Advertisement

ಬೀದರ:15 ಜನರಿಗೆ ಸೋಂಕು

11:33 AM Jul 10, 2020 | |

ಬೀದರ: ಗಡಿ ನಾಡು ಬೀದರನಲ್ಲಿ ಹೆಮ್ಮಾರಿ ಕೋವಿಡ್ ಸೊಂಕಿನ ಅಬ್ಬರ ಕಳೆದೆರಡು ದಿನಗಳಿಂದ ಕಡಿಮೆಯಾಗಿದ್ದು, ಗುರುವಾರ 15 ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 894ಕ್ಕೆ ಏರಿಕೆಯಾಗಿದೆ.

Advertisement

ಬೀದರ ಮತ್ತು ಹುಮನಾಬಾದ ತಾಲೂಕಿನಲ್ಲಿ ತಲಾ 6 ಮತ್ತು ಭಾಲ್ಕಿ ತಾಲೂಕಿನಲ್ಲಿ 3 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್‌ ರೂಂ. ಸಿಬ್ಬಂದಿಯೊಬ್ಬರಿಗೆ ಸೋಂಕು ಒಕ್ಕರಿಸಿದೆ. ಈ ಹಿನ್ನೆಲೆಯಲ್ಲಿ ಕಂಟ್ರೋಲ್‌ ರೂಂ ಕಚೇರಿಯನ್ನು ಸೀಲ್‌ ಡೌನ್‌ ಮಾಡಲಾಗಿದೆ ಎಂಬ ಅಧಿಕೃತ ಮಾಹಿತಿ ಇದೆ. ಬೀದರ್‌ ನಗರದ ಎಸ್‌ಪಿ ಕಚೇರಿ ಕಂಟ್ರೋಲ್‌ ರೂಂ ಕಚೇರಿ 1, ಮುಲ್ತಾನಿ ಕಾಲೋನಿ 01, ಚೌಬಾರಾ 02, ವಿದ್ಯಾನಗರ ಕಾಲೋನಿ 1, ಕೆಇಬಿ ರಸ್ತೆ 1 ಹಾಗೂ ಅಷ್ಟೂರಿನ ಮಂದಿರ ಬಳಿ ನಿವಾಸಿಗೆ ಸೋಂಕು ತಗುಲಿದೆ.

ಹುಮನಾಬಾದನ ಕುಪಲ್‌ತೋಡ್‌ ಮೊಹಲ್ಲಾದ 3, ಟೀಚರ್ ಕಾಲೋನಿಯ 1, ಪಿಡಬ್ಲ್ಯೂಡಿ ಕ್ವಾಟರ್ 1 ಹಾಗೂ ಹುಣಸಗೇರಾ ಗ್ರಾಮದಲ್ಲಿ 1 ಕೇಸ್‌ ಪತ್ತೆಯಾಗಿದ್ದರೆ, ಭಾಲ್ಕಿ ತಾಲೂಕು ಮಾಸಿಮಾಡ, ಮರ್ಜಾಪುರ, ಡೋಣಗಾಪುರ ಗ್ರಾಮದಲ್ಲಿ ತಲಾ 1 ಪ್ರಕರಣ ವರದಿಯಾಗಿವೆ. ಇಂದಿನ 15 ಜನ ಸೋಂಕಿತರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 894ಕ್ಕೆ ಏರಿಕೆಯಾಗಿದೆ. ಈ ಪೈಕಿ 49 ಮಂದಿ ಸಾವನ್ನಪ್ಪಿದ್ದರೆ, 562 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 283 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯ ಒಟ್ಟು 41,839 ಜನರ ಗಂಟಲ ದ್ರವದ ಮಾದರಿ ಪರೀಕ್ಷಿಸಲಾಗಿದ್ದು, ಈ ಪೈಕಿ 37, 827 ಜನರ ವರದಿ ನೆಗೆಟಿವ್‌ ಬಂದಿದೆ. ಇನ್ನೂ 3118 ಜನರ ವರದಿ ಬರಬೇಕಿದೆ

Advertisement

Udayavani is now on Telegram. Click here to join our channel and stay updated with the latest news.

Next