Advertisement

ಉತ್ತರ ಪ್ರದೇಶದಲ್ಲಿ ಐಪಿಎಲ್‌ ಮಾದರಿ ವೈದ್ಯರ ಬಿಡ್ಡಿಂಗ್‌

12:54 PM Feb 04, 2018 | Team Udayavani |

ಲಕ್ನೋ: ದೇಶದಲ್ಲಿ ಐಪಿಲ್‌ ಕ್ರಿಕೆಟ್‌ ಇನ್ನೇನು ಶುರುವಾಗಲಿದೆ. ಕ್ರಿಕೆಟಿಗರ ಹರಾಜು ಈಗಾಗಲೇ ಮುಗಿದಿದೆ. ಈಗ ಹರಾಜಾಗುವ ಸರದಿ ಉತ್ತರ ಪ್ರದೇಶದ ವೈದ್ಯರದ್ದು!

Advertisement

ಇದೇನಿದು, ವೈದ್ಯರಿಗೂ ಹರಾಜು ಪದ್ಧತಿಯೇ ಎಂದು ಯೋಚಿಸುತ್ತಿದ್ದೀರಾ? ಉತ್ತರ ಪ್ರದೇಶದಲ್ಲಿ ವೈದ್ಯರ ಕೊರತೆ ತೀವ್ರವಾಗಿದ್ದು, ಅದನ್ನು ನೀಗಿಸುವುದಕ್ಕಾಗಿ ಸರಕಾರ ಐಪಿಎಲ್‌ ಬಿಡ್ಡಿಂಗ್‌ ಮಾದರಿ ಕ್ರಮ ಕೈಗೊಂಡಿದೆ. ಇದರ ಮತ್ತೂಂದು ವಿಶೇಷವೆಂದರೆ, ಉ.ಪ್ರ. ಸರಕಾರದ ಈ ನಿರ್ಧಾರಕ್ಕೆ ಕರ್ನಾಟಕವೇ ಮಾದರಿ.

ಕರ್ನಾಟಕದಲ್ಲಿ ಈಗಾಗಲೇ ಜಾರಿಯಲ್ಲಿರುವ ಈ ಪ್ರಕ್ರಿಯೆಯನ್ನು ಈಗ ಉ.ಪ್ರದೇಶ ಸರಕಾರವೂ ಅನುಸರಿಸಲಿದೆ. ಅದರಂತೆ, ವೈದ್ಯರು ತಮಗೆ ತಾವೇ ಮೂಲ ಬೆಲೆ ನಿಗದಿಪಡಿಸಿಕೊಂಡು ಹರಾಜು ಪ್ರಕ್ರಿ ಯೆಯಲ್ಲಿ ಭಾಗವಹಿಸಬೇಕು. ತಮಗೆ ತಾವೇ ವೇತ ನವನ್ನು ನಿಗದಿಪಡಿಸಿಕೊಂಡು, ತಾವು ಕೆಲಸ ಮಾಡ ಬೇಕೆಂದಿರುವ ಸರಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರದ ಹೆಸರು ಸೂಚಿಸಿ ಸರಕಾರಕ್ಕೆ ಅರ್ಜಿ ನೀಡಬೇಕು. 

ವೈದ್ಯರು ತಮ್ಮ ಹುದ್ದೆ ಮತ್ತು ವೇತನವನ್ನು ನಿಗದಿಪಡಿಸಿಕೊಂಡರೂ ಅಂತಿಮವಾಗಿ ಅಂದಾಜು ವೇತನ ಮತ್ತು ಸರಕಾರದ ನೀತಿ ನಿಯಮಗಳ ಆಧಾರದಲ್ಲಿ ಆರೋಗ್ಯ ಇಲಾಖೆಯೇ ವೈದ್ಯರ ವೇತನ ಮತ್ತು ಹುದ್ದೆಗಳನ್ನು ನಿರ್ಧರಿಸಲಿದೆ. ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸಲು ವೈದ್ಯರು ಹಿಂದೇಟು ಹಾಕುವಂಥ ಸಮಸ್ಯೆಯನ್ನೂ ಈ ಯೋಜನೆ ಬಗೆಹರಿಸಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಉತ್ತರ ಪ್ರದೇಶದಲ್ಲಿ ತಜ್ಞ ವೈದ್ಯರಿಗೆ ಸಾಕಷ್ಟು ಅಭಾವವಿದೆ. ಸರಕಾರಿ ವೈದ್ಯಕೀಯ ಕೇಂದ್ರಗಳಲ್ಲಿ ಕೆಲಸ ಮಾಡಲು ಉತ್ತೇಜಿಸಲು ವೈದ್ಯರ ನಿವೃತ್ತಿ ವಯಸ್ಸನ್ನು 60ರಿಂದ 62ಕ್ಕೆ ಏರಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಭಾರತೀಯ ಸಾರ್ವಜನಿಕ ಆರೋಗ್ಯ ಗುಣಮಟ್ಟ (ಐಪಿಎಚ್‌ಎಸ್‌)ದ ಪ್ರಕಾರ ಉ.ಪ್ರ.ದಲ್ಲಿ 27,686 ತಜ್ಞ ವೈದ್ಯರ ಹುದ್ದೆ ಖಾಲಿ ಇವೆ. 8,872 ಎಂಬಿಬಿಎಸ್‌ ಪದವೀಧರ ವೈದ್ಯರ ಅಭಾವ ಇದೆ. ಇದೇ ವೇಳೆ ಆರೋಗ್ಯ ಇಲಾಖೆ ನೇಮಕಾತಿ ಮಾಡಿರುವ ವೈದ್ಯರ ಸಂಖ್ಯೆ ಕೇವಲ 3,200.

Advertisement
Advertisement

Udayavani is now on Telegram. Click here to join our channel and stay updated with the latest news.

Next