Advertisement
ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಗುರು ಮತ್ತು ಇಂಗ್ಲಿಷ್ ಹೊಸ ಒಡಂಬಡಿಕೆಯನ್ನು ಕೊಂಕಣಿ ಭಾಷೆಗೆ ಭಾಷಾಂತರಿಸಿ ವಂ| ಡಾ| ವಿಲಿಯಂ ಬಬೋìಜಾ ಮಾತನಾಡಿ, “ಬೈಬಲ್ ಆಲಿಸಿ, ಬೈಬಲ್ ಓದಿ, ಬೈಬಲ್ ಅಧ್ಯಯನ ಮಾಡಿ, ಬೈಬಲ್‌ನಲ್ಲಿ ಪ್ರಾರ್ಥಿಸಿ ಮತ್ತು ಬೈಬಲ್ ಅನ್ನೇ ಜೀವಿಸಿ.’ ಸುಮಾರು 40 ವರ್ಷಗಳ ಹಿಂದೆ ಮಂಗಳೂರು ಬಂದರಿಗೆ ಬಂದ ಲೋಗೋಸ್ ಶಿಪ್‌ನಲ್ಲಿ ಸೆಟ್ ಮಾಡಿದ ಬೈಬಲ್ ಲೈಬ್ರೆರಿಯಲ್ಲಿ ಕೇಳಿದ ಈ ಸುಂದರವಾದ ಪದಗಳು ನೆನಪಿಗೆ ಬರುತ್ತವೆ. ಈ ಮಾತು ನಮ್ಮ ಜೀವನವನ್ನು ಸಮೃದ್ಧಗೊಳಿಸುತ್ತದೆ ಎಂದು ಹೇಳಿದರು.
Related Articles
ವಂ| ರೂಪೇಶ್, ಸ್ವಯಂಸೇವಕರಲ್ಲಿ ಒಬ್ಬರಾದ ಟ್ರೆಸ್ಸಿ ಡಿಸೋಜಾ ಅವರು ಮಾತನಾಡಿದರು.
Advertisement
ಜ.28ರವರೆಗೆ ಪ್ರದರ್ಶನಪ್ರದರ್ಶನದಲ್ಲಿ ಬೈಬಲ್ ವ್ಯಾಖ್ಯಾನಗಳು, ಕೈಬರಹದ ಬೈಬಲ್‌ಗಳು, ದೊಡ್ಡಗಾತ್ರದ ಬೈಬಲ್, ಬೈಬಲ್ ಕಲೆ, ಬೈಬಲ್ ಚಿತ್ರಗಳು, ಪ್ರತಿಮಾಶಾಸ್ತ್ರ, ಭಾರತೀಯ ಕಲೆ ಮತ್ತು ಬೈಬಲ್ ಇತಿಹಾಸಗಳ ಪ್ರದರ್ಶನ ಸೇರಿದಂತೆ ಪ್ರಾದೇಶಿಕ ಮತ್ತು ಸ್ಥಳೀಯ ಭಾಷೆಗಳನ್ನು ಒಳಗೊಂಡ ಬೈಬಲ್ ಪ್ರತಿಗಳ ವಿಭಿನ್ನ ಅನುವಾದಗಳನ್ನು ಪ್ರದರ್ಶಿಸಲಾಯಿತು. ಪದ್ಯಗಳು, ಬೈಬಲ್ ವರ್ಣಚಿತ್ರಗಳು ಮತ್ತು ಪ್ರಮುಖ ಬೈಬಲ್ ಘಟನೆಗಳ ಪ್ರದರ್ಶನ ಇತ್ತು. ಪ್ರದರ್ಶನವು ಜ.28ರವರೆಗೆ ಬೆಳಗ್ಗೆ 9 ರಿಂದ ಸಂಜೆ 7 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರತಿದಿನ ಸಂಜೆ 4.30ರಿಂದ 7ರವರೆಗೆ ಬೈಬಲ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜ.28ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಂತ ಅಂತೋನಿ ದತ್ತಿ ಸಂಸ್ಥೆಗಳ ಸಂಚಾಲಕ ಹಾಗೂ ವಸ್ತು ಪ್ರದರ್ಶನದ ಸಂಚಾಲಕ ವಂ| ಜೆ.ಬಿ.ಕ್ರಾಸ್ತಾ, ಜಪ್ಪುವಿನ ಸೇಂಟ್ ಜೋಸೆಫ್ ಸೆಮಿನರಿಯ ರೆಕ್ಟರ್ ವಂ| ಡಾ| ರೊನಾಲ್ಡ್ ಸೆರಾವೊ, ಸಣ್ಣ ಕ್ರೆçಸ್ತ ಸಮುದಾಯದ ಸಂಚಾಲಕ ವಂ| ಜೋಕಿಮ್ ಫೆನಾಂìಡಿಸ್, ಕೆನರಾ ಕಮ್ಯುನಿಕೇಷನ್ ಸೆಂಟರ್ ನಿರ್ದೇಶಕ ವಂ| ಅನಿಲ್ ಫೆನಾಂìಡಿಸ್, ಧರ್ಮಕ್ಷೆತ್ರದ ಸುವಾರ್ತ ಪ್ರಸಾರ ಆಯೋಗದ ಕಾರ್ಯದರ್ಶಿ ಮತ್ತು ಕಾರ್ಯಕ್ರಮದ ಸಂಯೋಜಕ ವಂ| ರೂಪೇಶ್ ತಾವ್ರೊ, ´ೋರ್‌ವಿಂಡ್ಸ್ ಜಾಹಿರಾತು ಸಂಸ್ಥೆಯ ನಿರ್ದೇಶಕ ಏಲಿಯಾಸ್ ಫೆನಾಂìಡಿಸ್, ಸಂತ ಅಂತೋನಿ ಆಶ್ರಮದ ಸಹಾಯಕ ನಿರ್ದೇಶಕ ವಂ| ಲ್ಯಾರಿ ಪಿಂಟೊ, ಮತ್ತು ಆರ್ಸುಲಾಯ್ನ ಸಿ| ಡೋರೀನ್ ಹಾಗೂ ಅನೇಕ ಧಾರ್ಮಿಕ ಸಹೋದರಿಯರು, ಯುವಜನರು ಮತ್ತು ಸಂತ ಅಂತೋನಿ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.