Advertisement

ಶರಣರ ನಾಡಲ್ಲಿ ಕೈ-ಕಮಲ ಪೈಪೋಟಿ

12:49 PM Apr 18, 2019 | |

ಬಸವಕಲ್ಯಾಣ: ಶರಣರ ನಾಡು, ವಿಶ್ವ ಗುರು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Advertisement

ಕಳೆದ ಲೋಕಸಭೆ ಚುನಾಣೆಯಲ್ಲಿ ಮೋದಿ ಅಲೆಯಲ್ಲಿ ಜಯಗಳಿಸಿದ ಭಗವಂತ ಖೂಬಾ ಇದೀಗ ಎರಡನೇ ಬಾರಿಗೆ ಅಧಿ ಕಾರ ಹಿಡಿಯಬೇಕು ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಅದೇ ರೀತಿ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಪ್ರಥಮ ಬಾರಿಗೆ ಲೋಕಸಭೆ
ಚುನಾವಣೆ ಎದುರಿಸುತ್ತಿದ್ದು, ಚುನಾವಣೆ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಲು ಮುಂದಾಗಿದ್ದಾರೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ಕ್ಷೇತ್ರದಲ್ಲಿ ನೇರ ಸ್ಪರ್ಧೆ
ಏರ್ಪಟಿದ್ದು, ಎರಡು ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿನ ಹುರುಪು ಲೋಕಸಭೆ ಚುನಾವಣೆಯಲ್ಲಿ ಕಂಡು ಬರುತ್ತಿಲ್ಲ. ಸದ್ಯ ಬಸವಕಲ್ಯಾಣದಲ್ಲಿ ಕಾಂಗ್ರೆಸ್‌ ಪಕ್ಷದ ಬಿ.ನಾರಾಯಣರಾವ್‌ ಶಾಸಕರಾಗಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಬಿ.ನಾರಾಯಣರಾವ್‌ 61,425 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ 44,153 ಮತಗಳನ್ನು ಪಡೆದಿದ್ದರು. ಅಲ್ಲದೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 41,686
ಹಾಗೂ ಬಿಜೆಪಿಗೆ 71,705 ಮತ ಬಂದಿದ್ದವು. ಈ ಬಾರಿ ಕೂಡ ಬಿಜೆಪಿಗೆ ಹೆಚ್ಚು ಮತಗಳು ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಬಿಜೆಪಿ
ಮುಖಂಡರು. ಆದರೆ, ಈ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಅವರಿಗೆ ಹೆಚ್ಚು ಮತಗಳು ಬರಲಿವೆ ಎಂದು ಶಾಸಕ
ಬಿ.ನಾರಾಯಣರಾವ್‌ ಅನೇಕ ಸಭೆಗಳಲ್ಲಿ ಹೇಳುತ್ತಿದ್ದಾರೆ.

ಶರಣರ ನಾಡು ಇಂದಿಗೂ ಹಿಂದುಳಿದ ಪ್ರದೇಶದಂತೆ ಭಾಸವಾಗುತ್ತಿದೆ. ನಗರದ ಪ್ರಮುಖ ರಸ್ತೆಗಳು ಹಾಳಾಗಿದ್ದು, ಪ್ರತಿನಿತ್ಯ ಜನಸಾಮಾನ್ಯರು ಜನಪ್ರತಿನಿಧಿ ಗಳಿಗೆ ಹಿಡಿಶಾಪ ಹಾಕುವುದು ಇಲ್ಲಿ ಸಾಮಾನ್ಯ. ಈ ಹಿಂದಿನ ಕಾಂಗ್ರೆಸ್‌ ಸರ್ಕಾರ
ಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕಾಗಿ 650 ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಈವರೆಗೂ ಒಂದು ನಯಾ ಪೈಸೆ ಅನುದಾನ ಮಂಜೂರು ಮಾಡಿಸುವಲ್ಲಿ ಮೈತ್ರಿ ಪಕ್ಷದವರು ವಿಫಲರಾಗಿದ್ದಾರೆ ಎಂದು
ಇಲ್ಲಿನ ಜನರು ಮತನಾಡಿಕೊಳ್ಳುತ್ತಿದ್ದಾರೆ.

