Advertisement

ಜನಪ್ರತಿನಿಧಿ  ಕ್ರೀಡಾಕೂಟ ಆಯೋಜನೆಯಾಗಲಿ

04:43 PM Feb 14, 2021 | Team Udayavani |

ಬೀದರ: ಜನಪ್ರತಿನಿಧಿ ಗಳ ಕ್ರೀಡಾಕೂಟ·ಆಯೋಜಿಸುವ ಅಗತ್ಯ ಇದೆ.ಕ್ರೀಡಾಕೂಟದಿಂದ ಜನಪ್ರತಿನಿ ಧಿಗಳಿಗೂ ಮನೋರಂಜನೆ ಸಿಗಲಿದೆಮತ್ತು ಅವರ ಪ್ರತಿಭಾ ಪ್ರದರ್ಶನಕ್ಕೂವೇದಿಕೆ ದೊರಕಲಿದೆ ಎಂದು ಜಿಪಂಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ

Advertisement

ಅಭಿಪ್ರಾಯಪಟ್ಟರು.ರಾಜ್ಯ ಸರ್ಕಾರಿ ನೌಕರರಜಿಲ್ಲಾಮಟ್ಟದ ಕ್ರೀಡಾಕೂಟದ ಪ್ರಯುಕ್ತನಗರದ ಜಿಲ್ಲಾ ರಂಗಮಂದಿರದಲ್ಲಿಆಯೋಜಿಸಿದ್ದ ಸಂಗೀತ ಸಂಜೆಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರು, ವಿದ್ಯಾರ್ಥಿಗಳು, ಶಿಕ್ಷಕರು,ಸರ್ಕಾರಿ ನೌಕರರು ಸೇರಿದಂತೆ ಹಲವುವರ್ಗದವರಿಗೆ ವಿವಿಧ ಬಗೆಯಕ್ರೀಡಾಕೂಟಗಳು ಇವೆ. ಆದರೆ,ಜನಪ್ರತಿನಿಧಿ ಗಳಿಗೆ ಯಾವುದೇಕ್ರೀಡಾಕೂಟ ಇಲ್ಲ ಎಂದು ಬೇಸರ
ವ್ಯಕ್ತಪಡಿಸಿದರು.

ಬೀದರನಲ್ಲಿ ಸರ್ಕಾರಿ ನೌಕರರರಾಜ್ಯಮಟ್ಟದ ಕ್ರೀಡಾಕೂಟಸಂಘಟಿಸಿದ್ದಲ್ಲಿ ಜಿಪಂನಿಂದ ಅಗತ್ಯನೆರವು ನೀಡಲಾಗುವುದು ಎಂದು
ಭರವಸೆ ನೀಡಿದರು. ಬಜಿಪಂ ಸಿಇಒ ಗ್ಯಾನೇಂದ್ರಕುಮಾರಗಂಗ್ವಾರ್‌ ಮಾತನಾಡಿ, ಕ್ರೀಡಾ
ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದಮನಸ್ಸು ಉಲ್ಲಸಿತಗೊಳುತ್ತದೆ. ಆರೋಗ್ಯ ವೃದ್ಧಿಯೂ ಆಗುತ್ತದೆ.

ಸರ್ಕಾರಿ ನೌಕರರಿಗೆ ಸರ್ಕಾರ ಸಕಲಸೌಕರ್ಯಗಳನ್ನು ನೀಡುತ್ತಿದೆ. ನೌಕರರುಸರ್ಕಾರದ ಆಶಯಕ್ಕೆ ಅನುಗುಣವಾಗಿಕಾರ್ಯ ನಿರ್ವಹಿಸಬೇಕು. ಸರ್ಕಾರದವಿವಿಧ ಯೋಜನೆಗಳನ್ನು ಅರ್ಹರಿಗೆತಲುಪಿಸಬೇಕು ಎಂದು ಸಲಹೆಮಾಡಿದರು.

ನೌಕರರ ಸಂಘದ ಜಿಲ್ಲಾಧ್ಯಕ್ಷರಾಜೇಂದ್ರಕುಮಾರ ಗಂದಗೆ ಅಧ್ಯಕ್ಷತೆವಹಿಸಿದ್ದರು. ಬಿದರಿ ವೇದಿಕೆಯಗಾಯಕಿ ರೇಖಾ ಸೌದಿ, ಬೆಂಗಳೂರಿನಗೋವಿಂದ ಕರ್ನೂಲ್‌ ಹಾಗೂತಂಡದವರು ಪ್ರಸಿದ್ಧ ಕನ್ನಡ, ಹಿಂದಿಹಾಗೂ ಜಾನಪದ ಗೀತೆಗಳನ್ನುಹಾಡಿ ಶ್ರೋತೃಗಳ ಮನ ತಣಿಸಿದರು.ನೌಕರರಿಂದ ನಡೆದ ಜಾನಪದ ಗೀತೆಗಾಯನ, ಭರತ ನಾಟ್ಯ, ಭಜನೆ, ನಾಟಕಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು
ಗಮನ ಸೆಳೆದವು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಸಹಾಯಕ ನಿರ್ದೇಶಕ ಸಿದ್ರಾಮಸಿಂಧೆ, ಕ್ರೀಡಾ ಇಲಾಖೆಯ
ಸಹಾಯಕ ನಿರ್ದೇಶಕ ಆರ್‌.ಜಿ.ನಾಡಗೀರ, ನೌಕರರ ಸಂಘದ ಜಿಲ್ಲಾಉಪಾಧ್ಯಕ್ಷರಾದ ಬಸವರಾಜ ಜಕ್ಕಾ,ಪ್ರಭುಲಿಂಗ, ಪ್ರಧಾನ ಕಾರ್ಯದರ್ಶಿರಾಜಶೇಖರ ಮಂಗಲಗಿ, ಕ್ರೀಡಾಕಾರ್ಯದರ್ಶಿಗಳಾದ ಅಬ್ದುಲ್‌ಸತ್ತಾರ್‌, ಸುಮತಿ ರುದ್ರಾ ಇದ್ದರು.
ರಾಜಕುಮಾರ ಹೊಸದೊಡ್ಡೆನಿರೂಪಿಸಿದರು. ಯೋಗೇಂದ್ರಯದಲಾಪುರೆ ಸ್ವಾಗತಿಸಿದರು.ಮನೋಹರ ಕಾಶಿ ವಂದಿಸಿದರು.

Advertisement

ಓದಿ : ಎಫ್‌ಐಆರ್‌ನಿಂದ ಮಿರಾಶಿ ಹೆಸರು ಕೈಬಿಡಲು ಆಗ್ರಹ

Advertisement

Udayavani is now on Telegram. Click here to join our channel and stay updated with the latest news.

Next