Advertisement

ಬೈಡೆನ್‌ಗೆ ಬೂಸ್ಟರ್‌ ಡೋಸ್‌

08:54 AM Sep 29, 2021 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಫೈಜರ್‌ ಲಸಿಕೆಯ ಮೂರನೇ ಡೋಸ್‌ ಅನ್ನು ನೀಡಲಾಗಿದೆ. ಈ ಬಗ್ಗೆ ಶ್ವೇತಭವನದ ವಕ್ತಾರರು ಖಚಿತಪಡಿಸಿದ್ದಾರೆ.

Advertisement

ಕಪ್ಪು ಮಾಸ್ಕ್ ಧರಿಸಿದ್ದ ಬೈಡೆನ್‌ ಅವರಿಗೆ ಆರೋಗ್ಯ ಸಿಬ್ಬಂದಿ ಲಸಿಕೆ ನೀಡುವ ಫೋಟೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ಅಮೆರಿಕದಲ್ಲಿ ಸೋಂಕಿಗಾಗಿ ಮೂರನೇ ಡೋಸ್‌ ಯಾರೂ ಸ್ವೀಕರಿಸಬಾರದು ಎಂಬ ಸಂಶಯ ನಿವಾರಿಸುವ ನಿಟ್ಟಿನಲ್ಲಿ ಬೈಡೆನ್‌ ಈ ಕ್ರಮ ಕೈಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇತ್ತೀಚೆಗಷ್ಟೇ ಎರಡು ಸಮಿತಿಗಳು ಬೂಸ್ಟರ್‌ ಡೋಸ್‌ ಪಡೆದುಕೊಳ್ಳಲು ಶಿಫಾರಸು ಮಾಡಿದ್ದವು. ಯಾವಾಗ ಫೋನ್‌ ಮಾಡ್ತಾರೆಹೇಳಲು ಸಾಧ್ಯವಿಲ್ಲ: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಅಧ್ಯಕ್ಷ ಜೋ ಬೈಡೆನ್‌ ಯಾವಾಗ ಫೋನ್‌ ಮಾಡಲಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ.

ಹೀಗೆಂದು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಸಾಕಿ ತಿಳಿಸಿದ್ದಾರೆ. ಸೋಮವಾರ ಮಾತನಾಡಿದ ಅವರು, “ಅಧ್ಯಕ್ಷರು ಪಾಕಿಸ್ತಾನ ಪ್ರಧಾನಿಗೆ ಯಾವಾಗ ಫೋನ್‌ ಮಾಡು ತ್ತಾರೋ ಗೊತ್ತಿಲ್ಲ. ಅವರು ಮಾತನಾಡಿಕೊಂಡರೆ ಮಾಧ್ಯಮದವರಿಗೆ ಮಾಹಿತಿ ನೀಡುತ್ತೇವೆ’ ಎಂದರು. ಕೆಲ ದಿನಗಳ ಹಿಂದೆ ಪಾಕ್‌ ಪಿಎಂ ಇಮ್ರಾನ್‌ ಖಾನ್‌ ಅಮೆರಿಕ ಅಧ್ಯಕ್ಷರು ತಮ್ಮ ಜತೆಗೆ ಮಾತನಾಡಿಯೇ ಇಲ್ಲವೆಂದು ಹೇಳಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next