ಭಾಲ್ಕಿ: ಸಾಲಬಾಧೆ ತಾಳಲಾರದೇ ವ್ಯಕ್ತಿಯೊಬ್ಬರು ತಮ್ಮ ಇಬ್ಬರು ಗಂಡು ಮಕ್ಕಳ ಜೊತೆ ತಮ್ಮ ಸ್ವಂತ ಹೊಲದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ (ಜ.11) ರಾತ್ರಿ ನಡೆದಿದೆ.
ತಾಲೂಕಿನ ಲಂಜವಾಡ ಗ್ರಾಮದ ವಿಕ್ರಂ ಜಾಲಿಂದರ್ ಬಿರಾದಾರ್ (36) ಮೃತ ರೈತ ಹಾಗೂ ಮಕ್ಕಳಾದ ಸಂಗಮೇಶ ವಿಕ್ರಂ (6), ಸುದರ್ಶನ್ ವಿಕ್ರಂ (8) ಮೃತರು.
ರೈತ ವಿಕ್ರಂಗೆ ಲಕ್ಕನಗಾವ್ ಎಸ್.ಬಿ.ಐ ಬ್ಯಾಂಕಿನಲ್ಲಿ 50,000/- ರೂ. ಸೇರಿದಂತೆ ಖಾಸಗಿಯಾಗಿ 6 ಲಕ್ಷ ರೂ ಸಾಲವಿತ್ತು. ಸುಮಾರು ಎರಡು ವರ್ಷಗಳಿಂದ ಈ ಸಾಲ ತೀರಿಸಲು ಪ್ರಯತ್ನಪಟ್ಟರೂ ಬಗೆಹರಿಯದ್ದಿದ್ದಾಗ ತಮ್ಮ ಮಕ್ಕಳನ್ನು ಕೂಡಾ ಕರೆದುಕೊಂಡು ತಮ್ಮ ಸ್ವಂತ ಹೊಲದಲ್ಲಿರುವ ಬಾವಿಗೆ ಹಾರಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.