Advertisement

ಬೀದರ್: ಆಟವಾಡಲು ಹೋಗಿ, ಕೆರೆಯಲ್ಲಿ ಬಿದ್ದು ಅಕ್ಕ-ತಮ್ಮ ಸಾವು

08:13 PM Sep 19, 2020 | Mithun PG |

ಬೀದರ್: ಕೆರೆ ಹತ್ತಿರ ಆಟ ಆಡಲು ಹೋಗಿದ್ದ ಅಕ್ಕ ಮತ್ತು ತಮ್ಮ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ನಿಜಾಂಪೂರ ಗ್ರಾಮದಲ್ಲಿ ಶನಿವಾರ ನಡೆದಿದೆ.

Advertisement

ತಾಲೂಕಿನ ಕೋಳಾರ(ಕೆ) ಗ್ರಾಮದ ಅನು ಫಕ್ರು (8) ಮತ್ತು ಆಕೆಯ ತಮ್ಮ ಅರಸು ಫಕ್ರು (6) ಮೃತಪಟ್ಟಿರುವ ದುರ್ದೈವಿಗಳು.

ಶನಿವಾರ ಮಧ್ಯಾಹ್ನದ ಸಮಯದಲ್ಲಿ ಸೈಕಲ್‌ನ ಟೈರ್ ಜತೆ ಆಟ ಆಡಲು ಹೋಗಿ ನೀರು ಪಾಲಾಗಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಇಬ್ಬರು ಮಕ್ಕಳ ಮೃತ ದೇಹಗಳು ಕೆರೆಯಲ್ಲಿ ಪತ್ತೆಯಾಗಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕುರಿತು ನೂತನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next