Advertisement

ಕಡಲ ಕಿನಾರೆಗಳ ಬೃಹತ್‌ ಸ್ವಚ್ಛತಾ ಅಭಿಯಾನ

01:01 AM Nov 01, 2021 | Team Udayavani |

ಮಂಗಳೂರು: ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರದ ವತಿಯಿಂದ ತಲಪಾಡಿಯಿಂದ ಮೂಲ್ಕಿವರೆಗಿನ ಬೀಚುಗಳ ಬೃಹತ್‌ ಸ್ವಚ್ಛತಾ ಅಭಿಯಾನ ಹಾಗೂ ಏಕತಾ ದಿನಾಚರಣೆ ರವಿವಾರ ಜರಗಿತು.

Advertisement

ದ.ಕ. ಜಿಲ್ಲಾಡಳಿತ, ಜಿ. ಪಂ., ಎನ್‌ಸಿಸಿ, ಎನ್‌ಎಸ್‌ಎಸ್‌, ವಿವಿಧ ಕಾಲೇಜ್‌ಗಳ ವಿದ್ಯಾರ್ಥಿಗಳು ಹಾಗೂ ರೋಟರಿ ಕ್ಲಬ್‌, ಕೆನರಾ ಬ್ಯಾಂಕ್‌, ಜೆಎಸ್‌ಡಬ್ಲೂ ಫೌಂಡೇಶನ್‌ ಇವುಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ತಲಪಾಡಿ, ಸೋಮೇಶ್ವರ, ಉಳ್ಳಾಲ, ಬೆಂಗ್ರೆ, ತಣ್ಣೀರುಬಾವಿ, ಪಣಂಬೂರು, ಕೋರಿಕಟ್ಟ-ಬೈಕಂಪಾಡಿ, ಚಿತ್ರಾಪುರ, ಹೊಸಬೆಟ್ಟು, ಇಡ್ಯಾ, ಸುರತ್ಕಲ್‌ ಗುಡ್ಡೆಕೊಪ್ಪಲು, ದೊಡ್ಡಕೊಪ್ಪಲು, ಸುರತ್ಕಲ್‌ ಲೈಟ್‌ ಹೌಸ್‌ ಮತ್ತು ಸಸಿಹಿತ್ಲು ಬೀಚುಗಳಲ್ಲಿ ಏಕಕಾಲದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಈ ಅಭಿಯಾನದಲ್ಲಿ 8,600ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದರು.

ಇದನ್ನೂ ಓದಿ:ಭಾರತದಲ್ಲಿ ಪ್ರತಿದಿನ ಸರಾಸರಿ 31 ಮಕ್ಕಳು ಆತ್ಮಹತ್ಯೆ! 2020ರ ಮಾಹಿತಿ ಹೊರ ಹಾಕಿದ ಕೇಂದ್ರ

Advertisement

ಏಕತಾ ದಿನಾಚರಣೆ
ಇದೇ ಸಂದರ್ಭ ಬೆಂಗ್ರೆ ಬೀಚಿನಲ್ಲಿ ನಡೆದ ಏಕತಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಏಕತಾ ಪ್ರತಿಜ್ಞೆ ಬೋಧಿಸಿದರು. ನೆಹರು ಯುವ ಕೇಂದ್ರದ ದಕ್ಷಿಣ ಭಾರತದ ಪ್ರಾದೇಶಿಕ ನಿರ್ದೇಶಕ ಎಸ್‌. ಪಿ. ಪಟ್ನಾಯಕ್‌ ಸ್ವಚ್ಛತೆಗೆ ಚಾಲನೆ ನೀಡಿದರು.

ಮೇಯರ್‌ ಪ್ರೇಮಾನಂದ ಶೆಟ್ಟಿ, ನೆಹರು ಯುವ ಕೇಂದ್ರ ರಾಜ್ಯ ನಿರ್ದೇಶಕ ಎಂ.ಎನ್‌.ನಟರಾಜ್‌, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌, ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌, ಡಿಸಿಪಿ ಹರಿರಾಮ್‌ ಶಂಕರ್‌, ಬೇಂಗ್ರೆ ಮಹಾಜನ ಸಭೆ ಅಧ್ಯಕ್ಷ ಚೇತನ್‌, ಸತೀಶ್‌ ಬಾಬು, ಅಲೋಶಿಯಸ್‌ ಕಾಲೇಜಿನ ಪ್ರಾಂಶುಪಾಲ ಪ್ರವೀಣ್‌ ಮಾರ್ಟೀಸ್‌, ಆಳ್ವಾಸ್‌ನ ವಿವೇಕ್‌ ಆಳ್ವ, ಯೇನಪೊಯ ವಿ.ವಿ.ಯ ಎನ್‌ಎಸ್‌ಎಸ್‌ ಕಾರ್ಯಕ್ರಮ ಸಂಯೋಜಕ ಡಾ| ಅಶ್ವಿ‌ನಿ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಘುವೀರ್‌ ಸೂಟರ್‌ ಪೇಟೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next