Advertisement

ಬಿಕರಿಯಾಗದ ಅದಿರಿನ ಪ್ರಮಾಣ 2.24 ಮಿ.ಟನ್‌!

06:33 AM May 06, 2019 | Team Udayavani |

ನವದೆಹಲಿ: 2018 -19ರ ಆರ್ಥಿಕ ವರ್ಷದಲ್ಲಿ ಕರ್ನಾಟಕದಲ್ಲಿ 2.24 ದಶಲಕ್ಷ ಟನ್‌ನಷ್ಟು ಕಬ್ಬಿಣದ ಅದಿರು, ಮಾರಾಟವಾಗದೇ ಉಳಿದಿದೆ ಎಂದು ಕರ್ನಾಟಕ ಕಬ್ಬಿಣ ಮತ್ತು ಉಕ್ಕು ತಯಾರಕರ ಸಂಸ್ಥೆ (ಕೆಐಎಸ್‌ಎಂಎ) ಹೇಳಿದೆ. ವಿವಿಧ ಗಣಿಗಾರಿಕೆ ಕಂಪನಿಗಳು, ತಾವು ಉತVನನ ಮಾಡಿ ತೆಗೆದ ಕಬ್ಬಿಣದ ಅದಿರಿಗೆ, ದುಬಾರಿ ದರ ವಿಧಿಸಿದ್ದು ಹಾಗೂ ಅದಿರಿನ ಗುಣಮಟ್ಟದಲ್ಲಿ ಇಳಿಮುಖವಾಗಿದ್ದು ಈ ಬೆಳವಣಿಗೆಗೆ ಕಾರಣ ಎಂದು ಕೆಐಎಸ್‌ಎಂಎ ಹೇಳಿದೆ.

Advertisement

2018-19ರ ವರ್ಷದಲ್ಲಿ ಕರ್ನಾಟಕದಲ್ಲಿ ಒಟ್ಟಾರೆ 28.29 ಮಿಲಿಯನ್‌ ಟನ್‌ನಷ್ಟು ಕಬ್ಬಿಣದ ಅದಿರು ಸಂಗ್ರಹವಾಗಿದೆ. ಇದರಲ್ಲಿ ಮಾರಾಟವಾಗಿದ್ದು 26.25 ಮಿಲಿಯನ್‌ ಟನ್‌. ಅಂದರೆ, 2.24 ಮಿಲಿಯನ್‌ ಟನ್‌ನಷ್ಟು ಅದಿರು ಮಾರಾಟವಾಗದೇ ಹಾಗೆಯೇ ಉಳಿದಿದೆ ಎನ್ನಲಾಗಿದೆ.

“2017-18ನೇ ವರ್ಷದಲ್ಲಿ ಕರ್ನಾಟಕದಲ್ಲಿ ಒಟ್ಟಾರೆ 27.7 ಮಿಲಿಯನ್‌ ಟನ್‌ ಅದಿರು ಸಂಗ್ರಹವಾಗಿತ್ತು. ಆದರೆ, ಅದೆಲ್ಲವೂ ಮಾರಾಟವಾಗಿ, ಅದರ ಹಿಂದಿನ ವರ್ಷದ ಸಂಗ್ರಹದಲ್ಲಿ ಮಾರಾಟವಾಗದೇ ಉಳಿದಿದ್ದ ಅದಿರಿನ ದಾಸ್ತಾನಿನಿಂದಲೂ 0.2 ಮಿಲಿಯನ್‌ ಟನ್‌ನಷ್ಟು ಅದಿರನ್ನು ಮಾರಾಟ ಮಾಡಲಾಗಿತ್ತು.

ಆದರೆ, 2017-18ನೇ ವರ್ಷದಲ್ಲಿ ವ್ಯವಹಾರಕ್ಕೆ ಹಿನ್ನಡೆಯಾಗಿದೆ. ಇದಕ್ಕೆ ತಾವು ಹೊರತಗೆದ ಅದಿರಿನ ಗುಣಮಟ್ಟ ಸರಿಯಿಲ್ಲದಿದ್ದರೂ ಅದಕ್ಕೆ ಹೆಚ್ಚಿನ ದರವನ್ನು ಗಣಿಗಾರಿಕೆ ಕಂಪನಿಗಳು ವಿಧಿಸುತ್ತಿರುವುದೇ ಕಾರಣ’ ಎಂದು ಕೆಎಸ್‌ಐಎಂಎ ಹೇಳಿರುವುದಾಗಿ “ದ ಹಿಂದೂ ಬ್ಯುಸಿನೆಸ್‌ ಲೈನ್‌’ ಜಾಲತಾಣ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next