ಬೀದರ್: ವಿದ್ಯುತ್ ಕಂಬಕ್ಕೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ಬೀದರ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಇಲ್ಲಿನ ಸೋಲಾರ್ ಪ್ಲಾಂಟ್ ಹತ್ತಿರ ಗುರುವಾರ ಬೆಳಿಗ್ಗೆ ಭೀಕರ ರಸ್ತೆ ಅಪಘಾತ ನಡೆದಿದೆ.
ವಾಹನದಲಿದ್ದ ಒಟ್ಟು ಐದು ಜನರಲ್ಲಿ ಮೂವರು ಮೃತಪಟ್ಟಿದ್ದಾರೆ. ಇನ್ನಿಬ್ಬರ ಸ್ಥಿತಿ ಚಿಂತಾಜನಕವಿದ್ದು ಅವರನ್ನು ಬ್ರಿಮ್ಸ್ ಆಸ್ಪತ್ರಗೆ ದಾಖಲು ಮಾಡಲಾಗಿದೆ.
ಯಾಕತಪುರದ ಪ್ರದೀಪ ಶಂಕರ್ ಕೋಲಿ (25), ಚಾಂಗಲೇರಾದ ವಿನೋದ ಕುಮಾರ್ ಪ್ರಭು (25) ಮತ್ತು ಚಾಂಗಲೇರಾದ ವರ್ದಿಶ ಶರಣಪ್ಪ ಬೇಡರ್ (25) ಮೃತಪಟ್ಟಿದ್ದಾರೆ.
ವಾಹನ ಚಾಲಕ ನಿದ್ದೆಯ ಮಂಪರಿನಲ್ಲಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ವರದಿಯಾಗದೆ.