Advertisement
1914ರಲ್ಲಿ ಒಬ್ಬ ಸ್ಥಳೀಯ ಯುವಕ ಮೊದಲನೇ ಮಹಾಯುದ್ಧಕ್ಕೆ ಹೋಗಿದ್ದ. ಅದಕ್ಕೆ ಮುಂಚೆ ತನ್ನ ಸೈಕಲನ್ನು ಮರಕ್ಕೆ ಕಟ್ಟಿ ಹೋಗಿದ್ದ. ಆ ಯುವಕ ಇನ್ನೆಂದಿಗೂ ಮರಳಿಬಾರದೇ ಇದ್ದುದರಿಂದ ಆ ಸೈಕಲ್ ಮರದಲ್ಲೇ ನೇತಾಡುವಂತಾಯಿತು. ಸುಮಾರು ವರ್ಷಗಳಿಂದ ಬೆಳೆಯುತ್ತಾ ಬಂದ ಮರವು ಸೈಕಲ್‌ನ ಅರ್ಧ ಭಾಗವನ್ನು ನುಂಗಿಹಾಕಿದ್ದು ನೋಡುಗರಿಗೆ ವಿಚಿತ್ರವಾಗಿ ಕಾಣಿಸುತ್ತದೆ. ಅಲ್ಲದೆ ಕಬ್ಬಿಣದ ಸುತ್ತಲೂ ಮರ ಹೇಗೆ ಬೆಳೆಯುತ್ತದೆ ಎಂಬುದೂ ನಂಬಲಾಗದ ಸಂಗತಿಯಾಗಿದೆ.
ಥಾಯ್‌ಲ್ಯಾಂಡ್‌ನ ತಾಮ್ ಲುಯಾಂಗ್ ಗುಹೆಯಲ್ಲಿ ಸಿಲುಕಿದ್ದ ಬಾಲಕರನ್ನು ಇತ್ತೀಚಿಗೆ ರಕ್ಷಿಸಿದ ಘಟನೆ ನೆನಪಿದೆ ತಾನೇ? ಅಂಥದ್ದೇ ಗುಹೆ ನಮ್ಮ ಭಾರತದಲ್ಲೂ ಇದೆ ಎಂದರೆ ಆಶ್ಚರ್ಯವಾಗದೇ ಇರದು. ಅದಿರೋದು ಈಶಾನ್ಯ ರಾಜ್ಯ ಮೇಘಾಲಯದಲ್ಲಿ. “ಕ್ರೆಂಪುರಿ’ ಎಂಬ ಹೆಸರಿನ ಈ ಗುಹೆ ಪ್ರಪಂಚದಲ್ಲೇ ಅತಿ ಉದ್ದವಾದ ಮರಳು ಕಲ್ಲು ಮಿಶ್ರಿತ ಗುಹೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಅದರ ಉದ್ದ 24.5 ಕಿ.ಮೀ. ಈ ಗುಹೆಯ ಉದ್ದವನ್ನು ಕಂಡುಹಿಡಿಯಲು ಅಲ್ಲಿನ ಸರ್ಕಾರ ವಿವಿಧ ದೇಶಗಳ ಸುಮಾರು 30 ಜನರನ್ನು ಒಳಗೊಂಡ ಕೇವರ್ (ಗುಹೆಗಳನ್ನು ಅನ್ವೇಷಣೆ ಮಾಡುವವರು) ಗಳನ್ನು ಕರೆಸಿತ್ತು. ಗುಹೆಯ ಉದ್ದವನ್ನು ಅಳೆಯಲು ಈ ತಂಡ ತೆಗೆದುಕೊಂಡ ಕಾಲಾವಧಿ ಸುಮಾರು ಒಂದು ತಿಂಗಳು.
Related Articles
Advertisement
ವೆಂಕಿ