸೇರುವುದಿಲ್ಲ. ಅದಕ್ಕೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಮೋದಿ ಬಂದಾಗ ಜನಸಾಗರ ನೋಡಿ ಕಾಂಗ್ರೆಸಿಗರು ಭಯ ಪಟ್ಟಿದ್ದಾರೆ. ಭಯ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಏನೇನೋ ಹೇಳುತ್ತಿದ್ದಾರೆ ಎಂದರು.
ನಾವು ಕರಾವಳಿಯನ್ನು ಹಿಂದುತ್ವದ ಪ್ರಯೋಗ ಶಾಲೆ ಮಾಡಲು ಹೊರಟಿಲ್ಲ. ಕಾಂಗ್ರೆಸಿಗರೇ ಒಂದು ವರ್ಗ ವನ್ನು ತಲೆಯ ಮೇಲೆ ಕೂರಿಸಿಕೊಂಡು ಕುಣಿಸುತ್ತಿದ್ದಾರೆ. ಇತರ ಬಡವರು, ದೀನದಲಿತರು, ಹಿಂದುಳಿದ ವರ್ಗದವರು ಇವರ ಬೆಂಬಲವನ್ನು ನಿರೀಕ್ಷೆ ಮಾಡಿದ್ದರೂ ಅವರನ್ನು ಕೈಬಿಟ್ಟಿದ್ದಾರೆ. ತುಷ್ಟೀಕರಣ ರಾಜಕಾರಣ ನಮ್ಮದಲ್ಲ ಎಂದು ಹೇಳಿದರು.