Advertisement

ಬೀದರ್ :ಪೊಲೀಸರಿಂದ ಮನೆಗಳ್ಳತನ ಆರೋಪಿಯ ಬಂಧನ! 5.32 ಲಕ್ಷದ ಚಿನ್ನಾಭರಣ ವಶ

09:14 PM Dec 03, 2020 | sudhir |

ಬೀದರ್ : ನಗರದ ಗುಮ್ಮೆ ಕಾಲೋನಿ ಮತ್ತು ರಾಂಪುರೆ ಕಾಲೋನಿಯ ಮನೆಯಲ್ಲಿ ಕನ್ನ ಹಾಕಿದ್ದ ಆರೋಪಿಯನ್ನು ಜಿಲ್ಲಾ ಪೊಲೀಸರ ತಂಡ ಬಂಧಿಸಿ, 5.32 ಲಕ್ಷ ರೂ. ಚಿನ್ನಾಭರಣ ಮತ್ತು ಬೆಳ್ಳಿ ಆಭರಣಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಮೂಲತ: ಪಶ್ಚಿಮ ಬಂಗಾಳದ ಮುದ್ದಾರಾಮ ಕೃಷ್ಣಾಪುರ ಗ್ರಾಮದ ಬಾಬು ಶೇಖ್ ಜಾಫರ್ (30) ಬಂಧಿತ ಆರೋಪಿ. ಕೂಲಿ ಕೆಲಸ ಮಾಡಿಕೊಂಡಿರುವ ಈತ ಸದ್ಯ ಬಸವಕಲ್ಯಾಣದ ಕೆಹೆಚ್‌ಬಿ ಕಾಲೋನಿಯಲ್ಲಿ ವಾಸಿಸುತ್ತಿದ್ದಾನೆ. ಅ. 23ರಂದು ಗುಮ್ಮೆ ಕಾಲೋನಿಯ ಸಹಾಯಕ ಪ್ರಾಧ್ಯಾಪಕ ಡಾ. ರವೀಂದ್ರ ಬಸಪ್ಪ ಅವರ ಮನೆಯಲ್ಲಿದ್ದ 3.39 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳುವು ಪ್ರಕರಣಕ್ಕೆ ಸಂಬಂಧಿಸಿ ಗಾಂಧಿ ಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಜಾಡು ಹಿಡಿದ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದ ವೇಳೆ ತಾನು ಎರಡು ಕಡೆ ಕಳ್ಳತನ ನಡೆಸಿದ ಕುರಿತು ಮಾಹಿತಿ ನೀಡಿದ್ದಾನೆ.

ಮಾರ್ಕೆಟ್ ಸಿಪಿಐ ಮಲ್ಲಮ್ಮಾ ಚೌಬೆ, ಗಾಂಧಿ ಗಂಜ್ ಠಾಣೆಯ ಪಿಎಸ್‌ಐಗಳಾದ ಮಂಜನಗೌಡ ಪಾಟೀಲ, ದ್ರೌಪತಿ ನೇತೃತ್ವದ ತಂಡ ಡಿ.2ರಂದು ನಗರದ ಮೇರಾಜ್ ಕಾಲೋನಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಬಾಬು ಶೇಖ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಎರಡು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತನಿಂದ 5.32 ಲಕ್ಷ ರೂ. ಮೌಲ್ಯದ 90 ಗ್ರಾಂ. ಚಿನ್ನಾಭರಣ ಹಾಗೂ 1100 ಗ್ರಾಂ. ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿದ್ದಾರೆ. ತಂಡದಲ್ಲಿ ಸಿಬ್ಬಂದಿಗಳಾದ ದಿಲೀಪಕುಮಾರ ಮುರ್ಕಿ, ಡೇವಿಡ್, ಸಂಜುಕುಮಾರ, ವಿಶ್ವನಾಥ, ಅಪ್ರೋಜ್, ಅಶೋಕ, ಮೊಗಪ್ಪ, ಶ್ರೀನಿವಾಸ, ರಾಜಕುಮಾರ, ಆರೀಫ್, ಇರ್ಫಾನ್ ಮತ್ತು ಶಿವಕುಮಾರ ಮಹಾಜನ್ ಇದ್ದರು.

ಪ್ರಕರಣವನ್ನು ಬೇಧಿಸಿರುವ ಅಧಿಕಾರಿ, ಸಿಬ್ಬಂದಿಗಳ ತಂಡದ ಕಾರ್ಯವನ್ನು ಎಸ್‌ಪಿ ಡಿಎಲ್ ನಾಗೇಶ ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next