ನವ ದೆಹಲಿ : ಮೀಸಲಾದ ಕೇಂದ್ರಗಳಲ್ಲಿ ಮಾತ್ರ ತಯಾರಿಸಲಾಗುತ್ತಿದ್ದ ಅಥವಾ ತಿದ್ದುಪಡಿ ಮಾಡಲಾಗುತ್ತಿದ್ದ ಅತ್ಯಂತ ಅಗತ್ಯವಾದ ದಾಖಲೆಗಳಲ್ಲಿ ಒಂದಾದ ಆಧಾರ್ ಕಾರ್ಡ್ ನ್ನು ಈಗ ಅಂಚೆ ಕಚೇರಿಯಲ್ಲಿಯೂ ಮಾಡಿಸಬಹುದಾಗಿದೆ. ಪ್ರಕ್ರಿಯೆಯನ್ನು ಸರಾಗಗೊಳಿಸುವ ಸಲುವಾಗಿ ಈ ರೀತಿಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಓದಿ : ಪತ್ನಿ ವಿದ್ಯಾವಂತಳು ಎಂಬ ಕಾರಣಕ್ಕೆ ಆಕೆಗೆ ಜೀವನಾಂಶ ನಿರಾಕರಿಸುವಂತಿಲ್ಲ: ಹೈಕೋರ್ಟ್
ಯುಪಿ ಯ ಸಹರಾನ್ಪುರ್ ಜಿಲ್ಲೆಯ ಅಂಚೆ ಕಚೇರಿಯಲ್ಲಿ ಯಾವುದೇ ಬದಲಾವಣೆಗಳು ಅಥವಾ ಆಧಾರ್ ಕಾರ್ಡ್ ತಯಾರಿಕೆ ಪ್ರಾರಂಭವಾಗಿದೆ. ಆ ಮೂಲಕ ಉತ್ತರ ಪ್ರದೇಶವು ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಮೊದಲ ರಾಜ್ಯವಾಗಿದೆ. ಅಂಚೆ ಇಲಾಖೆಯಿಂದ ವಿಶೇಷ ಡ್ರೈವ್ ಮೂಲಕ ಆಧಾರ್ ಕಾರ್ಡ್ ಗಳನ್ನು ಮಾಡಲಾಗುವುದು ಮತ್ತು ಪ್ರತಿ ಶನಿವಾರ ಈ ಕುರಿತಾಗಿ ವಿಶೇಷ ಅಭಿಯಾನವನ್ನು ನಡೆಸಲಾಗುತ್ತದೆ. ಇದರ ಜೊತೆಗೆ ಸರ್ಕಾರದ ಯೋಜನೆಗಳ ಬಗ್ಗೆಯೂ ಜನರಿಗೆ ತಿಳಿಸಲಾಗುವುದು.
ಸಹರಾನ್ ಪುರ ಜಿಲ್ಲೆಯಲ್ಲಿ 23 ಕೇಂದ್ರಗಳನ್ನು ನಿರ್ಮಿಸಲಾಗಿದೆ ಆಧಾರ್ ನಲ್ಲಿ ಬದಲಾವಣೆಗಳನ್ನು ಮಾಡುವಲ್ಲಿ ಅಂಚೆ ಕಚೇರಿಗಳು ಸಹ ಸಕ್ರಿಯ ಪಾತ್ರವಹಿಸುತ್ತವೆ. ಅಲ್ಲದೆ, ಹತ್ತಿರದಲ್ಲಿ ಯಾವುದೇ ಪೋಸ್ಟ್ ಆಫೀಸ್ ಇಲ್ಲದಿದ್ದರೆ, ಒಬ್ಬರು ಆಧಾರ್ ಕಾರ್ಡ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಆನ್ ಲೈನ್‌ನಲ್ಲಿ ಆಧಾರ್ ಕಾರ್ಡ್ ನಲ್ಲಿರುವ ತಪ್ಪುಗಳನ್ನು ಸರಿಪಡಿಸಲಾಗುತ್ತದೆ. ಆಧಾರ್ ಕಾರ್ಡ್ ಮಾಡುವಾಗ, ಅನೇಕ ಸಂದರ್ಭಗಳಲ್ಲಿ ನೀವು ತಪ್ಪುಗಳನ್ನು ಪದೇ ಪದೇ ಸರಿಪಡಿಸಲು ಸಾಧ್ಯವಿಲ್ಲ.
ಓದಿ : “ಭಾರತರತ್ನ ಅಭಿಯಾನ’ ನಿಲ್ಲಿಸಲು ಟಾಟಾ ಮನವಿ