ಚೆನ್ನೈ: ಪೂರ್ತಿ ದೈಹಿಕ ಕ್ಷಮತೆಯೊಂದಿಗೆ ಭಾರತ ತಂಡಕ್ಕೆ ಮರಳುವ ಹಾದಿಯಲ್ಲಿರುವ ಆಲ್‌ರೌಂಡರ್ ರವೀಂದ್ರ ಜಡೇಜ 4 ತಿಂಗಳ ಬ್ರೇಕ್ ಬಳಿಕ ಮಂಗಳವಾರ ಕ್ರಿಕೆಟ್ ಕಣಕ್ಕೆ ಇಳಿಯಲಿದ್ದಾರೆ.
ಭಾರತ ತಂಡಕ್ಕೆ ಮರಳುವವರು ಒಂದಾದರೂ ದೇಶಿ ಕ್ರಿಕೆಟ್ ಪಂದ್ಯ ವನ್ನು ಆಡಬೇಕೆನ್ನುವ ಬಿಸಿಸಿಐ ನಿಯಮದಂತೆ ಅವರು ರಣಜಿ ಟ್ರೋಫಿ ಪಂದ್ಯಾವಳಿಯ 7ನೇ ಸುತ್ತಿನ ಸ್ಪರ್ಧೆಯಲ್ಲಿ ಸೌರಾಷ್ಟ್ರವನ್ನು ಪ್ರತಿನಿಧಿ ಸಲಿದ್ದಾರೆ. ತಮಿಳುನಾಡು ವಿರುದ್ಧದ ಈ ಪಂದ್ಯ ಚೆನ್ನೈಯಲ್ಲಿ ನಡೆಯಲಿದೆ. ಇಲ್ಲಿ ಜಡೇಜ ಸೌರಾಷ್ಟ್ರ ತಂಡದ ನಾಯಕರಾಗಿರುವುದು ವಿಶೇಷ.
2022ರ ಸೆಪ್ಟಂಬರ್‌ನಿಂದ ರವೀಂದ್ರ ಜಡೇಜ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಯುಎಇಯಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಗಾಯಾಳಾಗಿದ್ದರು. ಇದರಿಂದ ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲೂ . ಅವರಿಗೆ ಆಡಲು ಸಾಧ್ಯ ವಾಗಿರಲಿಲ್ಲ. ಕಳೆದ 3 ವಾರಗಳಿಂದ ಬೆಂಗಳೂ ರಿನ ಎನ್‌ಸಿಎಯಲ್ಲಿ ಪುನ ಶ್ಚೇತನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಚೇತರಿಸಿಕೊಂಡಿದ್ದಾರೆ.
5 ವರ್ಷ ಬಳಿಕ ರಣಜಿ!
ಅಂದಹಾಗೆ ರವೀಂದ್ರ ಜಡೇಜ ರಣಜಿ ಟ್ರೋಫಿ ಪಂದ್ಯವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು 2018ರ ಬಳಿಕ ಇದೇ ಮೊದಲು. ಚೇತೇಶ್ವರ್ ಪೂಜಾರ ಮತ್ತು ಜೈದೇವ್ ಉನಾದ್ಕತ್ ಅವರಿಗೆ ವಿಶ್ರಾಂತಿ ನೀಡಿದ ಕಾರಣ ಇಲ್ಲಿ ಜಡೇಜ ಅವರಿಗೆ ಸೌರಾಷ್ಟ್ರ ತಂಡದ ನಾಯಕತ್ವ ಒಲಿದು ಬಂದಿದೆ. ಅವರು ಪ್ರಥಮ ದರ್ಜೆ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿರುವುದು ಕೂಡ ಇದೇ ಮೊದಲು ಎಂಬುದು ವಿಶೇಷ.