Advertisement

ದಾಖಲಾತಿಯಲ್ಲಿ ದಾಖಲೆ: ಮೂಲಸೌಕರ್ಯ ಕೊರತೆ

10:08 PM Sep 26, 2021 | Team Udayavani |

ತೆಕ್ಕಟ್ಟೆ: ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಸ.ಹಿ.ಪ್ರಾ. ಶಾಲೆ ಕಳೆದ 7 ವರ್ಷಗಳಿಂದ ಮಕ್ಕಳ ದಾಖಲಾತಿಯಲ್ಲಿ ಸತತವಾಗಿ ಏರುಗತಿಯನ್ನು ಕಂಡುಕೊಂಡಿದೆ. ಈ ಸಂಸ್ಥೆ 2019-20ನೇ ಸಾಲಿನಿಂದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆಗಿ ಮೇಲ್ದರ್ಜೆಗೇರಿದ ಬಳಿಕ ಪ್ರತೀ ಶೈಕ್ಷಣಿಕ ವರ್ಷದಲ್ಲಿ ಸುಮಾರು 195 ಮಕ್ಕಳ ದಾಖಲಾತಿಯಾಗಿದ್ದು ದಾಖಲೆಯಾಗಿದೆ.

Advertisement

ದಾಖಲಾತಿಯಲ್ಲಿ ದಾಖಲೆ
2020-21 ಸಾಲಿನಲ್ಲಿ 175 ಹಾಗೂ 2021-22 ಸಾಲಿನಲ್ಲಿ 195 ಮಕ್ಕಳು ದಾಖಲಾಗಿದ್ದಾರೆ. ಪ್ರಸ್ತುತ ಬಿದ್ಕಲ್‌ಕಟ್ಟೆ ಪರಿಸರದ ಗ್ರಾಮೀಣ ಭಾಗಗಳಾದ ಮೊಳಹಳ್ಳಿ,ಹಾರ್ದಳ್ಳಿ ಮಂಡಳ್ಳಿ, ಹೊಂಬಾಡಿ ಮಂಡಾಡಿ, ಯಡಾಡಿ ಮತ್ಯಾಡಿ, ಜಪ್ತಿ, ಹಳ್ಳಾಡಿ ಹರ್ಕಾಡಿ, ಕಾಳಾವರ, ಅಸೋಡು, ಕೊರ್ಗಿ, ಹಾಲಾಡಿ, ಕಕ್ಕುಂಜೆ, ಆವರ್ಸೆ, ಬಸ್ರೂರು, ಸಲ್ವಾಡಿ, ಜಾನುವಾರುಕಟ್ಟೆ ಮೊದಲಾದ ಸುತ್ತಮುತ್ತಲಿನ ಅನೇಕ ಗ್ರಾಮಗಳಿಂದಲೂ ಮಕ್ಕಳು ದಾಖಲಾಗಿದ್ದಾರೆ.

ಶಿಕ್ಷಕರ ಕೊರತೆ
ಈ ವರ್ಷ ಎಲ್‌.ಕೆ.ಜಿ.ಯಿಂದ 7ನೇ ತರಗತಿವರೆಗೆ 544 ವಿದ್ಯಾರ್ಥಿ ಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರಕಾರದಿಂದ ಮಂಜೂರಾಗಿರುವ 9 ಹುದ್ದೆಗಳಿದ್ದು, ಅವುಗಳಲ್ಲಿ ಈಗ 6 ಮಂದಿ ಶಿಕ್ಷಕರು ಮಾತ್ರ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯೋಪಾಧ್ಯಾಯರ ಹುದ್ದೆ ಕಳೆದ ಜೂನ್‌ ತಿಂಗಳಿನಿಂದ ತೆರವಾಗಿದ್ದು, ಇನ್ನೆರಡು ಶಿಕ್ಷಕರು ನಿವೃತ್ತರಾಗಿದ್ದಾರೆ. ಆದರೆ ಖಾಲಿ ಇರುವ ಶಿಕ್ಷಕರ ಹುದ್ದೆಗಳೇ ಇನ್ನೂ ಭರ್ತಿಯಾಗಿಲ್ಲ. ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದರೂ ಕೂಡ ಇಂಗ್ಲಿಷ್‌ ಹಾಗೂ ಹಿಂದಿ ಶಿಕ್ಷಕರಿಲ್ಲ. ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಒಬ್ಬರು ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಇನ್ನೂ ಓರ್ವ ಶಿಕ್ಷಕರ ಆವಶ್ಯಕತೆ ಇದೆ. ಕಂಪ್ಯೂಟರ್‌, ಸಂಗೀತ, ಚಿತ್ರಕಲೆ ಸೇರಿದಂತೆ ವಿಶೇಷ ಶಿಕ್ಷಕರ ಆವಶ್ಯಕತೆ ಇದೆ.

