Advertisement

22 ಸ್ಥಾನದಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಗೆಲುವು

12:32 PM Apr 21, 2019 | |

ಬೀದರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶದ 21 ರಾಜ್ಯಗಳ ವಿವಿಧ ಪಕ್ಷಗಳು ಒಗ್ಗೂಡಿ ಮಹಾಘಟಬಂಧನ ರಚನೆಗೊಂಡಿರುವುದು ಕರ್ನಾಟಕದಲ್ಲಿ. ಹಾಗಾಗಿ ಈ ಚುನಾವಣೆಯಲ್ಲಿ ರಾಜ್ಯದ 22 ಸ್ಥಾನಗಳಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಭವಿಷ್ಯ ನುಡಿದರು.

Advertisement

ನಗರದಲ್ಲಿ ಶನಿವಾರ ಮೈತ್ರಿ ಪಕ್ಷಗಳಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ ಆಗುವ ಸಂದರ್ಭದಲ್ಲಿ ವಿವಿಧ ರಾಜ್ಯದ ವಿವಿಧ ಪಕ್ಷಗಳ ಮುಖಂಡರು ರಾಜ್ಯಕ್ಕೆ ಆಗಮಿಸಿದ್ದರು. ಲೋಕ ಸಮರದಲ್ಲಿ ಮೈತ್ರಿಯಾಗಿ ಎದುರಿಸುವ ನಿರ್ಣಯ
ಇಲ್ಲಿಂದಲೇ ಶುರುವಾಗಿದ್ದು, ಮೈತ್ರಿ ಅಭ್ಯರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಜಯಗಳಿಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಮೋದಿ ಗಾಳಿ ಇರುವ ಕಾರಣ ರಾಜ್ಯದಲ್ಲಿ 17 ಸ್ಥಾನಗಳು ಬಂದಿದ್ದು, ಇದೀಗ ಮೋದಿ ಗಾಳಿ ಮಾಯವಾಗಿದ್ದು, 22ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು.

ಮೋದಿ ಆಡಳಿತ ವಿಫಲ: ರಾಜ್ಯದ ವಿವಿಧೆಡೆ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವ ಪ್ರಧಾನಿ ಮೋದಿ ಅವರು, ಕೇಂದ್ರ ಸರ್ಕಾರದಿಂದ ಎಷ್ಟು ಅನುದಾನ ನೀಡಿದ್ದಾರೆ ಎಂದು ಏಕೆ ಹೇಳುತಿಲ್ಲ? ರಾಜ್ಯದ ರೈತರಿಗೆ ಕೇಂದ್ರದಿಂದ ಯಾವ ಯೋಜನೆಗಳನ್ನು ನೀಡಿದ್ದಾರೆ ಎಂದು ಯಾಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು. ದೇಶದ ವಿವಿಧ ರಾಜ್ಯಗಳ ರೈತರು ಸಾಲಮನ್ನಾ ಮಾಡುವಂತೆ ದೆಹಲಿಯಲ್ಲಿ ಭಾರಿ ಪ್ರತಿಭಟನೆ ನಡೆಸಿದರೂ ಕೂಡ
ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಇದೀಗ ಚುನಾವಣೆ
ಎದುರಾದ ಸಂದರ್ಭದಲ್ಲಿ ಮೂರು ತಿಂಗಳಿಗೆ ಎರಡು ಸಾವಿರ ನೀಡುವುದಾಗಿ ಹೇಳುತ್ತಿರುವುದು
ಎಷ್ಟು ಸರಿ. ಮೋದಿ ಸರ್ಕಾರ ನೀಡಿದ ಭರವಸೆಗಳು ಇಂದಿಗೂ ಈಡೇರಿಸಿಲ್ಲ. ಆದರೆ, ಭಾವನಾತ್ಮಕ ವಿಷಯಗಳನ್ನು ಬಳಸಿಕೊಂಡು ಮತ ಕೇಳುತ್ತಿದ್ದಾರೆ
ಎಂದು ಆರೋಪಿಸಿದರು.

ಖಂಡ್ರೆ ಗೆಲವು ಖಚಿತ: ಬೀದರ್‌ ಕ್ಷೇತ್ರದಿಂದ ಸ್ಪರ್ಧೆ
ನಡೆಸುತ್ತಿರುವ ಕೆಪಿಸಿಸಿ ಕಾರ್ಯಾಧ್ಯ ಈಶ್ವರ ಖಂಡ್ರೆ
ಗೆಲುವು ಖಚಿತವಾಗಿದೆ ಎಂದು ಸಚಿವರಾದ ಬಂಡೆಪ್ಪ ಖಾಶೆಂಪೂರ್‌ ಹಾಗೂ ರಾಜಶೇಖರ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪತ್ರಕರ್ತರ
ಪ್ರಶ್ನೆಗೆ ಉತ್ತರಿಸಿದ ಅವರು, ಮೈತ್ರಿ ಪಕ್ಷದ ಅಭ್ಯರ್ಥಿ
ಗೆಲುವಿಗಾಗಿ ಜಿಲ್ಲೆಯ ಯಾವ ಸಚಿವರ ಮೇಲೆ ಯಾರೂ ಒತ್ತಡ ಹಾಕಿಲ್ಲ. ಚುನಾವಣೆ ನಂತರ ಯಾರ ಸಚಿವ ಸ್ಥಾನಕೂಡ ಹೋಗುವುದಿಲ್ಲ. ಈಶ್ವರ ಖಂಡ್ರೆ ಗೆಲುವಿಗೆ ಎಲ್ಲರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಕ್ರೀಡಾ ಸಚಿವ ರಹೀಂ ಖಾನ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ
ಸೋಲಪೂರ್‌, ಚಂದ್ರಸಿಂಗ್‌, ರಾಜು ಚಿಂತಮಣ್ಣಿ,
ದತ್ತಾತ್ರಿ ಮೂಲಗೆ, ಅಶೋಕ ಕೊಡುಗೆ ಇದ್ದರು.

ಮೈತ್ರಿ ಸರ್ಕಾರ ರಾಜ್ಯದ ರೈತರ ಪರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿ ರೈತರ ನೇರವಿಗೆ ಧಾವಿಸುತ್ತಿದೆ. ಅಲ್ಲದೆ, ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಘೊಷಣೆ ಮಾಡಿದ ಸಾಲಮನ್ನಾ ಯೋಜನೆಯ ಲಾಭ ಜೂನ್‌ 10ರ ವರೆಗೆ ಎಲ್ಲ ರೈತರಿಗೆ ಸಿಗಲಿದೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ವಿಳಂಬವಾಗಿದೆ. ವಿರೋಧ ಪಕ್ಷದವರು ಏ.23 ಹಾಗೂ ಮೇ 23ರಂದು ಸರ್ಕಾರ ಬಿಳುತ್ತದೆ ಎಂದು ಹೇಳುತ್ತಿದ್ದಾರೆ. ಮೈತ್ರಿ ಸರ್ಕಾರ
ರಚನೆಗೊಂಡ ದಿನದಿಂದ ಈ ಮಾತುಗಳನ್ನು ಆಡುತ್ತಲೇ ಇದ್ದಾರೆ. ಆದರೆ, ಮೈತ್ರಿ ಸರ್ಕಾರ ಸುಭದ್ರವಾಗಿದೆ.
ಬಂಡೆಪ್ಪ ಖಾಶೆಂಪೂರ್‌,
ಜಿಲ್ಲಾ ಉಸ್ತುವಾರಿ ಸಚಿವರು

Advertisement
Advertisement

Udayavani is now on Telegram. Click here to join our channel and stay updated with the latest news.

Next