ಬರ್ಲಿನ್ : ಎರಡು ದಿನಗಳ ಜರ್ಮನಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸ್ಕ್ಲೋಸ್ ಎಲ್ಮಾವ್ನಲ್ಲಿ ಜಿ-7 ಶೃಂಗಸಭೆ 2022 ರಲ್ಲಿ ಭಾಗವಹಿಸಲಿದ್ದು, ವಿಶ್ವದ ಏಳು ಶ್ರೀಮಂತ ರಾಷ್ಟ್ರಗಳ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಜಿ7 ಶೃಂಗಸಭೆಗೆ ಮುನ್ನ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಬಂದಿದ್ದು ವಿಶೇಷವಾಗಿ ಗಮನ ಸೆಳೆಯಿತು. ಹಲವು ನಾಯಕರೊಂದಿಗೆ ಇದ್ದ ಮೋದಿ ಅವರನ್ನು ಬೈಡೆನ್ ಅವರು ಹಿಂದಿನಿಂದ ಬಂದು ಕರೆದು ಆತೀಮಾಯಾಗಿ ಮಾತನಾಡಿಸಿದರು. ಈ ವಿಡಿಯೋ ವೈರಲ್ ಆಗುತ್ತಿದೆ. ಹಲವರು ಇದು ಮೋದಿಯ ನಾಯಕತ್ವ ಏನು ಎನ್ನುವುದನ್ನೂ ಸೂಚಿಸುತ್ತದೆ ಎಂದು ಸಾಮಾಜಿಕ ತಾಣಗಳಲ್ಲಿ ಬರೆದು ಕೊಂಡಿದ್ದಾರೆ.
ರಷ್ಯಾದ ಉಕ್ರೇನ್ ಆಕ್ರಮಣ, ಆಹಾರ ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹ ಸೇರಿದಂತೆ ವಿವಿಧ ನಿರ್ಣಾಯಕ ಜಾಗತಿಕ ಸಮಸ್ಯೆಗಳನ್ನು ಚರ್ಚಿಸಲಿದ್ದಾರೆ. ಇಂಧನ, ಆಹಾರ ಭದ್ರತೆ, ಭಯೋತ್ಪಾದನೆ ನಿಗ್ರಹ, ಪರಿಸರ ಮತ್ತು ಪ್ರಜಾಪ್ರಭುತ್ವದಂತಹ ವಿಷಯಗಳ ಕುರಿತು ಭಾರತದ ಪ್ರಧಾನ ಮಂತ್ರಿ ಬಣದ ನಾಯಕರು ಮತ್ತು ಅದರ ಪಾಲುದಾರರೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
Related Articles
“ನಾನು ಇಂದು ಜಿ-7 ಶೃಂಗಸಭೆ 2022 ರಲ್ಲಿ ಭಾಗವಹಿಸಲಿದ್ದೇನೆ ಇದರಲ್ಲಿ ನಾವು ಪ್ರಮುಖ ಜಾಗತಿಕ ಸಮಸ್ಯೆಗಳನ್ನು ಚರ್ಚಿಸುತ್ತೇವೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಜಿ-7 ಅಮೆರಿಕಾ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್ ಅನ್ನು ಒಳಗೊಂಡಿರುವ ಅಂತಾರಾಷ್ಟ್ರೀಯ-ಸರಕಾರಿ ರಾಜಕೀಯ ಗುಂಪಾಗಿದೆ.