ಇದನ್ನೂ ಓದಿ:ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್‌ ಹಾರಾಟ

ವಿಶೇಷ ಸವಲತ್ತುಗಳು
ಎಲ್‌.ಕೆ.ಜಿ.ಯಿಂದ ಪಿ.ಯು.ಸಿ.ಯ ವರೆಗೆ ಒಂದೇ ಸೂರಿನಡಿ ಕಲಿಯಲು ಅವಕಾಶವಿದೆ.

Advertisement

ಮೂಲ ಸೌಕರ್ಯಗಳ ಕೊರತೆ
ಶಾಲೆಯಲ್ಲಿ ಪ್ರಸ್ತುತ ಲಭ್ಯವಿರುವ ತರಗತಿ ಕೊಠಡಿಗಳು ಹನ್ನೊಂದು ಮಾತ್ರ. ಇನ್ನೂ 7 ತರಗತಿ ಕೊಠಡಿಗಳ ಆವಶ್ಯಕತೆ ಇದೆ. ಸಹಶಿಕ್ಷಕರಿಗೆ ಪ್ರತ್ಯೇಕ ಕೊಠಡಿ ಇಲ್ಲ. ಶಾಲಾ ವಾಚನಾಲಯದಲ್ಲಿ 2,000ಕ್ಕೂ ಅಧಿಕ ಪುಸ್ತಕಗಳಿದ್ದು ಅವುಗಳನ್ನು ಸುವ್ಯವಸ್ಥಿತವಾಗಿ ಸಂಯೋಜಿಸಲು ಪ್ರತ್ಯೇಕ ಕೊಠಡಿಗಳಿಲ್ಲ. ಮಕ್ಕಳ ಸಂಖ್ಯೆಗೆ ಪೂರಕವಾಗಿ ಹೆಚ್ಚಿನ ಶೌಚಾಲಯ ಅಗ ತ್ಯ ವಿ ದೆ. 400 ಮಕ್ಕಳಿಗಾಗು ಷ್ಟು ಪೀಠೊಪಕರಣಗಳ ಆವಶ್ಯಕತೆಯೂ ಇದೆ.ಶಾಲಾ ಪರಿಸರದಲ್ಲಿ ಸಂಪೂರ್ಣ ಶಿಥಿಲಗೊಂಡ ಹಳೆಯ ಕಟ್ಟಡವನ್ನು ತೆರವುಗೊಳಿಸಬೇಕಿದೆ.

ಶಿಕ್ಷಕರ ಆವಶ್ಯಕತೆ ಇದೆ
ಕಳೆದ 7 ವರ್ಷಗಳಲ್ಲಿ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಈಗ 6 ಮಂದಿ ಶಿಕ್ಷಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇನ್ನೂ 9 ಶಿಕ್ಷಕರ ಆವಶ್ಯಕತೆ ಇದೆ. ಹೆತ್ತ ವರು ಮತ್ತು ದಾನಿಗಳ ಸಹಕಾರದಿಂದ 5 ಮಂದಿ ಗೌರವ ಶಿಕ್ಷಕರ ಸೇವೆಯನ್ನು ಪಡೆದು ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಕಲಿ ಸ ಲಾ ಗು ತ್ತಿದೆ. ಹೊಸ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಕೆ.ಪಿ.ಎಸ್‌. ಅನುದಾನದಡಿ 2 ಕೋ.ರೂ. ಮಂಜೂರಾಗಿದೆ. – ಉದಯ್‌ಕುಮಾರ್‌ ಶೆಟ್ಟಿ,
ಮುಖ್ಯೋಪಾಧ್ಯಾಯರು

ಇಲಾಖೆಗೆ ಬೇಡಿಕೆ
ಮಕ್ಕಳ ಸಂಖ್ಯೆ ಗಣನೀಯ ಏರಿಕೆಯಾಗಿ ರುವುದರಿಂದ ತರಗತಿ ಕೊಠಡಿ, ಪೀಠೊಪಕರಣ ಹಾಗೂ ಶಿಕ್ಷಕರ ಕೊರತೆ ತೀವ್ರವಾಗಿ ಕಾಡುತ್ತಿದೆ. ಶಾಲೆಯ ಮೂಲ ಸೌಕರ್ಯಗಳ ಕೊರತೆ ಬಗ್ಗೆ ಈಗಾಗಲೇ ಇಲಾಖೆಗೆ ಬೇಡಿಕೆ ಸಲ್ಲಿಸಿದ್ದೇವೆ. ಶಾಲಾ ಪರಿಸರದಲ್ಲಿ ಶಿಥಿಲಗೊಂಡಿರುವ ಕಟ್ಟಡಗಳಿದ್ದು ಅವು ಗಳನ್ನು ತುರ್ತಾಗಿ ತೆರವುಗೊಳಿಸುವ ಬಗ್ಗೆ ಇಲಾಖೆ ಹಾಗೂ ಜನಪ್ರತಿನಿಧಿಗಳು ತುರ್ತಾಗಿ ಸ್ಪಂದಿಸಬೇಕಿದೆ.
– ಗೌತಮ್‌ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷರು

– ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next