Advertisement

ಪ.ಬಂಗಾಳದಲ್ಲಿ ಕೆಲಸ ಮಾಡುತ್ತಿದ್ದ ಬೀದರ್ ಮೂಲದ ಬಿಎಸ್ಎಫ್ ಯೋಧ ಸಾವು

01:07 PM Aug 07, 2022 | Team Udayavani |

ಬೀದರ್: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೀದರ್ ಮೂಲದ ಬಿಎಸ್ಎಫ್ ಯೋಧ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.

Advertisement

ಕಮಲನಗರ ತಾಲೂಕಿನ ಮುರ್ಗ (ಕೆ) ಗ್ರಾಮದ ಮಾಧವ ಜಟಿಂಗರಾವ್ ಕಾಲೇಕರ್ (58) ಮೃತಪಟ್ಟ ಯೋಧ. ಕಳೆದ 24 ವರ್ಷಗಳಿಂದ‌ ಬಿಎಸ್ ಎಫ್ ಕಾನ್ಸ್ಟೇಬಲ್ ಆಗಿದ್ದ ಮಾಧವ ಅವರು ಜಮ್ಮು ಕಾಶ್ಮೀರದಲ್ಲಿ ಸೇವೆ ಬಳಿಕ ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಪಶ್ಚಿಮ ಬಂಗಾಳಕ್ಕೆ ವರ್ಗವಾಗಿತ್ತು.

ಸೇವೆಗೆ ಹಾಜರಾಗಲು ತೆರಳಿದ್ದ ಅವರಿಗೆ ರೈಲ್ವೆ ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ತೀವ್ರ ಹೃದಯಾಘಾತ ಕಾರಣ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಶಂಕರನಾರಾಯಣ – ಸಿದ್ದಾಪುರ ಮುಖ್ಯ ರಸ್ತೆ; ಹೊಂಡಗಳಿಂದ ಸವಾರರಿಗೆ ಸಂಕಷ್ಟ

ಮೃತ ಮಾಧವ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬಿಎಸ್ಎಫ್ ಹಿರಿಯ ಅಧಿಕಾರಿಗಳು ಸಾವಿನ ಬಗ್ಗೆ ಕುಟುಂಬಸ್ಥರಿಗೆ ಖಚಿತಪಡಿಸಿದ್ದಾರೆ. ವಿಶೇಷ ವಿಮಾನದ ಮೂಲಕ ತಡರಾತ್ರಿ ಸ್ವಗ್ರಾಮಕ್ಕೆ ಮೃತದೇಹ ಕರೆತರಲಾಗುತ್ತಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next