Advertisement
ಮಾಳೆಗಾಂವ್, ವಿಳಾಸಪುರ ಗ್ರಾಮಗಳ ಹೊಲಗಳಲ್ಲಿ ಮಳೆ ನೀರು ನಿಂತು ಹೆಸರು, ಉದ್ದು, ತೊಗರಿ ಬೆಳೆ ಹಾನಿಯಾಗಿರುವುದನ್ನು ವೀಕ್ಷಿಸಿದರು. ಬೆಳೆ ಸಮೀಕ್ಷೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಹಾನಿ ವಾಸ್ತವ ವರದಿ ಸಲ್ಲಿಸಿ, ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸಬೇಕು. ಮನೆ ಕಳೆದುಕೊಂಡವರಿಗೂ ಪರಿಹಾರ ಕೊಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
Related Articles
Advertisement
ವಿಳಾಸಪುರ ಗ್ರಾಮದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಆರ್.ಎ.ಡಿ. ಅಡಿಯಲ್ಲಿ 39 ಫಲಾನುಭವಿಗಳಿಗೆ ತಲಾ 20 ಸಾವಿರ ರೂಪಾಯಿ ಮೊತ್ತದ ಎಮ್ಮೆ, ವರ್ಮಿ ಕಾಂಪೊಸ್ಟ್ ಪೊರ್ಟೆಬಲ್ ಘಟಕ ಹಾಗೂ ಆಹಾರ ಸಂಗ್ರಹ ಘಟಕ ವಿತರಿಸಿದರು. ಸಬ್ಸಿಡಿ ಬೆಲೆಯಲ್ಲಿ ಸ್ಪಿಂಕ್ಲರ್ ವಿತರಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ ದಿಲೀಪ ಬದೋಲೆ, ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ, ತಹಶೀಲ್ದಾರ್ ಡಿ.ಜಿ. ಮಹಾತ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕಿರಣ ಪಾಟೀಲ, ಕೃಷಿ ಉಪ ನಿರ್ದೇಶಕ ರಾಘವೇಂದ್ರ ಎನ್., ಸಹಾಯಕ ನಿರ್ದೇಶಕ ಅನ್ಸಾರಿ ಎಂ.ಎ.ಕೆ. ಹಾಜರಿದ್ದರು.