Advertisement

ಪ್ರಾಣಿ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿಗೆ ಭೂಮಿ ಪೂಜೆ

02:10 PM Jul 03, 2022 | Team Udayavani |

ಮಹದೇವಪುರ: ಕೆರೆ, ರಾಜಕಾಲುವೆ, ಪಾದಚಾರಿ ಮಾರ್ಗಗಳು ವಿವಿಧೆಡೆ  ಎಸೆಯುತ್ತಿರುವ ಮಾಂಸದ ತ್ಯಾಜ್ಯಗಳಿಂದ ವೈಜ್ಞಾನಿಕ ರೀತಿಯಲ್ಲಿ ಪ್ರಾಣಿಗಳ ಆಹಾರ ಹಾಗೂ ಜೈವಿಕ ಗೊಬ್ಬರಗಳಿಗೆ ಕಚ್ಚಾ ವಸ್ತುಗಳನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.

Advertisement

ಕ್ಷೇತ್ರದ ಕಣ್ಣೂರು ಗ್ರಾ.ಪಂ ವ್ಯಾಪ್ತಿಯ ಹೊಸೂರು ಬಂಡೆ ಸಮೀಪ ಬಾನ (BANA) ಇಕೋ ವರ್ಕ್ ವತಿಯಿಂದ ಪಿಪಿಪಿ ಮಾದರಿಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಪ್ರಾಣಿ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿಗೆ  ಭೂಮಿ ಪೂಜೆ ಸಲ್ಲಿಸಿ  ಮಾತನಾಡಿದರು.

ಕ್ಷೇತ್ರದ ಎಲ್ಲಾ ಮಾಂಸದ ಅಂಗಡಿಗಳಿಂದ ತ್ಯಾಜ್ಯವನ್ನು ನೇರವಾಗಿ ಸಂಗ್ರಹಿಸಿ ನಿರ್ವಹಣಾ ಘಟಕದಲ್ಲಿ ಪರಿಷ್ಕರಿಸಿ ವೈಜ್ಞಾನಿಕ ರೀತಿಯಲ್ಲಿ ಪ್ರಾಣಿಗಳ ಆಹಾರ ಹಾಗೂ ಜೈವಿಕ ಗೊಬ್ಬರಗಳಿಗೆ ಕಚ್ಚಾ ವಸ್ತುಗಳನ್ನಾಗಿ ಪರಿವರ್ತಿಸಲಾಗುತ್ತದೆ ಇದರಿಂದಾಗಿ ಕೆರೆ, ರಾಜಕಾಲುವೆ, ಪಾದಚಾರಿ ಮಾರ್ಗ ಅಂಡರ್ಪಾಸ್ ಗಳು ಹೀಗೆ ವಿವಿಧೆಡೆ ಎಸೆಯುತ್ತಿರುವ ಮಾಂಸದ ತ್ಯಾಜ್ಯಗಳಿಂದ ಮುಕ್ತಿ ಸಿಗಲಿದೆ ಎಂದರು.

ಇದನ್ನೂ ಓದಿ:ಲೈಂಗಿಕ ಕಿರುಕುಳ: ಮಹಿಳಾ ಅಂಡರ್ 17 ತಂಡದ ಕೋಚ್ ಅಲೆಕ್ಸ್ ರನ್ನು ವಜಾಗೊಳಿಸಿದ ಫೆಡರೇಶನ್

ನಮ್ಮ ಮಹದೇವಪುರ ಕ್ಷೇತ್ರವು ಈ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ಕಲ್ಪಿಸಿದ ಕರ್ನಾಟಕದ ಮೊದಲ ವಿಧಾನ ಸಭಾ ಕ್ಷೇತ್ರವಾಗಿದೆ. ಈ ಸಮಾಜಮುಖಿ ಕಾರ್ಯವನ್ನು ಮಹದೇವಪುರ ಟಾಸ್ಕ್ ಫೋರ್ಸ್ ಫಾರ್ ಎನ್ವಿರೋನ್ಮೆಂಟ್ ಮತ್ತು ಖಾಸಗಿ ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

Advertisement

ಮುಂದಿನ ಐದು ತಿಂಗಳುಗಳಲ್ಲಿ 20 ಟನ್ ಪ್ರಾಣಿ ತ್ಯಾಜ್ಯ ನಿರ್ವಹಣೆ ಕಾರ್ಯ ಆರಂಭವಾಗಲಿದ್ದು, ಕ್ರಮೇಣವಾಗಿ ಮೂರು ಹಂತಗಳಲ್ಲಿ ಅದನ್ನು 60 ಟನ್ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಇಒ ಮಂಜುನಾಥ್, ಗ್ರಾ.ಪಂ ಅಧ್ಯಕ್ಷೆ ಮುನಿಅಕ್ಕಯಮ್ಮ, ಉಪಾಧ್ಯಕ್ಷ ಅಶೋಕ್‌, ಮುಖಂಡರಾದ ನಟರಾಜ್, ಅನಂದ್,ನಾಗರಾಜ್ .ರಾಜೇಶ್  ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next