Advertisement

ಮಹದಾಯಿ ವಿಚಾರದ ಬಗ್ಗೆ ಅಧ್ಯಯನ ಮಾಡಲು ಹೆಚ್ಚಿನ ಕಾಲಾವಕಾಶ ಬೇಕಿದೆ: ಭೂಪೇಂದ್ರ ಯಾದವ್

06:14 PM Feb 05, 2023 | Team Udayavani |

ಪಣಜಿ: ಮಹದಾಯಿ ಕುರಿತು ಪ್ರತಿಕ್ರಿಯಿಸಲು ನಾನು ವೈಜ್ಞಾನಿಕ ತಜ್ಞನಲ್ಲ, ಮಹದಾಯಿ ನೀರು ತಿರುವು ವಿಚಾರವನ್ನು ಅಧ್ಯಯನ ಮಾಡಲು ಸಮಯ ಬೇಕು. ಮಹದಾಯಿ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದಾಗಿ ಕೇಂದ್ರ ಪರಿಸರ, ಅರಣ್ಯ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.

Advertisement

ಪಣಜಿಯ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ದೇಶದ ಮೇಲೆ ದೀರ್ಘಾವಧಿ ಪರಿಣಾಮ ಬೀರಲಿದೆ. ಮಹದಾಯಿ ನದಿ ನೀರು ಸಮಸ್ಯೆಯ ಕುರಿತು ಹೆಚ್ಚು ಮಾತನಾಡಲು ಅವರು ನಿರಾಕರಿಸಿದರು.

ಪತ್ರಕರ್ತರು ಸಚಿವರಿಗೆ ಮಹದಾಯಿ ವಿಷಯವಾಗಿ ಪ್ರಶ್ನೆಗಳ ಸುರಿಮಳೆಗೈದರೂ ಸತ್ಯಗಳ ಆಧಾರದ ಮೇಲೆ ಅಧ್ಯಯನ ಮಾಡೋಣ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹೇಳಿದರು. ಮಹದಾಯಿ ವಿಚಾರವಾಗಿ ಸಮಗ್ರವಾಗಿ ಅಧ್ಯಯನ ನಡೆಸಲು ಹೆಚ್ಚಿನ ಸಮಯಬೇಕು ಎಂದು ಹೇಳುವ ಮೂಲಕ ಮಹದಾಯಿ ವಿಚಾರಚಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಮೂರು ತಿಂಗಳು ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತಾಡಲ್ಲ… ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ

Advertisement

Udayavani is now on Telegram. Click here to join our channel and stay updated with the latest news.

Next