ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಲ್ಲಿ ಶರಣಾದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ಶನಿವಾರ ನಡೆದಿದೆ.
Advertisement
ಚಿಕ್ಕಬಾಗಿಲು ಗ್ರಾಮದ ಗಿರೀಶ್ (29) ಕೊಲೆ ಆರೋಪಿ. ಈತ ಮತ್ತು ಪಶುಪತಿ ಇಬ್ಬರೂ ಸ್ನೇಹಿತರಾಗಿದ್ದರು. ಮೂರು ದಿನಗಳ ಹಿಂದೆ ಪಶುಪತಿ ತಾಯಿಗೆ ಗಿರೀಶ್ ಕೆಟ್ಟದಾಗಿ ಸನ್ನೆ ಮಾಡಿದ್ದ ಎನ್ನಲಾಗಿದೆ. ಇದಕ್ಕೆ ಪಶುಪತಿ ದ್ವೇಷ ಕಾರುತ್ತಿದ್ದ. ಬಳಿಕ, ಗಿರೀಶ, “ನಾನು ನಿನ್ನ ತಾಯಿಯನ್ನು ಬೈದಿಲ್ಲ, ಕೆಟ್ಟದಾಗಿ ನಡೆದುಕೊಂಡಿಲ್ಲ’ ಎಂದು ಕರ್ಪೂರ ಮುಟ್ಟಿ ಪ್ರಮಾಣ ಮಾಡಿ ಆತನಿಗೆ ಮನವರಿಕೆ ಮಾಡಿಕೊಟ್ಟಿದ್ದ. ಆದರೂ ಪಶುಪತಿಯ ದ್ವೇಷ ಕಡಿಮೆ ಯಾಗಲಿಲ್ಲ. ಗಿರೀಶನನ್ನು ಕೊಲೆ ಮಾಡಲು ಆತ ಹೊಂಚು ಹಾಕಿದ್ದ. ಶುಕ್ರವಾರ ರಾತ್ರಿ ಗಿರೀಶ್‌ನ ಮನೆಗೆ ಬಂದು, ಸಿನಿಮಾ ನೋಡಲು ಹೋಗೋಣ ಬಾ ಎಂದು ಕರೆ ದಿದ್ದ. ಆದರೆ, ಗಿರೀಶ್ ಮಳೆ ಬರುವ ಹಾಗಿದೆ.ಇವತ್ತು ಹೋಗೋದು ಬೇಡ ಎಂದಿದ್ದ.
ಕ್ಷಣಕಾಲ ಆತಂಕಗೊಂಡರು. ತಕ್ಷಣವೇ ಆತನನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದೊಯ್ದರು. ಸ್ನೇಹಿತನಾಗಿದ್ದುಕೊಂಡು ನನ್ನ ತಾಯಿಯನ್ನೇ ಕೆಟ್ಟ ದೃಷ್ಟಿಯಿಂದ ನೋಡಿದ. ಅದಕ್ಕೇ ಅವನನ್ನು ಕೊಲೆ ಮಾಡಿ ರುಂಡವನ್ನು ಕತ್ತರಿಸಿ ತಂದಿದ್ದೇನೆಂದು ಹೇಳಿಕೆ ನೀಡಿದ್ದಾನೆ.