Advertisement
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಡಾ ಅವ್ಯವಹಾರ ಪ್ರಕರಣ ಲೋಕಾಯುಕ್ತ ಸಂಸ್ಥೆಗೆ ವಹಿಸಲಾಗಿದೆ. ಆದರೆ, ಲೋಕಾಯುಕ್ತ ರಾಜ್ಯ ಸರಕಾರದ ಅಧೀನದಲ್ಲಿರುವುದರಿಂದ ಪಾರದರ್ಶಕ ತನಿಖೆ ಸಾಧ್ಯವಿಲ್ಲ. ಎಫ್ಐಆರ್ ದಾಖಲಿಸಲೂ ಒಂದು ದಿನ ವಿಳಂಬ ಮಾಡಲಾಗಿತ್ತು. ಹೀಗಾಗಿ ನಿಷ್ಪಕ್ಷಪಾತ ತನಿಖೆ ಆಗಿ, ಸತ್ಯಾಂಶ ಹೊರಬರಬೇಕಾದರೆ ಸಿಬಿಐಗೆ ವಹಿಸುವುದು ಸೂಕ್ತ ಎಂದು ಹೇಳಿದರು.
Related Articles
Advertisement
ಶಾಸಕ ಶರಣು ಸಲಗರ್ ಮಾತನಾಡಿ, ಸಿಎಂ ತಮ್ಮ 40 ವರ್ಷ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ ಎಂದು ಜಂಬ ಕೊಚ್ಚಿಕೊಂಡಿದ್ದರು. ಬಿಎಸ್‌ವೈ ವಿರುದ್ಧ ದೂರು ದಾಖಲಾದಾಗ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸುವಂತೆ ಈ ಹಿಂದೆ ಸಿದ್ದರಾಮಯ್ಯ ಅವರೇ ಹೇಳಿದ್ದರು. ಈಗ ಅವರು ಕೂಡ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಬಾಬು ವಾಲಿ, ಪೀರಪ್ಪ ಔರಾದೆ, ಕಿರಣ ಪಾಟೀಲ, ಬಸವರಾಜ ಪವಾರ್ ಮತ್ತು ಗುರುನಾಥ ರಾಜಗೀರಾ ಇದ್ದರು.
ನಾಯಕರ ವಿರುದ್ಧ ಹೇಳಿಕೆ ಸರಿಯಲ್ಲ: ಶೈಲೇಂದ್ರ ಬೆಲ್ದಾಳೆ ಯತ್ನಾಳ್ ಹಿರಿಯ ನಾಯಕರಾಗಿದ್ದು, ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಿದವರು. ಈ ಹಿಂದೆ ಬಿಜೆಪಿ ಬಿಟ್ಟು, ಮತ್ತೆ ವಾಪಸ್ಸಾದವರು. ಅವರಿಗೆ ಪಕ್ಷ ಗೌರವ, ಅಧಿಕಾರ ಎಲ್ಲವನ್ನು ನೀಡಿದೆ. ಆದರೆ, ನಮ್ಮ ನಾಯಕರ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ. ಬಸವನಗೌಡ ಪಾಟೀಲ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷರು ಸೇರಿ ಹಿರಿಯ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದು, ಇದೆಲ್ಲವನ್ನು ಬಿಜೆಪಿ ವರಿಷ್ಠ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಿದೆ. ಶೀಘ್ರದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಕಾರ್ಯದರ್ಶಿ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು. “ಬಿಜೆಪಿ ಸದಸ್ಯತ್ವಕ್ಕೆ ಬೀದರ ಜಿಲ್ಲೆಗೆ 3.80 ಲಕ್ಷ ಗುರಿ ಇದ್ದು, 20 ದಿನದಲ್ಲಿ 2.25 ಲಕ್ಷ (ಶೇ.60) ಸದಸ್ಯತ್ವ ಆಗಿದೆ. ರಾಜ್ಯದಲ್ಲಿ ಬೀದರ ಮೊದಲ ಸ್ಥಾನದಲ್ಲಿದೆ. ಅ. 15ರವರೆಗೆ ಶೇ. 100 ರಷ್ಟು ಗುರಿ ಸಾಧಿಸಲಾಗುವುದು. ಬಸವಕಲ್ಯಾಣ ಮತ್ತು ಔರಾದ್ ಕ್ಷೇತ್ರಗಳು ತಮ್ಮ ಗುರಿಯನ್ನು ಈಗಾಗಲೇ ಸಾಧಿಸಿವೆ.” -ಸೋಮನಾಥ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ, ಬೀದರ್