Advertisement

Bidar: ಸಿಪಿಐ ಮೇಲೆ ದಾಳಿ ನಡೆಸಿ ಅಟ್ಟಹಾಸ ಮೆರೆದ ರೌಡಿಶಿಟರ್ ಕಾಲಿಗೆ ಗುಂಡೇಟು…

09:36 AM May 30, 2024 | Team Udayavani |

ಬೀದರ್: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ರೌಡಿಶಿಟರ್ ಓರ್ವನನ್ನು ಬಂಧಿಸಿ ಕರೆತಂದ ನೂತನ ನಗರ ಠಾಣೆ ಸಿಪಿಐ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಬುಧವಾರ ತಡರಾತ್ರಿ ನಡೆದಿದ್ದು ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ರೌಡಿಶಿಟರ್ ಕಾಲಿಗೆ ಗುಂಡು ಹಾರಿಸಿದ್ದಾರೆ.

Advertisement

ಏನಿದು ಘಟನೆ:
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ರೌಡಿಶಿಟರ್ ರಸೂಲ್ ನನ್ನು ನೂತನ ನಗರ ಠಾಣೆ ಸಿಪಿಐ ಸಂತೋಷ ತಡಪಲ್ಲೆ ಹಾಗೂ ಸಿಬಂದಿ ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದಾರೆ ಈ ವೇಳೆ ಠಾಣೆಯಲ್ಲೇ ರಸೂಲ್ ಬ್ಲೇಡ್ ನಿಂದ ತನ್ನ ಕೈಗಳನ್ನು ಕೊಯ್ದುಕೊಂಡಿದ್ದಾನೆ ಕೂಡಲೇ ಆತನನ್ನು ಸಿಬಂದಿಗಳು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವ ವೇಳೆ ಆತನ ಬಳಿಯಿದ್ದ ಚೂರಿಯಿಂದ ಸಿಪಿಐ ಸಂತೋಷ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಈ ವೇಳೆ ಪೊಲೀಸ್ ಸಿಬಂದಿ ಆತ್ಮರಕ್ಷಣೆಗಾಗಿ ರೌಡಿಶಿಟರ್ ಕಾಲಿಗೆ ಗುಂಡು ಹಾರಿಸಿದ್ದಾರೆ, ಬಳಿಕ ಆತನನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಈ ವೇಳೆ ಅಲ್ಲಿನ ವೈದ್ಯರು ಮತ್ತು‌ ಸಿಬ್ಬಂದಿಗಳ ಜತೆ ಗಲಾಟೆ ನಡೆಸಿ ಪುಂಡಾಟ ಮೆರೆದಿದ್ದಾನೆ.

ರೌಡಿಶಿಟರ್ ರಸೂಲ್ ಗೆ ಮಾರಣಾಂತಿಕ ಕಾಯಿಲೆ ಇರುವ ಹಿನ್ನಲೆ ಸಿಪಿಐ ಸಂತೋಷ‌ ಅವರ ಆರೋಗ್ಯದ ಆತಂಕ ಇದ್ದು, ಕಲ್ಬುರ್ಗಿ ಫೋರ್ಟಿಸ್ ಆಸ್ಪತ್ರೆಗೆ‌ ದಾಖಲು ಮಾಡಿ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Mani Shankar: 1962ರಲ್ಲಿ ಚೀನ ದಾಳಿ ಮಾಡಿತ್ತು ಎನ್ನಲಾದ..!: ಮಣಿಶಂಕರ್‌ ಮತ್ತೂಂದು ವಿವಾದ

Advertisement

Udayavani is now on Telegram. Click here to join our channel and stay updated with the latest news.

Next