Advertisement

ಉಳಿತಾಯ ಅನುದಾನ ಕ್ರಿಯಾಯೋಜನೆಗೆ ಅಸ್ತು

04:49 PM Feb 14, 2021 | Team Udayavani |

ಬೀದರ: ಬಾಕಿ ಉಳಿತಾಯದ ಅನುದಾನ 6.52 ಕೋಟಿ ರೂ.ದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಬಳಸಿಕೊಳ್ಳಲು ನಗರದ ಜಿಪಂ ಸಭಾಂಗಣದಲ್ಲಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯು ಅನುಮೋದನೆ ನೀಡಿತು.

Advertisement

ಸಭೆಯಲ್ಲಿ ಇಲಾಖೆಯ ಉಳಿತಾಯ ಅನುದಾನದ ಬಗ್ಗೆ ಚರ್ಚೆ ನಡೆಯಿತು. 13ನೇ ಹಣಕಾಸಿನ ಯೋಜನೆಯಿಂದ 71.39 ಲಕ್ಷ ರೂ., ಅಕ್ಷರ ದಾಸೋಹದಿಂದ 43 ಲಕ್ಷ ರೂ., ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಇರುವ ಅನುದಾನ 2.86 ಕೋಟಿ ರೂ., ಎಂಐದಿಂದ 1.39 ಕೋಟಿ
ರೂ, ಬಿಆರ್‌ ಜಿಎಫ್‌ನಿಂದ 33.65 ಲಕ್ಷ ರೂ., ಅಕ್ಷರ ದಾಸೋಹದಿಂದ 43 ಲಕ್ಷ ರೂ., ಕೆಆರ್‌ಐಡಿಎಲ್‌ ಮತ್ತು ಪಿಆರ್‌ಐನಿಂದ 64.52 ಲಕ್ಷ ರೂ., ಔರಾದ ತಾಲೂಕಿನಲ್ಲಿ ಶಾಲೆಗೆ ರಿಪೇರಿ ಕಾಮಗಾರಿಯಿಂದ ವಾಪಾಸಾಗಿದ್ದು, 13 ಲಕ್ಷ ರೂ. ಸೇರಿ ಒಟ್ಟು 6.52 ಕೋಟಿ ರೂ. ಉಳಿತಾಯದ ಅನುದಾನವನ್ನು ಜಿಪಂ ಸದಸ್ಯರ ಕ್ಷೇತ್ರಗಳಿಗೆ ಹಂಚಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

50 ಕೋಟಿ ಬೆಳೆಹಾನಿ ಪರಿಹಾರ: ಜಿಲ್ಲೆಯಲ್ಲಿ ಈ ಹಿಂದೆ ಅತಿವೃಷ್ಟಿಯಿಂದಾಗಿ ಅಂದಾಜು 2.47 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. 1.03 ಲಕ್ಷ ರೈತ ಫಲಾನುಭವಿಗಳಿಗೆ ಅಂದಾಜು 50 ಕೋಟಿ ರೂ. ನಷ್ಟು ಪರಿಹಾರ ಮೊತ್ತವು ನೇರವಾಗಿ ರೈತರ ಖಾತೆಗಳಿಗೆ
ಈಗಾಗಲೇ ಜಮೆಯಾಗಿದೆ. ಕಂದಾಯ, ತೋಟಗಾರಿಕಾ ಮತ್ತು ಇನ್ನಿತರ ಇಲಾಖೆಗಳ ಜಂಟಿ ಸಮೀಕ್ಷೆ ತರುವಾಯ ಪರಿಹಾರ ಸಾಪ್ಟವೇರ್‌ನಲ್ಲಿ ಎಂಟ್ರಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು 1.02 ಲಕ್ಷ ರೈತರಿಗೆ ಪರಿಹಾರ ಮೊತ್ತ ಜಮೆ ಆಗುವುದು ಬಾಕಿಯಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್‌ ಅವರು ಸಭೆಗೆ ಮಾಹಿತಿ ನೀಡಿದರು.

93 ಕೋಟಿ ರೂ. ಬರಬೇಕಿತ್ತು: ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ. ಎನ್‌ಡಿಆರ್‌ಎಫ್‌ ನಿಯಮಗಳ ಪ್ರಕಾರ ಜಿಲ್ಲೆಗೆ ಅಂದಾಜು 93 ಕೋಟಿ ರೂ. ಬೆಳೆ ಪರಿಹಾರ ಮೊತ್ತ ಬರಬೇಕಿತ್ತು. ರೈತರಿಗೆ ಅನ್ಯಾಯವಾಗದ ಹಾಗೆ ಪರಿಹಾರ ಮೊತ್ತವನ್ನು ನೀಡಬೇಕು
ಎಂದು ಜಿಪಂ ಸದಸ್ಯ ಡಾ| ಪ್ರಕಾಶ ಪಾಟೀಲ ಸಭೆಗೆ ತಿಳಿಸಿದರು. ಕೃಷಿ ಇಲಾಖೆಗೆ 75.89 ಕೋಟಿ ರೂ. ಅನುದಾನ ನಿಗದಿಯಾಗಿತ್ತು. ಈ ಪೈಕಿ
67.83 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 58 ಕೋಟಿ ರೂ. ಖರ್ಚಾಗಿದೆ ಎಂದು ತಿಳಿಸಿದರು.

ಓದಿ : “ಸಮಿತಿಯ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಅಗತ್ಯ’

Advertisement
Advertisement

Udayavani is now on Telegram. Click here to join our channel and stay updated with the latest news.

Next