Advertisement

ದಸರಾ ಆನೆ ಬಲರಾಮನಿಗೆ ಅಂತಿಮ ವಿದಾಯ; ಕಂಬನಿ ಮಿಡಿದ ರಾಜಮನೆತನ

09:49 PM May 08, 2023 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದ ಹುಣಸೂರು ವಲಯದ ಭೀಮನಕಟ್ಟೆ ಆನೆಕ್ಯಾಂಪಿನಲ್ಲಿ ಭಾನುವಾರ ಅನಾರೋಗ್ಯದಿಂದ ಮೃತಪಟ್ಟಿದ್ದ ಬಲರಾಮ ಆನೆಯ ಅಂತ್ಯಸಂಸ್ಕಾರವನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

Advertisement

ಹುಣಸೂರು ವಲಯದ ಭೀನಮಕಟ್ಟೆ ಸಾಕಾನೆ ಶಿಬಿರದಲ್ಲಿ ಕ್ಷಯರೋಗದಿಂದ ಮೃತಪಟ್ಟ ಬಲರಾಮ ಆನೆಯನ್ನು ಹುಣಸೂರು ವನ್ಯಜೀವಿ ವಲಯದ ಕಾರೆಕಟ್ಟೆ ಅರಣ್ಯ ಪ್ರದೇಶದಲ್ಲಿ ಪೂಜೆ, ವಿಧಿವಿಧಾನ ನೆರವೇರಿಸಿ, ಸರಕಾರಿ ಗೌರವ ಸಲ್ಲಿಸಿ, ಮೂರು ಸುತ್ತು ಕುಶಲತೋಪು ಹಾರಿಸಿದ ನಂತರ ಮಣ್ಣಿನಲ್ಲಿ ಹೂತು ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಅರಮನೆ ಗೌರವ
ಮೈಸೂರು ಅರಸರ ಕುಟುಂಬದ ಶೃತಿ ಕೀರ್ತಿದೇವಿ ಅರಸುರವರು ಅರಮನೆಯ ಪುರೋಹಿತರೊಂದಿಗೆ ಆಗಮಿಸಿ ಶಾಸ್ತ್ರೋಕ್ತವಾಗಿ ಆನೆಗೆ ಅಂತಿಮ, ಪೂಜೆ ಮತ್ತು ವಿಧಿವಿದಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಕಾರಿ ಮಾಲತಿ ಪ್ರಿಯ, ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ ಚಿಕ್ಕನರಗುಂದ, ಡಿ.ಸಿ.ಎಫ್. ಸೀಮಾಪಿ.ಎ, ಸೌರಭ್ ಕುಮಾರ್, ಶರಣ ಬಸಪ್ಪ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಎಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಕಾರಿಗಳು ಜೊತೆಗೆ ಬಲರಾಮ ಆನೆಯ ಮಾವುತ ತಿಮ್ಮ ಹಾಗೂ ಕುಟುಂಬಸ್ಥರು, ಕಾವಾಡಿ ಮಂಜುನಾಥ ಹಾಗೂ ಬಲರಾಮ ಆನೆಯನ್ನು ಹಲವುದಿನಗಳಿಂದ ಆರೈಕೆ ಮಾಡಿದ ಪಶುವೈದ್ಯರಾದ ಡಾ.ರಮೇಶ್, ಡಾ.ನಾಗರಾಜು ಹಾಗೂ ಡಾ.ಮುಜೀಬ್ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next