Advertisement

Bidar: ದೇಶದ ಅತಿ ಕಿರಿಯ ಸಂಸದ ಕಾಂಗ್ರೆಸ್ ಸಾಗರ್ ಖಂಡ್ರೆ

07:56 PM Jun 04, 2024 | Team Udayavani |

ಬೀದರ್: ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಸೋಲುಣಿಸಿ ಸಂಸತ್‌ಗೆ ಪ್ರವೇಶಿಸಿರುವ ಬೀದರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ದೇಶದ ಅತಿ ಕಿರಿಯ ಸಂಸದರೆಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

Advertisement

ಅರಣ್ಯ ಸಚಿವ ಈಶ್ವರ ಖಂಡ್ರೆಯವರ ಪುತ್ರರಾಗಿರುವ ಸಾಗರ್ 26 ವರ್ಷದ ಯುವಕರಾಗಿದ್ದು, ಬಿಬಿಎ- ಎಲ್‌ಎಲ್‌ಬಿ ಪದವೀಧರರಾಗಿದ್ದಾರೆ. ಮೊದಲ ಬಾರಿ ಸ್ಪರ್ಧೆಯಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಇನ್ನೂ ಬೀದರ್ ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ ತಮ್ಮ ತಂದೆಯನ್ನು ಸೋಲಿಸಿದ್ದ ಖೂಬಾ ವಿರುದ್ಧ ಕಳೆದ ಸಲಕ್ಕಿಂತ ಅಧಿಕ ಮತಗಳ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

ರಾಜ್ಯ ಯುವ ಕಾಂಗ್ರೆಸ್ ಘಟಕದಲ್ಲಿ ಮುಂಚೂಣಿ ನಾಯಕರಾಗಿ, ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಸಾಗರ್, ತಮ್ಮ ತಂದೆ ಈಶ್ವರ ಅವರ ರಾಜಕೀಯ ಗರಡಿಯಲ್ಲಿ ಪಳಗಿದ್ದಾರೆ. ಸಾಗರ್ ಅವರ ತಾತ ಶತಾಯುಷಿ ಡಾ. ಭೀಮಣ್ಣ ಖಂಡ್ರೆ ಅವರು ಸಹ ಮಾಜಿ ಸಚಿವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next