Advertisement

ಅಲ್ಲದೆ, ತಾಲೂಕಿನ ಗೋರ್ಟಾ (ಬಿ) ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಮಾಡುವ ಭರವಸೆ ನೀಡಿದ ಸಂಸದ
ಭಗವಂತ ಖೂಬಾ ಅಧಿಕಾರ ಅವಧಿ ಪೂರ್ಣಗೊಂಡರೂ ಈಡೇರಿಸಿಲ್ಲ ಎಂಬ ಗುರುತರ ಆರೋಪಗಳು ಸಂಸದರ ಮೇಲೆ ಇವೆ. ಶರಣರ ಸ್ಮಾರಕಗಳ ಅಭಿವೃದ್ಧಿಗಾಗಿ ನಿರ್ಮಾಣಗೊಂಡ
ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಮೈತ್ರಿ ಸರ್ಕಾರ ಅನುದಾನ ನೀಡುವಲ್ಲಿ ವಿಫಲವಾಗಿದೆ ಎಂದು ಕೂಡ ರಾಜಕೀಯ ಮುಖಂಡರು ಆರೋಪಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಕಾವು ಹೆಚ್ಚಾದಂತೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅಭ್ಯರ್ಥಿ ಹಾಗೂ ಪಕ್ಷ ಕುರಿತು ಚರ್ಚೆಗಳು ನಡೆಯುತ್ತಿವೆ.

ಬಸವಕಲ್ಯಾಣಕ್ಕೆ ಖಂಡ್ರೆ ಕುಟುಂಬದ ಕೊಡುಗೆ ಇದೆ. ಈ ಹಿನ್ನೆಲೆಯಲ್ಲಿ ಖಂಡ್ರೆ ಪರ ಇಲ್ಲಿನ ಜನರ ಒಲವು ತೋರುತ್ತಿದ್ದಾರೆ. ಅದೇ ರೀತಿ ದೇಶದ ಸೈನಿಕರು ನಡೆಸಿರುವ ಸರ್ಜಿಕಲ್‌ ಸ್ಟ್ರೈಕ್‌ ಕುರಿತು ಯುವಕರಲ್ಲಿ ದೇಶಭಕ್ತಿ ಮೂಡಿಸುವಂತೆ ಮಾಡಿದೆ. ಕಾಂಗ್ರೆಸ್‌ -ಬಿಜೆಪಿ ಎರಡೂ ಪಕ್ಷಗಳ ಸಿದ್ಧಾಂತಗಳ ಕುರಿತು ಗ್ರಾಮೀಣ ಭಾಗದ ಜನರು ಪ್ರತಿನಿತ್ಯ ಚರ್ಚೆ ನಡೆಸುತ್ತಿರುವುದು ಸಾಮಾನ್ಯವಾಗಿದೆ. ಕೇಂದ್ರ ಸರ್ಕಾರ ಜನಪರ ಯೋಜನೆ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ತಾಳಿ ಮಾಡಿ ಯಾವ ಸರ್ಕಾರ ಏನು ಮಾಡುತ್ತಿದೆ? ಎಂದು ಗ್ರಾಮಸ್ಥರು ಕೂಡ ಲೆಕ್ಕಾಚಾರ ಹಾಕುತ್ತಿದ್ದಾರೆ.

ಚುನಾವಣೆ ದಿನ ಸಮೀಪ ಬರುತ್ತಿದ್ದರು ಕೂಡ ಈವರೆಗೆ ಕಲ್ಯಾಣಕ್ಕೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಭೇಟಿ ನೀಡಿಲ್ಲ. ಜಿಲ್ಲೆಯ
ಪ್ರತಿನಿ ಧಿಗಳೇ ಸಂಚರಿಸಿ ಕಾರ್ಯಕರ್ತರ ಸಭೆ ಹಾಗೂ ಸಾರ್ವಜನಿಕವಾಗಿ ಮತಯಾಚನೆ ಮಾಡುತ್ತಿದ್ದಾರೆ. ಒಂದೆಡೆ ಅಭ್ಯರ್ಥಿಗಳು ಪ್ರಚಾರ ನಡೆಸಿದರೆ, ಅಭ್ಯರ್ಥಿಗಳ ಪತ್ನಿಯರು ಕೂಡ ಮಹಿಳೆಯರ ತಂಡದೊಂದಿಗೆ ಮತದಾರರ ಮನೆ-ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಎರಡು ಪಕ್ಷದ ಅಭ್ಯರ್ಥಿಗಳು ಲಿಂಗಾಯತ ಸಮುದಾಯಕ್ಕೆ ಸೇರಿರುವುದರಿಂದ ಬಸವಕಲ್ಯಾಣ ವಿಧಾನಸಭೆ ನಿರ್ಣಾಯಕ ಮತದಾರರಾದ ಲಿಂಗಾಯತ, ಮರಾಠ ಮತ್ತು ಅಲ್ಪಸಂಖ್ಯಾತ ಮತದಾರರು ಮಾತ್ರ ಗೆಲುವಿನ ಗುಟ್ಟು ಇಂದಿಗೂ
ಬಿಟ್ಟುಕೊಟ್ಟಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next