Advertisement

ನಿವೃತ್ತ ಪಿಎಸ್‌ಐ ಸೇರಿ ಇಬ್ಬರ ಬಲಿ

11:59 AM Jul 02, 2020 | Naveen |

ಬೀದರ: ಬೀದರ ಜಿಲ್ಲೆಯಲ್ಲಿ ಕೋವಿಡ್ ಮರಣ ಮೃದಂಗ ಮತ್ತೆ ಮುಂದುವರಿದಿದೆ. ಬುಧವಾರ ನಿವೃತ್ತ ಪಿಎಸ್‌ಐ ಸೇರಿ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ ಈಗ 21ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ದಿನ ಕಳೆದಂತೆ ಆತಂಕ ಹೆಚ್ಚುತ್ತಿದೆ.

Advertisement

ಬೀದರ ಓಲ್ಡ್‌ ಸಿಟಿಯ ನೂರಖಾ ತಾಲೀಮ್‌ ನಿವಾಸಿಯಾಗಿದ್ದ 63 ವರ್ಷದ ನಿವೃತ್ತ ಪಿಎಸ್‌ಐ ಸಾವನ್ನಪ್ಪಿದ್ದಾರೆ. ಔರಾದ ತಾಲೂಕಿನ ಠಾಣಾ ಕುಶನೂರ ಪೊಲೀಸ್‌ ಠಾಣೆಯಿಂದ ಮೂರು ವರ್ಷಗಳ ಹಿಂದೆಯಷ್ಟೇ ನಿವೃತ್ತರಾಗಿದ್ದರು. ಜೂ.28ರಂದು ತೀವ್ರ ಉಸಿರಾಟದ ತೊಂದರೆ ಹಿನ್ನೆಲೆ ಬ್ರಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬುಧವಾರ ಪ್ರಾಣ ಬಿಟ್ಟಿದ್ದಾರೆ. ಅವರ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿತ್ತು. ತಾಲೂಕಿನ ಯದಲಾಪುರ ಗ್ರಾಮದ 80 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆ, ಶೀತ ಜ್ವರ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಕೋವಿಡ್‌ -19 ಪರೀಕ್ಷೆ ವರದಿಯಲ್ಲೂ ಪಾಸಿಟಿವ್‌ ಬಂದಿತ್ತು. ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ. ಇನ್ನು ಬುಧವಾರ ಜಿಲ್ಲೆಯಲ್ಲಿ ಒಟ್ಟು 8 ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಬೀದರ ತಾಲೂಕಿನ 3, ಚಿಟಗುಪ್ಪ 2 ಮತ್ತು ಭಾಲ್ಕಿ ತಾಲೂಕಿನ 1 ಕೇಸ್‌ಗಳು ಸೇರಿವೆ.

ಬೀದರ ನಗರದ 32 ವರ್ಷದ ಪುರುಷ, 34 ವರ್ಷದ ಪುರುಷ, ತಾಲೂಕಿನ ಅಮಲಾಪುರದ 31 ವರ್ಷದ ಪುರುಷ, ಚಿಟಗುಪ್ಪ ಪಟ್ಟಣದ 67 ವರ್ಷದ ಪುರುಷ, ತಾಲೂಕಿನ ಮುತ್ತಂಗಿ ಗ್ರಾಮದ 25 ವರ್ಷದ ಮಹಿಳೆ ಹಾಗೂ ಭಾಲ್ಕಿ ತಾಲೂಕಿನ 55 ವರ್ಷದ ಮಹಿಳೆಗೆ ಸೋಂಕು ವಕ್ಕರಿಸಿದೆ.

ಬೀದರ ಜಿಲ್ಲೆಯಲ್ಲಿ ಈವರೆಗೆ 615 ಪಾಸಿಟಿವ್‌ ಪ್ರಕರಣಗಳು ವರದಿ ಆದಂತಾಗಿದೆ. ಇದರಲ್ಲಿ 21 ಜನ ಸಾವನ್ನಪ್ಪಿದ್ದರೆ 500 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇನ್ನೂ 94 ಪ್ರಕರಣಗಳು ಸಕ್ರಿಯವಾಗಿವೆ. ಈವರೆಗೆ 38,345 ಮಂದಿಯ ಗಂಟಲು ದ್ರವ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಈ ಪೈಕಿ 36,025 ಜನರ ವರದಿ ನೆಗೆಟಿ ಬಂದಿದ್ದು, ಇನ್ನೂ 1705 ಜನರ ವರದಿ ಬರಬೇಕಿದೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

ಎಸ್‌ಪಿ ಕ್ವಾರಂಟೈನ್‌
ಸೋಂಕಿತ ಪೊಲೀಸ್‌ ಅಧಿಕಾರಿಯ ಸಂಪರ್ಕ ಹಿನ್ನೆಲೆಯಲ್ಲಿ ಬೀದರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌. ನಾಗೇಶ ಅವರು ಕಳೆದೆರಡು ದಿನಗಳಿಂದ ಹೋಮ್‌ ಕ್ವಾರಂಟೈನ್‌ ಆಗಿದ್ದಾರೆ. ಡಿಎಆರ್‌ ಇನ್ಸಪೆಕ್ಟರ್‌ ಅವರಲ್ಲಿ ಕೊರೊನಾ ಪಾಸಿಟಿವ್‌ ಪತ್ತೆಯಾಗಿದ್ದು, ಎರಡು ದಿನ ಹಿಂದೆ ಸದರಿ ಅಧಿಕಾರಿ ಎಸ್‌ಪಿ ಅವರ ಸಂಪರ್ಕಕ್ಕೆ ಬಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next